ನಿಮ್ಮ ರೆಸ್ಯೂಮ್ನ ಮಾದರಿಯಿಂದಲೂ ಸಿಗುತ್ತೆ ಉತ್ತಮ ಜಾಬ್
Resume Tips: ನಾವು ಕೆಲಸಕ್ಕಾಗಿ ಅರ್ಜಿ ಸಲ್ಲಿಸುವಾಗ ಅಥವಾ ರೆಸ್ಯೂಮ್ ತಯಾರಿಸುವಾಗ ಸಾಮಾನ್ಯವಾಗಿ ಕೆಲವು ಸಣ್ಣ-ಪುಟ್ಟ ತಪ್ಪುಗಳನ್ನು ಮಾಡಿಯೇ ಇರುತ್ತೇವೆ. ಆದರೆ, ಈ ಚಿಕ್ಕ ತಪ್ಪು ನಮ್ಮ ವೃತ್ತಿ ಭವಿಷ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
Resume Making Tips: ಯಾವುದೇ ಕೆಲಸಕ್ಕಾಗಿ ಪ್ರಯತ್ನಿಸುವಾಗ ನಮ್ಮ ಜ್ಞಾನದ ಜೊತೆಗೆ ನಾವು ಸಲ್ಲಿಸುವ ರೆಸ್ಯೂಮ್ ತುಂಬಾ ಪ್ರಮುಖ ಪಾತ್ರವನ್ನು ವಹಿಸುತ್ತದೆ. ರೆಸ್ಯೂಮ್/ಸಿವಿ ತಯಾರಿಸುವಾಗ ಸಾಮಾನ್ಯವಾಗಿ ನಾವು ಗೊತ್ತೋ ಅಥವಾ ಗೊತ್ತಿಲ್ಲದೆಯೋ ಕೆಲವು ಸಣ್ಣ-ಪುಟ್ಟ ತಪ್ಪುಗಳನ್ನು ಮಾಡುತ್ತೇವೆ. ಆದರೆ, ಈ ತಪ್ಪುಗಳಿಂದಾಗಿ ನಾವು ಉತ್ತಮ ಉದ್ಯೋಗವನ್ನು ಪಡೆಯುವ ಅವಕಾಶವನ್ನೇ ಕಳೆದುಕೊಳ್ಳಬಹುದು. ಇದನ್ನು ತಪ್ಪಿಸಲು ನಾವು ರೆಸ್ಯೂಮ್ ತಯಾರಿಸುವಾಗ ಕೆಲವು ವಿಷಯಗಳ ಬಗ್ಗೆ ವಿಶೇಷವಾದ ಗಮನವಹಿಸುವುದು ತುಂಬಾ ಅಗತ್ಯವಾಗಿದೆ.
ಸಿವಿ (CV) ಮಾಡುವಾಗ ಯಾವ ವಿಚಾರಗಳನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಯಾವುದೇ ಕಂಪನಿಯ ಎಚ್‌ಆರ್ (HR) ರೆಸ್ಯೂಮ್ ಅನ್ನು ಆಯ್ಕೆ ಮಾಡುವಾಗ ಯಾವೆಲ್ಲಾ ಪ್ರಮುಖ ವಿಚಾರಗಳ ಬಗ್ಗೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ ಎಂಬಿತ್ಯಾದಿ ಮಾಹಿತಿ ಬಗ್ಗೆ ಈ ಲೇಖನದಲ್ಲಿ ನೀಡಲಾಗಿರುವ ಕೆಲವು ಸರಳ ಸಲಹೆಗಳನ್ನು ಅನುಸರಿಸುವುದು ನಿಮಗೆ ಪ್ರಯೋಜನಕಾರಿ ಎಂದು ಸಾಬೀತುಪಡಿಸಬಹುದು.
