ಪೋಷಕರೇ ಗಮನಿಸಿ ! ಶೈಕ್ಷಣಿಕ ವ್ಯವಸ್ಥೆಯಲ್ಲಿ ಮೇಜರ್ ಸರ್ಜರಿ : ಮುಂದಿನ ತರಗತಿಗೆ ಹೋಗಬೇಕಾದರೆ ಇಷ್ಟು ಅಂಕ ತೆಗೆಯಲೇ ಬೇಕು ! 5 ರಿಂದ 8ನೇ ತರಗತಿವರೆಗೂ ಇದು ಅನ್ವಯ
ಇನ್ನು ಮುಂದೆ 5 ಮತ್ತು 8ನೇ ತರಗತಿಯಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ಅನುಕಂಪದ ಆಧಾರದಲ್ಲಿ ಪಾಸ್ ಮಾಡುವುದಿಲ್ಲ. 5 ಮತ್ತು 8ನೇ ತರಗತಿಯಲಿ ಫೈಲ್ ಆದರೆ ಅಂಥಹ ವಿದ್ಯಾರ್ಥಿಗಳಿಗೆ 2 ತಿಂಗಳು ಆವಕಾಶ ನೀಡಲಾಗುತ್ತದೆ.
ಬೆಂಗಳೂರು : ನೋ ಡಿಟೆನ್ಶನ್ ಪಾಲಿಸಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ. ಅಂದರೆ ಇನ್ನು ಮುಂದೆ 5 ಮತ್ತು 8ನೇ ತರಗತಿಯಲ್ಲಿ ವಿದ್ಯಾರ್ಥಿಗಳು ಅನುತ್ತೀರ್ಣರಾದರೆ ಅನುಕಂಪದ ಆಧಾರದಲ್ಲಿ ಪಾಸ್ ಮಾಡುವುದಿಲ್ಲ. 5 ಮತ್ತು 8ನೇ ತರಗತಿಯಲಿ ಫೈಲ್ ಆದರೆ ಅಂಥಹ ವಿದ್ಯಾರ್ಥಿಗಳಿಗೆ 2 ತಿಂಗಳು ಆವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ ಮತ್ತೆ ಪುನರ್ ಪರೀಕ್ಷೆ ಬರೆದು ಪಾಸ್ ಆಗಬೇಕು. ಇಲ್ಲಿ ಪಾಸ್ ಆದರೆ ಮಾತ್ರ ಮುಂದಿನ ತರಗತಿಗೆ ಹೋಗಲು ಅವಕಾಶ ಕಲ್ಪಿಸಲಾಗುವುದು. ಒಂದು ವೇಳೆ ಮರು ಪರೀಕ್ಷೆಯಲ್ಲಿಯೂ ಅನುತ್ತೀರ್ಣರಾದರೆ ಮತ್ತೆ ಅದೇ ತರಗತಿಯಲ್ಲಿ ಓದಬೇಕು. ಆದರೆ, ಮಗುವಿನ ಹೆಸರನ್ನು ಶಾಲೆಯಿಂದ ತೆಗೆಯುವಂತಿಲ್ಲ.
ಈ ಸಂಬಂಧ ಕೇಂದ್ರ ಶಿಕ್ಷಣ ಸಚಿವಾಲಯ ಮಹತ್ವದ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಸೆಂಟ್ರಲ್ ಗವರ್ನಮೆಂಟ್ ಅಧೀನದಲ್ಲಿ ಬರುವ ಶಾಲೆಗಳಲ್ಲಿ ಈ ನಿಯಮ ಕಡ್ಡಾಯಗೊಳಿಸಲಾಗಿದೆ. ನವೋದಯ ಶಾಲೆ, ಸೈನಿಕ ಶಾಲೆಗಳಲ್ಲಿ ಈ ನಿಮಯ ಕಡ್ಡಾಯವಾಗಿ ಜಾರಿ ಬರಲಿದೆ. ಆದರೆ ರಾಜ್ಯದ ಅನುದಾನಿತ ಶಾಲೆಗಳಲ್ಲಿ ಈ ರೂಲ್ಸ್ ಜಾರಿ ಮಾಡುವ ಹಕ್ಕು ಆಯಾ ರಾಜ್ಯ ಸರ್ಕಾರ ನಿರ್ಧಾರಕ್ಕೆ ಬಿಟ್ಟದ್ದು. ಶಾಲಾ ಶಿಕ್ಷಣವು ರಾಜ್ಯದ ವಿಷಯವಾಗಿರುವುದರಿಂದ, ರಾಜ್ಯಗಳು ತಮ್ಮದೇ ಆದ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರವಾಗಿವೆ. ಈಗಾಗಲೇ, 16 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು 5 ಮತ್ತು 8 ನೇ ತರಗತಿಗಳಿಗೆ ಈ ನೀತಿಯನ್ನು ಕೈ ಬಿಟ್ಟಿವೆ.
