ಬೆಂಗಳೂರು: ಗ್ರಾಮಾಭಿವೃದ್ಧಿ ಹಾಗೂ ಸ್ವ-ಉದ್ಯೋಗ ತರಬೇತಿ(ರುಡ್‍ಸೆಟ್) ಸಂಸ್ಥೆ,‌ ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ 562123 ಇಲ್ಲಿ ಉಪನ್ಯಾಸಕರ ಹುದ್ದೆಯು ಖಾಲಿ ಇದ್ದು, 22 ರಿಂದ 30 ವಯೋಮಾನದ ಯುವಕ, ಯುವತಿಯರು ಅರ್ಜಿ ಸಲ್ಲಿಸಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬಿಗ್ ಬಾಸ್‌ನಿಂದ ಹೊರಬರಲು ಇದೇ ಮುಖ್ಯ ಕಾರಣ: ಜೀ ಕನ್ನಡ ನ್ಯೂಸ್‌ಗೆ ಗೋಲ್ಡ್ ಸುರೇಶ್ ಸ್ಪಷ್ಟನೆ


ಮನೋವಿಜ್ಞಾನದಲ್ಲಿ ಎಂ.ಎ., ಪತ್ರಿಕೋದ್ಯಮದಲ್ಲಿ ಎಂ.ಎ., ಗ್ರಾಮೀಣಾಭಿವೃದ್ಧಿಯಲ್ಲಿ ಎಂ.ಎ., ಸಮಾಜಶಾಸ್ತ್ರದಲ್ಲಿ ಎಂ.ಎ., ಕೃಷಿ ಮತ್ತು ಸಂಬಂಧಿತ ವಿಷಯಗಳಲ್ಲಿ ಎಂ.ಕಾಂ, ಬಿಎಸ್ಸಿ, ಎಂಎಸ್‍ಡಬ್ಲ್ಯು, ಬಿಬಿಎಂ, ಬಿಎ, ಬಿಎಸ್ಸಿ ಜೊತೆಗೆ ಬಿಇಡಿ ಅಥವಾ ಎಂಇಡಿ ವಿದ್ಯಾರ್ಹತೆಯನ್ನು ಉಳ್ಳ ಅರ್ಹ ಯುವಕ/ಯುವತಿಯರು ಕನ್ನಡ ಹಾಗೂ ಇಂಗ್ಲಿಶ್ ಭಾಷೆ ಬಲ್ಲವರು, ಟೈಪಿಂಗ್ ಮಾಡುವ ಪರಿಣಿತಿಯನ್ನು ಹೊಂದಿರಬೇಕು. ಕಂಪ್ಯೂಟರ್‍ನಲ್ಲಿ ಎಂಎಸ್ ವರ್ಡ್, ಎಂಎಸ್ ಎಕ್ಸೆಲ್ ಹಾಗೂ ಎಂಎಸ್ ಪವರ್ ಪಾಯಿಂಟ್ ನಲ್ಲಿ ಪರಿಣಿತಿಯನ್ನು ಹೊಂದಿರುವುದು ಕಡ್ದಾಯ.


ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡಾಟವನ್ನು ಇ-ಮೇಲ್ ಮುಖಾಂತರ ಮಾತ್ರ ಕಳುಹಿಸಬೇಕು. ಇ-ಮೇಲ್: rudsetinlm@gmail.com ಇಲ್ಲಿಗೆ ಡಿಸೆಂಬರ್, 28 ರೊಳಗೆ ಕಳುಹಿಸಬೇಕು. ತಿಂಗಳ ಸಂಬಳ ರೂ. 30 ಸಾವಿರ ಇದ್ದು, ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 9113880324 ಅಥವಾ 9686172444 ಇಲ್ಲಿ ಸಂಪರ್ಕಿಸಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.