ಹುಬ್ಬಳ್ಳಿ: ಅಲ್ಲಿಯೇ ಲಾಟರಿ ಅಲ್ಲೇ ಡ್ರಾ ಎಂಬಂತೆ ಸರಿಯಾಗಿ ಕರ್ತವ್ಯ ನಿರ್ವಹಿಸದೆ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿದ್ದ ಶಾಲಾ ಮುಖ್ಯ ಶಿಕ್ಷಕರೊಬ್ಬರಿಗೆ ಸ್ಥಳದಲ್ಲೇ ಗೇಟ್ ಪಾಸ್ ನೀಡಿದ್ದಾರೆ ಸಚಿವ ಸಂತೋಷ್ ಲಾಡ್. 


COMMERCIAL BREAK
SCROLL TO CONTINUE READING

ಹೌದು, ಧಾರವಾಡ ಜಿಲ್ಲಾ ಉಸ್ತುವಾರಿ ಸಂತೋಷ ಲಾಡ್ ಅವರು ಶಾಲಾ ಮುಖ್ಯ ಶಿಕ್ಷಕರೊಬ್ಬರಿಗೆ "ನಾಳೆಯಿಂದ ಶಾಲೆಗೆ ಬರಬೇಡ್ರಿ ಸರ್" ಅಂತಾ ಹೇಳಿದ್ದಾರೆ. ಇಂತಹ ಒಂದು ಘಟನೆ ನಡೆದಿರುವುದು ಹುಬ್ಬಳ್ಳಿ ಸಮೀಪದ ಕಲಘಟಗಿ ತಾಲ್ಲೂಕಿನ ಮುಕ್ಕಲ ಎಂಬ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ. 


ನಿನ್ನೆ (ಅಕ್ಟೋಬರ್ 30, 2023 ಸೋಮವಾರ) ಮುಕ್ಕಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ, ಜಿಲ್ಲಾ ಉಸುವಾರಿ ಸಚಿವರೊಂದಿಗೆ ತಮ್ಮ ಊರಿನ ಶಾಲೆಯ ಕುಂದು ಕೊರತೆ ಬಗ್ಗೆ ದನಿ ಎತ್ತಿದ ಗ್ರಾಮಸ್ಥರು ನಮಗೆ ಈ ಹೆಡ್ ಮಾಸ್ಟರ್ ಬೇಡಪ್ಪೋ ಬೇಡ್ವಾ ಎಂದು ಕೂಗಿದರು. 


ಇದನ್ನೂ ಓದಿ- GK Quiz: ವಿಶ್ವದ ಯಾವ ದೇಶ ಇದುವರೆಗೆ ಗುಲಾಮಗಿರಿಯನ್ನು ಅನುಭವಿಸಿಲ್ಲ?


ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಮುಕ್ಕಲ್ ಗ್ರಾಮದ ಶಾಲೆ ಒಂದರಲ್ಲಿ ಕಲಿಯುವ ಮಕ್ಕಳು ಹಾಗೂ ಪಾಲಕರು ನಮಗೆ ಈ  ಹೆಡ್ ಮಾಸ್ಟರ್ ಬೇಡ್ವಪ್ಪ. ಈ ಬೂಪ ಪಸ್ಟ್ ಸೆಮಿಸ್ಟರ ಆರು ತಿಂಗಳಾದರು ಎರಡೆ ಎರಡು ಪಾಠ ಮಾಡಿದ್ದಾನೆ. ಈತನಿಗೆ ಪಗಾರಾದರು (ಸಂಬಳ)  ಯಾವ ರೀತಿ ಸಿಗತಾ ಇದೆ. ಸಂಬಂಧ ಪಟ್ಟ ಅಧಿಕಾರಿಗಳು ಕಡಲೆ ಪುರಿ ತಿನ್ನುತ್ತಿದ್ದಾರಾ. ಮೊದಲು ಈತನನ್ನು ಶಾಲೆಯಿಂದ ಕಳುಹಿಸಿ ಎಂದು ಸರಿಯಾಗಿ ಕರ್ತವ್ಯ ನಿರ್ವಹಿಸದೆ ಮಕ್ಕಳ ಭವಿಷ್ಯದೊಂದಿಗೆ ಚೆಲ್ಲಾಟ ಆಡುತ್ತಿರುವ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ಗ್ರಾಮಸ್ಥರು ದೂರು ನೀಡಿದರು. 


ಇದನ್ನೂ ಓದಿ- GK Quiz: ವಿಶ್ವದ ಅತ್ಯಂತ ಹೆಚ್ಚು ಬೆಲೆಬಾಳುವ ಕೋಹಿನೂರ್ ವಜ್ರ ಎಲ್ಲಿ ಪತ್ತೆಯಾಗಿತ್ತು?


ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳ ದೂರಿಗೆ ತಕ್ಷಣವೇ ಸ್ಪಂಧಿಸಿದ ಸಚಿವ ಸಂತೋಷ್ ಲಾಡ್, ಗುರುಗಳೆ ನಾಳೆಯಿಂದ ತಾವು  ಸ್ಕೂಲ್ ಗೆ ಬರಬೇಡ್ರಿ ಎಂದು ತಾಕೀತು ಮಾಡಿದರು. ಅಷ್ಟೇ ಅಲ್ಲದೆ, ಶಾಲೆಗೆ ಅಗತ್ಯವಿರುವ ಶಿಕ್ಷಕರನ್ನು ಕೂಡಲೇ ನೇಮಿಸುವುದಾಗಿ ಭರವಸೆ ನೀಡಿದರು. 


ಸಚಿವರ ತಕ್ಷಣದ ಕ್ರಮದಿಂದ ಸಂತಸಗೊಂಡ ಸಭೆಯಲ್ಲಿ ನೆರೆದಿದ್ದ ಗ್ರಾಮಸ್ಥರು, ಇದ್ದರ ಇಂತಾ ಮಿನಿಸ್ಟರ್ ಇರಬೇಕ್ ಪಾ...  ಆದರು ನಮ್ಮ  ಕಲಘಟಗಿ ತಾಲೂಕಿನ ಜನರು  ಸಂತೋಷ ಲಾಡರನ್ನ ಆರಿಸಿ ತಂದಿದ್ದು ಸಾರ್ಥಕವಾಯಿತು. ಒಳ್ಳೆಯವರಿಗೆ ಇವರು ಇಲ್ಲಿಯೆ ವರ ಹಾಗೇಯೆ ತಪ್ಪು ಮಾಡಿದರೆ ಇಲ್ಲಿಯೆ ಶಾಪ ಕೊಡತಾರೆ ಎಂಬುದನ್ನ ಪ್ರತಕ್ಷವಾಗಿಯೆ ಕಂಡೆವು ಎಂದು ಸಂತಸ ವ್ಯಕ್ತಪಡಿಸಿದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.