RRB Recruitment 2024: ಸರ್ಕಾರಿ ಉದ್ಯೋಗ, ಅದರಲ್ಲೂ ಕೇಂದ್ರ ಸರ್ಕಾರಿ ನೌಕರಿಗಾಗಿ ಬಹುತೇಕ ಜನರು ಪ್ರಯತ್ನಿಸುತ್ತಾರೆ. ನೀವು ಅಂತಹವರಲ್ಲಿ ಒಬ್ಬರಾಗಿದ್ದರೆ,  ಭಾರತೀಯ ರೈಲ್ವೇಯಲ್ಲಿ ಬಂಪರ್ ಉದ್ಯೋಗಾವಕಾಶವಿದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ,  ರೈಲ್ವೇ ನೇಮಕಾತಿ ಮಂಡಳಿ (RRB) ಟೆಕ್ನಿಷಿಯನ್‌ ಹುದ್ದೆಗಳಿಗಾಗಿ ಅರ್ಜಿ  ಆಹ್ವಾನಿಸಿದ್ದು, . ಈ ನೇಮಕಾತಿ ಅಭಿಯಾನದಡಿಯಲ್ಲಿ 9144 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಅರ್ಜಿ ಸಲ್ಲಿಸಲು ಇಂದೇ (ಏಪ್ರಿಲ್ 08) ಕೊನೆಯ ದಿನವಾಗಿದೆ. 


ರೈಲ್ವೇ ನೇಮಕಾತಿ ಮಂಡಳಿ  ಟೆಕ್ನಿಷಿಯನ್‌ ಹುದ್ದೆಗಾಗಿ ಅರ್ಜಿ ಸಲ್ಲಿಸಲು ಇಚ್ಛಿಸುವ ಅಭ್ಯರ್ಥಿಗಳು  RRB rrbapply.gov.in ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ತಕ್ಷಣ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. 


ಇದನ್ನೂ ಓದಿ- Job Alert: SSLC ಆಗಿದ್ರೆ 85 ಸಾವಿರ ಸಂಬಳ ನೀಡುವ ಈ ಉದ್ಯೋಗಕ್ಕೆ ಇಂದೇ ಅರ್ಜಿ ಸಲ್ಲಿಸಿ


ಹುದ್ದೆಯ ವಿವರಗಳು: 
ತಂತ್ರಜ್ಞ ಗ್ರೇಡ್ I ಸಿಗ್ನಲ್: 1092 ಪೋಸ್ಟ್‌ಗಳು
ತಂತ್ರಜ್ಞ ಗ್ರೇಡ್ III: 8052 ಪೋಸ್ಟ್‌ಗಳು


ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಗತ್ಯ ವಿದಾರ್ಹತೆ: 
ಭಾರತೀಯ ರೈಲ್ವೆ ಟೆಕ್ನಿಷಿಯನ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು NCVT/SCVT ಮಾನ್ಯತೆ ಪಡೆದ ಸಂಸ್ಥೆಯಿಂದ ಎಸ್‌ಎಸ್‌ಎಲ್‌ಸಿ ಅಥವಾ  ಐಟಿಐ ಉತ್ತೀರ್ಣರಾಗಿರಬೇಕು.   ಅದೇ ಸಮಯದಲ್ಲಿ, ಕೆಲವು ಹುದ್ದೆಗಳಿಗೆ, ಅಭ್ಯರ್ಥಿಗಳು ಸಂಬಂಧಿತ  BE/B.Tech/B.Sc ಪದವಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. 


ವಯಸ್ಸಿನ ಮಿತಿ: 
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸನ್ನು 1ನೇ ಜುಲೈ 2024 ರಂತೆ  ಲೆಕ್ಕಹಾಕಲಾಗುತ್ತದೆ. ಅರ್ಜಿದಾರರ ವಯಸ್ಸು 18 ವರ್ಷಕ್ಕಿಂತ ಕಡಿಮೆಯಿರಬಾರದು.  ಗರಿಷ್ಠ ವಯೋಮಿತಿಯನ್ನು 33ವರ್ಷಗಳು. ಆದಾಗ್ಯೂ, ಕೆಲವರಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆಯನ್ನು ನೀಡಲಾಗಿದೆ. 


ಅರ್ಜಿ ಶುಲ್ಕ: 
ಟೆಕ್ನಿಷಿಯನ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 500 ರೂ. ಪಾವತಿಸಬೇಕಾಗುತ್ತದೆ. ಆದರೆ, ಎಸ್‌ಸಿ, ಎಸ್‌ಟಿ, ಮಾಜಿ ಸೈನಿಕ, ಪಿ‌ಡಬಲ್ಯು‌ಬಿ‌ಡಿ,   ಟ್ರಾನ್ಸ್ಜೆಂಡರ್, ಇಡಬಲ್ಯುಎಸ್ ಮತ್ತು ಮಹಿಳಾ ಅಭ್ಯರ್ಥಿಗಳು 250 ರೂಪಾಯಿಗಳ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಅಭ್ಯರ್ಥಿಗಳು ಆನ್‌ಲೈನ್ ಮಾಧ್ಯಮದ ಮೂಲಕ ಫಾರ್ಮ್ ಶುಲ್ಕವನ್ನು ಪಾವತಿಸಬಹುದು. 


ಇದನ್ನೂ ಓದಿ- Career News: ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಮೇ 4 ಕೊನೆ ದಿನ 


ಆಯ್ಕೆ ಪ್ರಕ್ರಿಯೆ:
ಈ ನೇಮಕಾತಿಗಾಗಿ ಆಯ್ಕೆ ಪ್ರಕ್ರಿಯೆಯು ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲೆ ಪರಿಶೀಲನೆ ಮತ್ತು ವೈದ್ಯಕೀಯ ಪರೀಕ್ಷೆಯನ್ನು ಒಳಗೊಂಡಿರುತ್ತದೆ. ಪರೀಕ್ಷೆಯ ವೇಳಾಪಟ್ಟಿ ಮತ್ತು ಸ್ಥಳಗಳ ಮಾಹಿತಿಯನ್ನು ಅರ್ಹ ಅಭ್ಯರ್ಥಿಗಳಿಗೆ ಸರಿಯಾದ ಸಮಯದಲ್ಲಿ RRB ವೆಬ್‌ಸೈಟ್‌ಗಳು, SMS ಮತ್ತು ಇಮೇಲ್ ಮೂಲಕ ನೀಡಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.