RRB Recruitment 2024: ಭಾರತೀಯ ರೈಲ್ವೆ ಇಲಾಖೆಯ 11,558 ಹುದ್ದೆಗಳಿಗೆ ಅರ್ಜಿ ಆಹ್ವಾನ
RRB Recruitment 2024: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಪದವೀಧರರಾಗಿರಬೇಕು ಅಥವಾ ಹುದ್ದೆಗೆ ಅನುಗುಣವಾಗಿ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಪದವಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳ ವಯಸ್ಸು 18-36 ವರ್ಷಗಳ ನಡುವಿರಬೇಕು. ಪದವಿಪೂರ್ವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ವಯಸ್ಸು 18-33 ವರ್ಷಗಳ ನಡುವಿರಬೇಕು.
RRB Recruitment 2024: ರೈಲ್ವೆ ನೇಮಕಾತಿ ಮಂಡಳಿ (RRB)ಯು ನಿರುದ್ಯೋಗಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಭಾರತೀಯ ರೈಲ್ವೆ ಇಲಾಖೆಯಲ್ಲಿ ಖಾಲಿಯಿರುವ 11,558 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. RRB NTPC 2024ರ ಅಧಿಸೂಚನೆಯು ಪದವಿ ಮತ್ತು ಪದವಿಪೂರ್ವ ಮಟ್ಟದ ಹುದ್ದೆಗಳನ್ನು ಒಳಗೊಂಡಿದೆ. ಈ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..
ಅರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಯು ಪದವೀಧರರಾಗಿರಬೇಕು ಅಥವಾ ಹುದ್ದೆಗೆ ಅನುಗುಣವಾಗಿ 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ಪದವಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳ ವಯಸ್ಸು 18-36 ವರ್ಷಗಳ ನಡುವಿರಬೇಕು. ಪದವಿಪೂರ್ವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರ ವಯಸ್ಸು 18-33 ವರ್ಷಗಳ ನಡುವಿರಬೇಕು.
ಇದನ್ನೂ ಓದಿ: ಹಸಿವು ತಾಳಲಾರದೆ ʼಸೂಟ್ ಕೇಸ್ʼ ತಿಂದ ಯುವತಿ..! ಶಾಕಿಂಗ್ ವಿಡಿಯೋ ವೈರಲ್
ಯಾವ ಹುದ್ದೆಗಳಿಗೆ ನೇಮಕಾತಿ: ಚೀಫ್ ಕಮರ್ಷಿಯಲ್ ಟಿಕೆಟ್ ಸೂಪರ್ವೈಸರ್, ಸ್ಟೇಷನ್ ಮಾಸ್ಟರ್, ಗೂಡ್ಸ್ ಟ್ರೈನ್ ಮ್ಯಾನೇಜರ್, ಜೂನಿಯರ್ ಅಕೌಂಟ್ ಅಸಿಸ್ಟೆಂಟ್ ಟೈಪಿಸ್ಟ್ ಮತ್ತು ಸೀನಿಯರ್ ಕ್ಲರ್ಕ್ ಟೈಪಿಸ್ಟ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಇದಲ್ಲದೆ ಕಮರ್ಷಿಯಲ್ ಟಿಕೆಟ್ ಕ್ಲರ್ಕ್, ಅಕೌಂಟ್ಸ್ ಕ್ಲರ್ಕ್, ಟೈಪಿಸ್ಟ್, ಜೂನಿಯರ್ ಕ್ಲರ್ಕ್-ಟೈಪಿಸ್ಟ್, ಟ್ರೈನ್ಸ್ ಕ್ಲರ್ಕ್ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. CEN 05/2024ರ ಅರ್ಜಿ ಪ್ರಕ್ರಿಯೆ ಸೆಪ್ಟೆಂಬರ್ 14ರಿಂದ ಪ್ರಾರಂಭವಾಗಲಿದೆ. CEN 06/2024ರ ಅರ್ಜಿಗಳು ಸೆಪ್ಟೆಂಬರ್ 21ರಿಂದ ಅಕ್ಟೋಬರ್ 20ರವರೆಗೆ ಮುಂದುವರಿಯುತ್ತದೆ. ಪದವಿ ಮತ್ತು ಪದವಿಪೂರ್ವ ಹುದ್ದೆಗಳನ್ನು ಭರ್ತಿ ಮಾಡುವುದು ಈ ನೇಮಕಾತಿ ಅಭಿಯಾನದ ಉದ್ದೇಶವಾಗಿದೆ.
ಅರ್ಜಿ ಶುಲ್ಕ: ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 500 ರೂ. ಮತ್ತು SC/ST/PWD/ಮಹಿಳೆಯರಿಗೆ/ಮಾಜಿ-Sm/ಟ್ರಾನ್ಸ್ಜೆಂಡರ್/ಅಲ್ಪಸಂಖ್ಯಾತರು/ಆರ್ಥಿಕವಾಗಿ ಹಿಂದುಳಿದವರಿಗೆ 250 ರೂ. ಅರ್ಜಿ ಶುಲ್ಕವಿರುತ್ತದೆ.
ಆಯ್ಕೆ ವಿಧಾನ: ಆನ್ಲೈನ್ ಪರೀಕ್ಷಾ ಹಂತ 1 – CBT 1 (ಕಂಪ್ಯೂಟರ್ ಆಧಾರಿತ ಪರೀಕ್ಷೆ). ಇದರಲ್ಲಿ ಉತ್ತೀರ್ಣರಾದವರಿಗೆ ಆನ್ಲೈನ್ ಪರೀಕ್ಷೆ ಹಂತ 2 – CBT 2 (ಕಂಪ್ಯೂಟರ್ ಆಧಾರಿತ ಪರೀಕ್ಷೆ) ನಡೆಸಲಾಗುತ್ತದೆ. ಅರ್ಹ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಅನುಗುಣವಾಗಿ ಟೈಪಿಂಗ್ ಟೆಸ್ಟ್ (ಕೌಶಲ್ಯ ಪರೀಕ್ಷೆ)/ ಆಪ್ಟಿಟ್ಯೂಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ನಂತರದ ಹಂತದಲ್ಲಿ ದಾಖಲೆ ಪರಿಶೀಲನೆ ನಡೆಸಲಾಗುವುದು. ಅಂತಿಮವಾಗಿ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸುವುದು ಹೇಗೆ?
ಮೊದಲು rrbapply.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು
ನಂತರ ನಿಮ್ಮ ಖಾತೆಯನ್ನು ರಚಿಸಿ
ಖಾತೆ ರಚಿಸಿದ ನಂತರ ಮೊಬೈಲ್ ಸಂಖ್ಯೆ / ಇ-ಮೇಲ್, ಪಾಸ್‌ವರ್ಡ್‌ನೊಂದಿಗೆ ಸೈನ್‌ಇನ್ ಮಾಡಿ
ಅರ್ಜಿ ನಮೂನೆಯಲ್ಲಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ
ನಂತರ ಅಪ್ಲಿಕೇಶನ್‌ನ ಪ್ರಿಂಟ್‌ಔಟ್ ತೆಗೆದುಕೊಳ್ಳಿರಿ
ಇದನ್ನೂ ಓದಿ: Salil Kapoor Suicide: 70ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಅಟ್ಲಾಸ್ ಸೈಕಲ್ಸ್‌ನ ಮಾಜಿ ಅಧ್ಯಕ್ಷ!
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.