ಇದನ್ನೂ ಓದಿ : ನ್ಯೂ ಇಂಡಿಯ ಅಶುರನ್ಸ್ ಕಂಪನಿ ಲಿಮಿಟೆಡ್ ನಲ್ಲಿರುವ 500 ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ನೋ-ಡೆಟೆನ್ಷನ್ ನೀತಿ ಎಂದರೇನು? :
ಶಿಕ್ಷಣ ಹಕ್ಕು ಕಾಯಿದೆಯಡಿ ನೋ-ಡೆಟೆನ್ಷನ್ ನೀತಿಯ ಪ್ರಕಾರ, 1 ರಿಂದ 8 ನೇ ತರಗತಿ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸುವವರೆಗೆ ಯಾವುದೇ ವಿದ್ಯಾರ್ಥಿಯನ್ನು ಪರೀಕ್ಷೆಯಲ್ಲಿ ಫೇಲ್ ಮಾಡುವ ಹಾಗೆ ಇರಲಿಲ್ಲ. ಆದರೆ ಕೇಂದ್ರ ಸರ್ಕಾರ ಈಗ ಈ ನೀತಿಯನ್ನು ರದ್ದು ಮಾಡಿದೆ.
ಡಿಸೆಂಬರ್ 2010 ರಲ್ಲಿ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ತಿದ್ದುಪಡಿ ಮಾಡಿದ ನಂತರ ಜಾರಿಗೆ ತರಲಾಯಿತು. ಈ ನೀತಿಯನ್ನು ಜಾರಿಗೆ ತಂದಾಗ, ಅದರ ಬಗ್ಗೆ ಅನೇಕ ಪ್ರಶ್ನೆಗಳನ್ನು ಎತ್ತಲಾಯಿತು. ಏಕೆಂದರೆ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ನಂತರವೂ ಮುಂದಿನ ತರಗತಿಗೆ ಬಡ್ತಿ ಪಡೆಯುವ ಪದ್ದತಿ ನಿಜಕ್ಕೂ ವಿಚಿತ್ರವಾಗಿತ್ತು.
ತಮಿಳುನಾಡಿನಲ್ಲಿ 'ನೋ ಫೇಲ್ಯೂರ್ ನೀತಿ' ಮುಂದುವರಿಕೆ :
ಪರೀಕ್ಷೆಯಲ್ಲಿ ಅನುತ್ತೀರ್ಣರಾದ 5-8 ನೇ ತರಗತಿಯ ವಿದ್ಯಾರ್ಥಿಗಳಿಗೆ 'ನೋ ಫೇಲ್ಯೂರ್ ನೀತಿ'ಯನ್ನು ತಮಿಳುನಾಡು ಮುಂದುವರಿಸಲಿದೆ. ಕಳೆದ ವರ್ಷವೇ ಈ ನೀತಿಯನ್ನು ದೆಹಲಿ ಸರ್ಕಾರ ಕೊನೆಗೊಳಿಸಿತ್ತು. ಅಂಕಿಅಂಶಗಳ ಪ್ರಕಾರ, 9 ನೇ ತರಗತಿಯಲ್ಲಿ ಓದುತ್ತಿರುವ 1 ಲಕ್ಷಕ್ಕೂ ಹೆಚ್ಚು ಮಕ್ಕಳು ಮತ್ತು 11 ನೇ ತರಗತಿಯಲ್ಲಿ ಓದುತ್ತಿರುವ 50 ಸಾವಿರಕ್ಕೂ ಹೆಚ್ಚು ಮಕ್ಕಳು ವಾರ್ಷಿಕ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದಾರೆ. ಈ ಎಲ್ಲಾ ಮಕ್ಕಳು ಈ ನೀತಿಯ ಲಾಭ ಪಡೆದು ಮುಂದಿನ ತರಗತಿಗೆ ಬಡ್ತಿ ಪಡೆದವರೇ ಆಗಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ಒಟ್ಟು 16 ರಾಜ್ಯಗಳು ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳು ಈಗಾಗಲೇ 5 ಮತ್ತು 8 ನೇ ತರಗತಿಗಳಿಗೆ 'ನೋ-ಡೆಟೆನ್ಷನ್ ನೀತಿ'ಯಿಂದ ಹೊರಬಂದಿವೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.