Woman Earns Rs 22 Lakh A Month : ಫ್ಲೋರಿಡಾದ ನಿವಾಸಿ ಎಮಿಲಿ ಒಡಿಯೊ-ಸುಟ್ಟನ್ ಎನ್ನುವವರು ಸರಳವಾದ ಸೈಡ್ ಬಿಸಿನೆಸ್ ಆರಂಭಿಸಿ ಅದನ್ನೇ ಬೃಹದಾಕಾರದಲ್ಲಿ ಬೆಳೆಯುವಂತೆ ಮಾಡಿದ್ದಾರೆ. ಇವರು ಆರಂಭಿಸಿದ ಈ ಪುಟ್ಟ ಬಿಸಿನೆಸ್ ನಿಂದ 2024 ರಲ್ಲಿ ಅವರ ವಾರ್ಷಿಕ ಆದಾಯವು 2 ಕೋಟಿ ರೂ. 2022 ರಲ್ಲಿ, ಎಮಿಲಿ ತನ್ನ ಕೆಲಸದ ಜೊತೆಗೆ ಆನ್‌ಲೈನ್ ಸ್ಟೋರ್ ಪ್ರಾರಂಭಿಸಿದರು.   ಪ್ರಿಂಟ್-ಆನ್-ಡಿಮಾಂಡ್ ಟಿ-ಶರ್ಟ್‌ಗಳನ್ನು ಮಾರಾಟ ಮಾಡಲು ಆರಂಭಿಸಿದರು.  ಈ ಬಿಸಿನೆಸ್ ನಲ್ಲಿ ಎಮಿಲಿ ಕ್ಯಾನ್ವಾ ಮೂಲಕ ತನ್ನ ಡಿಸೈನ್  ಮಾಡಿ, ಪ್ರಿಂಟಿಫೈ ಮೂಲಕ ಆರ್ಡರ್ ಪಡೆಯಲು ಆರಂಭಿಸಿದರು. 


COMMERCIAL BREAK
SCROLL TO CONTINUE READING

ಎಮಿಲಿಯ ಈ ಸಣ್ಣ ಆನ್‌ಲೈನ್ ಬಿಸಿನೆಸ್ ಆಕೆಗೆ 236,000 ಡಾಲರ್ (ಅಂದಾಜು ರೂ. 2 ಕೋಟಿ) ಗಳಿಸಿದ್ದಾರೆ. ಅಂದರೆ ತಿಂಗಳಿಗೆ ಸರಿಸುಮಾರು 26,200 ಡಾಲರ್ (ಅಂದಾಜು ರೂ. 22 ಲಕ್ಷ). ತನ್ನ ವಿದ್ಯಾರ್ಥಿ ಸಾಲವನ್ನು ಪಾವತಿಸಲು, ಹೂಡಿಕೆ ಮಾಡಲು, ತನ್ನ ಹೆಣ್ಣುಮಕ್ಕಳಿಗೆ ಉಳಿತಾಯ ಖಾತೆಗಳನ್ನು ತೆರೆಯಲು ಮತ್ತು ತನ್ನ ಪತಿಯೊಂದಿಗೆ ವಿಹಾರಕ್ಕೆ ಹೋಗಲು ಗಳಿಕೆಯನ್ನು ಬಳಸಲು ಆರಂಭಿಸಿದರು. ಅಂದ ಹಾಗೆ ಎಮಿಲಿ ವಾರಕ್ಕೆ 10 ಗಂಟೆಗಳ ಕಾಲ ಮಾತ್ರ ಕೆಲಸ ಮಾಡುತ್ತಾಳೆ.  


ಇದನ್ನೂ ಓದಿ : Railway Recruitment 2024: ಭಾರತೀಯ ರೈಲ್ವೆ ಇಲಾಖೆಯಲ್ಲಿ 5,647 ಹುದ್ದೆಗಳ ನೇರ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿರಿ


