Karnataka 1st PUC Result 2024: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿಯು (KSEAB) ಕರ್ನಾಟಕ 1st PUC ಫಲಿತಾಂಶವನ್ನು ಇಂದು ಮಾರ್ಚ್ 30, 2024 ರಂದು ಘೋಷಿಸಲು ಸಿದ್ಧವಾಗಿದೆ. ಈ ಪ್ರಕಟಣೆಯು ತಮ್ಮ ಫಲಿತಾಂಶಗಳಿಗಾಗಿ ಕುತೂಹಲದಿಂದ ಕಾಯುತ್ತಿರುವ ವಿದ್ಯಾರ್ಥಿಗಳಲ್ಲಿ ನಿರೀಕ್ಷೆ ಮತ್ತು ಉತ್ಸಾಹವನ್ನು ಮೂಡಿಸಿದೆ. ವಿದ್ಯಾರ್ಥಿಗಳು ಅಧಿಕೃತ ವೆಬ್‌ಸೈಟ್‌ಗಳಾದ karresults.nic.in ಮತ್ತು result.dkpucpa.com ಮೂಲಕ ಆನ್‌ಲೈನ್‌ನಲ್ಲಿ ಫಲಿತಾಂಶ ಪರಿಶೀಲಿಸಲಿಸಬಹುದು. ಕರ್ನಾಟಕ 1st PUC  ಫಲಿತಾಂಶ 2024 ಪರಿಶೀಲಿಸಲು ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಬೇಕಾಗುತ್ತದೆ.


COMMERCIAL BREAK
SCROLL TO CONTINUE READING

ಕರ್ನಾಟಕ 11 ನೇ ತರಗತಿಯ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ವಿದ್ಯಾರ್ಥಿಗಳು ಕನಿಷ್ಠ ಶೇಕಡಾ 35 ಅಂಕಗಳನ್ನು ಪಡೆದಿರಬೇಕು. ವಿದ್ಯಾರ್ಥಿಗಳು ತಮ್ಮ ಹೆಸರು, ರೋಲ್ ನಂಬರ್, ಪಡೆದ ಅಂಕಗಳು, ಒಟ್ಟು ಅಂಕಗಳು ಮತ್ತು‌ ಪಾಸ್/ಫೇಲ್ ಸೇರಿದಂತೆ ತಮ್ಮ ಅಂಕಪಟ್ಟಿಯಲ್ಲಿ ನಮೂದಿಸಿರುವ ಎಲ್ಲಾ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸುವುದು ಬಹಳ ಮುಖ್ಯ.


ಇದನ್ನೂ ಓದಿ: ಎಲ್ಲರಿಗೂ ಬದುಕು ಕಟ್ಟಿ ಕೊಡುವುದು ನರೇಂದ್ರ ಮೋದಿಯವರ ಗ್ಯಾರೆಂಟಿ: ಬಸವರಾಜ ಬೊಮ್ಮಾಯಿ 


ಕರ್ನಾಟಕ 1 ನೇ ಪಿಯುಸಿ ಫಲಿತಾಂಶ 2024 ಅನ್ನು ಹೇಗೆ ಪರಿಶೀಲಿಸುವುದು?


ವಿದ್ಯಾರ್ಥಿಗಳು ಕರ್ನಾಟಕ 1 ನೇ ಪಿಯುಸಿಫಲಿತಾಂಶವನ್ನು ಪರಿಶೀಲಿಸಲು ಈ ಸರಳ ಹಂತ-ಹಂತದ ಪ್ರಕ್ರಿಯೆಯನ್ನು ಅನುಸರಿಸಬಹುದು:


ಹಂತ 1 - karresults.nic.in ಅಥವಾ result.dkpucpa.com ನಲ್ಲಿ ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ.


ಹಂತ 2 - ಫಲಿತಾಂಶ ವಿಭಾಗಕ್ಕೆ ನ್ಯಾವಿಗೇಟ್ ಮಾಡಿ ಮತ್ತು ‘1ನೇ ಪಿಯುಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ 2024’ ಎಂದು ಹೇಳುವ ಟ್ಯಾಬ್‌ಗಾಗಿ ನೋಡಿ.


ಹಂತ 3 - ನಿಮ್ಮ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸುವ ಮೂಲಕ ಲಾಗ್ ಇನ್ ಮಾಡಿ.


ಹಂತ 4 - ಒಮ್ಮೆ ಲಾಗ್ ಇನ್ ಮಾಡಿದ ನಂತರ, ನಿಮ್ಮ ಫಲಿತಾಂಶವನ್ನು ಸ್ಕ್ರೀನ್ ಮೇಲೆ ಪ್ರದರ್ಶಿಸಲಾಗುತ್ತದೆ.


ಹಂತ 5 - ನಿಮ್ಮ ಫಲಿತಾಂಶವನ್ನು ಎಚ್ಚರಿಕೆಯಿಂದ ಪರಿಶೀಲಿಸಿ ಮತ್ತು‌ ಡೌನ್‌ಲೋಡ್‌ ಮಾಡಿ.


ಹಂತ 6 -  ಅಂತಿಮ ಫಲಿತಾಂಶದ ಪ್ರಿಂಟ್ ಔಟ್ ತೆಗೆದುಕೊಳ್ಳಿ.


ಕರ್ನಾಟಕ 1ನೇ ಪಿಯುಸಿ ಪೂರಕ ಪರೀಕ್ಷೆ 2024 : 


ವಿದ್ಯಾರ್ಥಿಗಳು ಯಾವುದೇ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರೆ ಕರ್ನಾಟಕ ಪಿಯು ಮಂಡಳಿಯು ಪೂರಕ ಪರೀಕ್ಷೆ ಬರೆಯುವ ಅವಕಾಶವನ್ನು ಒದಗಿಸುತ್ತದೆ. ಕರ್ನಾಟಕ 1ನೇ ಪಿಯುಸಿ ಪೂರಕ ಪರೀಕ್ಷೆ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಮೇ 20 ರಿಂದ ಮೇ 31 ರವರೆಗೆ 1ನೇ ಪಿಯುಸಿ ಪೂರಕ ಪರೀಕ್ಷೆ ನಡೆಯಲಿವೆ. 


ಇದನ್ನೂ ಓದಿ: Daily GK Quiz: ವಿಶ್ವದ ಅತ್ಯಂತ ಬಿಸಿಯಾದ ಖಂಡ ಯಾವುದು?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.