ಕೆಲಸಕ್ಕಾಗಿ ರೆಸ್ಯೂಮ್ ತಯಾರಿಸುವಾಗ ಈ ವಿಷಯಗಳ ಬಗ್ಗೆ ಇರಲಿ ವಿಶೇಷ ಗಮನ:
* ನಿಮ್ಮ ಸಾಧನೆಗಳ ಬಗ್ಗೆ ಮಾಹಿತಿ ನೀಡಿ:
ಸಾಮಾನ್ಯವಾಗಿ ಅಭ್ಯರ್ಥಿಗಳು ತಮ್ಮ ರೆಸ್ಯೂಮ್‌ನಲ್ಲಿ ಎಷ್ಟು ಕಂಪನಿಗಳಲ್ಲಿ ಎಷ್ಟು ವರ್ಷ ಕೆಲಸ ಮಾಡಿದ್ದಾರೆ. ಯಾವ ಪೋಸ್ಟ್‌ಗಳಲ್ಲಿ ಕೆಲಸ ಮಾಡಿದ್ದಾರೆ ಎಂಬ ಮಾಹಿತಿಗಳನ್ನು ನಮೂದಿಸುತ್ತಾರೆ. ಆದರೆ, ನಿಮ್ಮ ಸಿವಿಯಲ್ಲಿ ನೀವು ಸಂಬಂಧಪಟ್ಟ ಕಂಪನಿಯಲ್ಲಿ ಮಾಡಿರುವ ಸಾಧನೆಗಳನ್ನು ಉಲ್ಲೇಖಿಸುವುದನ್ನು ಮರೆಯಬೇಡಿ. ನಿಮ್ಮ CV ಯಲ್ಲಿ ಇದರ ಬಗ್ಗೆ ಮಾಹಿತಿಯನ್ನು ಹೊಂದಿರುವುದು ನಿಮಗೆ ಉತ್ತಮವಾಗಿದೆ. ನಿಮ್ಮ ಸಾಧನೆಗಳು ನಿಮ್ಮ ಆಯ್ಕೆಯಾಗುವ ಸಾಧ್ಯತೆಗಳನ್ನು ಹೆಚ್ಚಿಸಬಹುದು.
ಇದನ್ನೂ ಓದಿ- GK Quiz: ಯಾವ ಋಷಿ ಶ್ರೀರಾಮನಿಗೆ ಪಂಚವಟಿಯಲ್ಲಿ ನೆಲೆಸುವಂತೆ ಸಲಹೆ ನೀಡುತ್ತಾರೆ?
ಪ್ರೊಫೈಲ್‌ಗೆ ಸಂಬಂಧಿಸಿದ ವಿವರಗಳು:
ರೆಸ್ಯೂಮ್‌ನಲ್ಲಿ ನಿಮ್ಮ ಉದ್ಯೋಗದ ಪ್ರೊಫೈಲ್‌ಗೆ ಅನುಗುಣವಾಗಿ ನಿಮ್ಮ CV ಅನ್ನು ನೀವು ಸಿದ್ಧಪಡಿಸಬೇಕು. ಪೋಸ್ಟ್‌ಗೆ ನೇರವಾಗಿ ಸಂಬಂಧಿಸದ ಯಾವುದೇ ಮಾಹಿತಿಯನ್ನು ನೀವು ಇದರಲ್ಲಿ ಸೇರಿಸದಿರುವುದು ಉತ್ತಮವಾಗಿದೆ. ಈ ಬಗ್ಗೆ ವಿಶೇಷವಾದ ಗಮನವಹಿಸುವುದು ತುಂಬಾ ಅಗತ್ಯವಾಗಿದೆ.
