NEET PG 2022: ಪರೀಕ್ಷೆ ಮುಂದೂಡಿಕೆ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್
`ಈಗಾಗಲೇ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ-ಸ್ನಾತಕೋತ್ತರ ಪರೀಕ್ಷೆಯು ನಾಲ್ಕು ತಿಂಗಳ ಕಾಲ ವಿಳಂಬವಾಗಿದೆ. ಕಳೆದ ವರ್ಷ ಕೋವಿಡ್‌ನಿಂದಾಗಿ ಪರೀಕ್ಷೆ ನಡೆಸಲು ಅಸಾಧ್ಯವಾಗಿತ್ತು. ಇದೀಗ ಮತ್ತೆ ಮುಂದೂಡಿದರೆ ಜನವರಿ 2016ರಲ್ಲಿ ನಿಗದಿ ಪಡಿಸಿದ ಕಾನೂನಿನ ಮೇಲೆ ಪರಿಣಾಮ ಬೀರುತ್ತದೆ` ಎಂದು ಪೀಠ ಹೇಳಿದೆ.
NEET PG 2022ರ ಪರೀಕ್ಷಾ ದಿನಾಂಕವನ್ನು ಮುಂದೂಡುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ವೈದ್ಯರ ಗುಂಪೊಂದು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ತಿರಸ್ಕರಿಸಿದೆ. ಇನ್ನು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಯನ್ನು ಮುಂದೂಡುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸಹ ಪತ್ರವನ್ನು ಬರೆಯಲಾಗಿತ್ತು. ಸದ್ಯ ಪರೀಕ್ಷೆಯನ್ನು ಮೇ 21ರಂದು ನಡೆಸಲು ಈಗಾಗಲೇ ತೀರ್ಮಾನಿಸಲಾಗಿದ್ದು, ಅದೇ ದಿನ ಎಕ್ಸಾಂಗಳು ನಡೆಯಲಿದೆ.
ಇದನ್ನು ಓದಿ: NEET 2022 ಪರೀಕ್ಷೆ ದಿನಾಂಕ ಪ್ರಕಟ: ಶೀಘ್ರದಲ್ಲೇ ಈ ವೈಬ್‌ಸೈಟ್‌ನಲ್ಲಿ ಸಿಗಲಿದೆ ಹಾಲ್ ಟಿಕೆಟ್
"ಈಗಾಗಲೇ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ-ಸ್ನಾತಕೋತ್ತರ ಪರೀಕ್ಷೆಯು ನಾಲ್ಕು ತಿಂಗಳ ಕಾಲ ವಿಳಂಬವಾಗಿದೆ. ಕಳೆದ ವರ್ಷ ಕೋವಿಡ್‌ನಿಂದಾಗಿ ಪರೀಕ್ಷೆ ನಡೆಸಲು ಅಸಾಧ್ಯವಾಗಿತ್ತು. ಇದೀಗ ಮತ್ತೆ ಮುಂದೂಡಿದರೆ ಜನವರಿ 2016ರಲ್ಲಿ ನಿಗದಿ ಪಡಿಸಿದ ಕಾನೂನಿನ ಮೇಲೆ ಪರಿಣಾಮ ಬೀರುತ್ತದೆ" ಎಂದು ಪೀಠ ಹೇಳಿದೆ.
ಪರೀಕ್ಷೆ ದಿನಾಂಕಗಳನ್ನು ಮುಂದೂಡುವಂತೆ ಪ್ರತಿಭಟನೆಗಳು ನಡೆಯುತ್ತಿತ್ತು. ಈ ಬೆನ್ನಲ್ಲೇ 15,000ಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ದಿನಾಂಕವನ್ನು ಮುಂದೂಡುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದರು. ಅಷ್ಟೇ ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ #PostponeNEETPG2022 ಎಂಬ ಹ್ಯಾಷ್‌ಟ್ಯಾಗ್ ಟ್ರೆಂಡಿಂಗ್‌ನಲ್ಲಿತ್ತು.
ಇದನ್ನು ಓದಿ: Reservation In Promotion: ಎಸ್‌ಸಿ-ಎಸ್‌ಟಿಗೆ ಬಡ್ತಿಗಾಗಿ ಮೀಸಲಾತಿಯಲ್ಲಿನ ಮಾನದಂಡಗಳು ಬದಲಾಗುವುದಿಲ್ಲ
ಈ ವೆಬ್‌ಸೈಟ್‌ನಲ್ಲಿ ಸಿಗಲಿದೆ ಪ್ರವೇಶ ಪತ್ರ:
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (NEET) ಸ್ನಾತಕೋತ್ತರವನ್ನು ಮೇ 21ರಂದು ನಡೆಸಲಾಗುವುದು ಎಂದು ಕೇಂದ್ರ ಸರ್ಕಾರ ಈಗಾಗಲೇ ಘೋಷಣೆ ಮಾಡಿದೆ. ಇನ್ನು ವರದಿಗಳ ಪ್ರಕಾರ, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ 2022ರ ಆಕಾಂಕ್ಷಿಗಳಿಗೆ ಪ್ರವೇಶ ಕಾರ್ಡ್‌ಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿವೆ. ವೆಬ್‌ಸೈಟ್ nbe.edu.in.ನಲ್ಲಿ ಸಿಗಲಿದೆ. ಆದರೆ ಹಾಲ್ ಟಿಕೆಟ್‌ಗಳ ಬಿಡುಗಡೆಯ ದಿನಾಂಕದ ಕುರಿತು ಯಾವುದೇ ಅಧಿಕೃತ ಅಪ್‌ಡೇಟ್‌ಗಳು ಇಲ್ಲದಿದ್ದರೂ ಮೇ 16 ಅಥವಾ 17 ರೊಳಗೆ ಹೊರಬರುವ ಸಾಧ್ಯತೆಯಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.