ಈ ವ್ಯಾಪಾರದಲ್ಲಿ ರಿಸ್ಕ್ ಕೂಡಾ ಕಡಿಮೆ :
ಈ ವ್ಯವಹಾರವು ಕಡಿಮೆ ಅಪಾಯವನ್ನು ಹೊಂದಿದ್ದು, ನಿಮ್ಮ ಸ್ವಂತ ವೇಗದಲ್ಲಿ  ಕಲಿಯಬಹುದು ಎಂದು ಎಮಿಲಿ ತಿಳಿಸಿದ್ದಾರೆ. ಈ ವ್ಯವಹಾರವನ್ನು 40 ಡಾಲರ್  (ಅಂದಾಜು ರೂ. 3,000) ಕ್ಕಿಂತ ಕಡಿಮೆ ದರದಲ್ಲಿ ಪ್ರಾರಂಭಿಸಬಹುದು. ಕ್ಯಾನ್ವಾ ಪ್ರೊ ತಿಂಗಳಿಗೆ 10 ಡಾಲರ್ (ಅಂದಾಜು ರೂ. 800) ವೆಚ್ಚವಾಗುತ್ತದೆ. Etsy ನಲ್ಲಿ ಶಾಪ್ ತೆರೆಯಲು  15 ಡಾಲರ್ (ಅಂದಾಜು ರೂ. 1,200) ಶುಲ್ಕ , ಮತ್ತು ಸಂಶೋಧನಾ ಸಾಧನಗಳು eRank ನಂತೆ ತಿಂಗಳಿಗೆ 6 ಡಾಲರ್ (ಸುಮಾರು ರೂ 500) ವೆಚ್ಚವಾಗುತ್ತದೆ. 


ಎಮಿಲಿ ಆರಂಭದಲ್ಲಿ ವ್ಯಾಲೆಂಟೈನ್ಸ್ ಡೇ ಮತ್ತು ಸೇಂಟ್ ಪ್ಯಾಟ್ರಿಕ್ಸ್ ಡೇ ಟಿ-ಶರ್ಟ್‌ಗಳನ್ನು ಮಾರಾಟ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಇಂಥಹ ವಿನ್ಯಾಸಗಳು ಈಗಾಗಲೇ ಚಾಲ್ತಿಯಲ್ಲಿ ಇರುವುದರಿಂದ ತನ್ನ ಗಮನವನ್ನು ಬೇರೆಡೆ ಹರಿಸಿದ್ದಾರೆ. ಮಗ್‌ಗಳು, ಕ್ಯಾಂಡಲ್‌ಗಳು, ಬ್ಯಾಗ್‌ಗಳು ಮತ್ತು ಜರ್ನಲ್‌ಗಳಂತಹ ಉಡುಗೊರೆ ವಸ್ತುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದಾರೆ. ಇದರಿಂದ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿದೆ. 


ಇದನ್ನೂ ಓದಿ :  ಕೃಷಿ ವಿಶ್ವವಿದ್ಯಾಲಯ: ತಾತ್ಕಾಲಿಕ ಮತ್ತು ಅರೆಕಾಲಿಕ ಪ್ರಾಧ್ಯಾಪಕರ ಹುದ್ದೆಗಳಿಗೆ ಅರ್ಜಿ ಆಹ್ವಾನ


ನಾನು ಸೃಜನಶೀಲನಲ್ಲ. ನಾನು ಗ್ರಾಫಿಕ್ ಡಿಸೈನರ್ ಅಲ್ಲ. ಹೆಚ್ಚಾಗಿ ಕಪ್ಪು ಮತ್ತು ಬಿಳಿ ವಿನ್ಯಾಸಗಳ ಸಾಧಾರಣ ಟೆಕ್ಸ್ಟ್ ಇರುವಂಥ 'ಟೆಂಪ್ಲೇಟ್ ವಿಧಾನ'  ಅನುಸರಿಸುತ್ತೇನೆ ಎನ್ನುತ್ತಾರೆ ಎಮಿಲಿ. ನಂತರ ಟೆಂಪ್ಲೇಟ್ ಉತ್ತಮವಾಗಿ ಮಾರಾಟವಾದರೆ, ಹೊಸ ಪದಗಳನ್ನು ಕೂಡಾ ಸೇರಿಸುತ್ತೇನೆ. ಅದಕ್ಕೆ, 'US ನಲ್ಲಿ ಟಾಪ್ 100 ಕೆರಿಯರ್ ' ಅಥವಾ 'ಟಾಪ್ 100 ಹಾಬಿಸ್ ' Etsy ಮತ್ತು Pinterest ನಲ್ಲಿ  ಡಿಸೈನ್ ರಿಸರ್ಚ್ ಮಾಡುತ್ತಾರೆಯಂತೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.