ಅನಾವಶ್ಯಕ ಪದಗುಚ್ಛಗಳ ಬಳಕೆಯ ಬಗ್ಗೆ ಇರಲಿ ಎಚ್ಚರ:
ನಮ್ಮಲ್ಲಿ ತುಂಬಾ ಅಭ್ಯರ್ಥಿಗಳು ರೆಸ್ಯೂಮ್ ಅನ್ನು ಆಕರ್ಷಕವಾಗಿಸಲು ವಿಚಿತ್ರವಾದ ಪದಗುಚ್ಛಗಳನ್ನು ಬಳಸುವುದು ಸಾಮಾನ್ಯ. ಆದರೆ, ಅನಾವಶ್ಯಕ ಪದಗುಚ್ಛಗಳ ಬಳಕೆಯು ನಿಮ್ಮ ಸಂವಹನವನ್ನು ವ್ಯತಿರಿಕ್ತವಾಗಿ ಬಿಂಬಿಸುವ ಸಾಧ್ಯತೆ ಇದೆ.
ಇದನ್ನೂ ಓದಿ- GK Quiz: 'ಕೆನಿಸ್ ಲೂಪಸ್ ಫ್ಯಾಮಿಲಿಯಾರಿಸ್' ಇದು ಯಾವ ಪ್ರಾಣಿಯ ವೈಜ್ಞಾನಿಕ ಹೆಸರು ಹೇಳಬಲ್ಲಿರಾ?
ರೆಸ್ಯೂಮ್ ಫಾರ್ಮ್ಯಾಟ್:
ನೀವು ನಿಮ್ಮ ರೆಸ್ಯೂಮ್ ತಯಾರಿಸುವಾರ ಇದರ ಫಾರ್ಮ್ಯಾಟ್ ಬಗ್ಗೆ ವಿಶೇಷ ಗಮನವಹಿಸಿ. ನಿಮ್ಮ ರೆಸ್ಯೂಮ್ ಫಾರ್ಮ್ಯಾಟ್ ಸರಿಯಾಗಿದ್ದಾಗ ಮಾತ್ರ ಕಂಪನಿಯ ಎಚ್‌ಆರ್ ನಿಮ್ಮ ರೆಸ್ಯೂಮ್ ಅನ್ನು ಪರಿಶೀಲಿಸಬಹುದು. ಸಾಮಾನ್ಯವಾಗಿ ಕೆಲವು ಕಂಪನಿಗಳು ತುಂಬಾ ಉದ್ದವಾಗಿರುವ ಮತ್ತು ಅನಗತ್ಯ ವಿವರಗಳನ್ನು ಹೊಂದಿರುವ ರೆಸ್ಯೂಮ್‌ಗಳನ್ನು ತಕ್ಷಣವೇ ತಿರಸ್ಕರಿಸುತ್ತವೆ ಎಂದು ಹೇಳಲಾಗುತ್ತದೆ.
ಈ ವಿಷಯಗಳನ್ನು ನಮೂದಿಸುವುದನ್ನು ಮರೆಯಬೇಡಿ:
ಬಹಳ ಮುಖ್ಯವಾಗಿ ನಿಮ್ಮ ರೆಸ್ಯೂಮ್‌ನಲ್ಲಿ ನಿಮ್ಮ ಪ್ರೊಫೈಲ್‌ಗೆ ಸಂಬಂಧಿಸಿದ ಯಾವುದೇ ವಿಶೇಷತೆ ಅಥವಾ ಪ್ರಮಾಣಪತ್ರ ಕೋರ್ಸ್ ಅನ್ನು ನೀವು ಮಾಡಿದ್ದರೆ ಅದನ್ನು ಸಿವಿಯಲ್ಲಿ ನಮೂದಿಸುವುದನ್ನು ಮರೆಯಬೇಡಿ. ಮಾತ್ರವಲ್ಲ, ಈ ವಿಷಯಗಳನ್ನು ನಮೂಸುವಾಗ ಇದಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿ. ಇದು ನಿಮ್ಮ ಕೆಲಸ ಸಿಗುವ ಸಾಧ್ಯತೆಯನ್ನು ಹೆಚ್ಚಿಸಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=xFI-KJNrEP8
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.