ವಿಜ್ಞಾನ, ವಾಣಿಜ್ಯ, ಅಥವಾ ಕಲೆ? ಏನು ಸೆಲೆಕ್ಟ್‌ ಮಾಡುವುದು. ಇದು 10ನೇ ತರಗತಿಯ ಫಲಿತಾಂಶ ಹೊರಬಂದ ನಂತರ ಹೆಚ್ಚಿನ ವಿದ್ಯಾರ್ಥಿಗಳು ಎದುರಿಸುವ ಸಾಮಾನ್ಯ ಗೊಂದಲವಾಗಿದೆ. ಕೆಲವು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಬಹಳ ಸ್ಪಷ್ಟವಾಗಿರುತ್ತಾರೆ. ಆದರೆ ಮತ್ತೊಂದೆಡೆ, 10 ನೇ ತರಗತಿಯ ನಂತರ ತಮ್ಮ ವೃತ್ತಿಯನ್ನು ಆಯ್ಕೆಮಾಡುವಾಗ ಗೊಂದಲಕ್ಕೊಳಗಾಗುವ ಅನೇಕ ವಿದ್ಯಾರ್ಥಿಗಳಿದ್ದಾರೆ. ಆದರೆ ಪ್ರತಿಯೊಬ್ಬ ವಿದ್ಯಾರ್ಥಿಯು ಎಸ್‌ಎಸ್‌ಎಲ್‌ಸಿ ಬಳಿಕ ಸರಿಯಾದ ಕೋರ್ಸ್‌ ಅನ್ನು ಆಯ್ಕೆ ಮಾಡಿಕೊಳ್ಳುವುದ ಬಹಳ ಮುಖ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರಕ್ಕೂ ಸಾಕಷ್ಟು ಅವಕಾಶಗಳಿವೆ. ಆದರೆ ತಮ್ಮ ಆಸಕ್ತಿಗಳಿಗೆ ಅನುಗುಣವಾಗಿ ಆಯ್ಕೆ ಮಾಡಬೇಕು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕೊಹ್ಲಿಯ ಬ್ಯಾಟಿಂಗ್‌ನಲ್ಲಿ ಹರಿಯಿತು ಹಳೇ ಮಿಂಚು, ಫ್ರಾಂಚೈಸಿ ಕ್ರಿಕೆಟ್‌ನಲ್ಲಿ 'ಶ್ರೇಷ್ಠ ದಾಖಲೆ


ಆದ್ದರಿಂದ 10 ನೇ ತರಗತಿಯಲ್ಲಿ ಉತ್ತೀರ್ಣರಾದ ನಂತರ ಟಾಪ್ 5 ವೃತ್ತಿ ಆಯ್ಕೆಗಳು ಇಲ್ಲಿವೆ:


1. ವಿಜ್ಞಾನ:


ವಿಜ್ಞಾನವು ಎಂಜಿನಿಯರಿಂಗ್, ವೈದ್ಯಕೀಯ ಮತ್ತು ಸಂಶೋಧನೆ ಅಂತಹ ಅನೇಕ ವೃತ್ತಿ ಆಯ್ಕೆಗಳನ್ನು ನೀಡುತ್ತದೆ. ಇದು ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಅತ್ಯಂತ ನೆಚ್ಚಿನ ಆಯ್ಕೆಯಾಗಿದೆ.


ವಿಜ್ಞಾನ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವುದರ ಪ್ರಮುಖ ಪ್ರಯೋಜನವೆಂದರೆ, 12 ನೇ ತರಗತಿಯ ನಂತರ ನೀವು ವಿಜ್ಞಾನದಿಂದ ವಾಣಿಜ್ಯಕ್ಕೆ ಅಥವಾ ವಿಜ್ಞಾನದಿಂದ ಕಲೆಗೆ ಬದಲಾಯಿಸಬಹುದು. 12 ನೇ ತರಗತಿಯ ನಂತರ ವಿಜ್ಞಾನದ ಸ್ಟ್ರೀಮ್‌ಗೆ ಹಲವಾರು ವೃತ್ತಿ ಆಯ್ಕೆಗಳು ಸಹ ಲಭ್ಯವಿದೆ.


ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ, ಜೀವಶಾಸ್ತ್ರ ಮುಖ್ಯ ವಿಷಯಗಳಾಗಿವೆ. ಆದರೆ ಗಣಿತವನ್ನು ಇಷ್ಟಪಡದ ಅಥವಾ ಅದರಲ್ಲಿ ಆಸಕ್ತಿಯಿಲ್ಲದ ಅನೇಕ ವಿದ್ಯಾರ್ಥಿಗಳಿದ್ದಾರೆ. ಹೀಗಾಗಿ ನೀವು ವೈದ್ಯಕೀಯ ವೃತ್ತಿಯನ್ನು ಬಯಸಿದರೆ ಗಣಿತವನ್ನು ಬಿಟ್ಟು ಬೇರೆ ವಿಷಯಗಳನ್ನು ಆಯ್ಕೆ ಮಾಡಬಹುದು.


ವಿಜ್ಞಾನ ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆಗಳು:


1. ಬಿಟೆಕ್/ಬಿಇ


2. ಬ್ಯಾಚುಲರ್ ಆಫ್ ಮೆಡಿಸಿನ್ ಮತ್ತು ಬ್ಯಾಚುಲರ್ ಆಫ್ ಸರ್ಜರಿ 


3. ಬ್ಯಾಚುಲರ್ ಆಫ್ ಫಾರ್ಮಸಿ


4. ಬ್ಯಾಚುಲರ್ ಆಫ್ ಮೆಡಿಕಲ್ ಲ್ಯಾಬ್ ಟೆಕ್ನಾಲಜಿ


5. ಬಿಎಸ್ಸಿ ಹೋಮ್ ಸೈನ್ಸ್ / ಫೊರೆನ್ಸಿಕ್ ಸೈನ್ಸ್


2. ವಾಣಿಜ್ಯ:


ವಿಜ್ಞಾನದ ನಂತರ ವಾಣಿಜ್ಯವು ಎರಡನೇ ಅತ್ಯಂತ ಜನಪ್ರಿಯ ಆಯ್ಕೆಯಾಗಿದೆ. ವ್ಯಾಪಾರಕ್ಕೆ ವಾಣಿಜ್ಯ ವಿಭಾಗದ ಆಯ್ಕೆ ಉತ್ತಮವಾಗಿದೆ. ನೀವು ಅಕೌಂಟೆನ್ಸಿ, ಹಣಕಾಸು ಮತ್ತು ಅರ್ಥಶಾಸ್ತ್ರದಲ್ಲಿ ಆಸಕ್ತಿ ಹೊಂದಿದ್ದರೆ ವಾಣಿಜ್ಯ ವಿಭಾಗ ನಿಮಗೆ ಉತ್ತಮ ಆಯ್ಕೆಯಾಗಿದೆ. 


ಇದು ಚಾರ್ಟರ್ಡ್ ಅಕೌಂಟೆಂಟ್, MBA, ಬ್ಯಾಂಕಿಂಗ್ ಕ್ಷೇತ್ರಗಳಿಗೆ ಆಯ್ಕೆಗಳನ್ನು ನೀಡುತ್ತದೆ. ನೀವು ಅಕೌಂಟೆನ್ಸಿ, ಹಣಕಾಸು ಮತ್ತು ಅರ್ಥಶಾಸ್ತ್ರದೊಂದಿಗೆ ಪರಿಚಿತರಾಗಿರಬೇಕು.


ವಾಣಿಜ್ಯ ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆಗಳು:


1. ಚಾರ್ಟರ್ಡ್ ಅಕೌಂಟೆಂಟ್


2. ವ್ಯಾಪಾರ ನಿರ್ವಹಣೆ


3. ಜಾಹೀರಾತು ಮತ್ತು ಮಾರಾಟ ನಿರ್ವಹಣೆ


4. ಡಿಜಿಟಲ್ ಮಾರ್ಕೆಟಿಂಗ್


5. ಮಾನವ ಸಂಪನ್ಮೂಲ ಅಭಿವೃದ್ಧಿ


3. ಕಲೆ/ಮಾನವಶಾಸ್ತ್ರ:


ಕಲೆ/ಮಾನವೀಯ ಶಾಸ್ತ್ರಗಳು ಶೈಕ್ಷಣಿಕ ಸಂಶೋಧನೆಯಲ್ಲಿ ಆಸಕ್ತಿ ಹೊಂದಿರುವವರು ಈ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಇತಿಹಾಸ, ರಾಜ್ಯಶಾಸ್ತ್ರ, ಭೂಗೋಳ ಇವು ಕಲಾ ವಿದ್ಯಾರ್ಥಿಗಳಿಗೆ ಮುಖ್ಯ ವಿಷಯಗಳಾಗಿವೆ.


ಕಲಾ ವಿದ್ಯಾರ್ಥಿಗಳಿಗೆ ವೃತ್ತಿ ಆಯ್ಕೆ:


1. ಉತ್ಪನ್ನ ವಿನ್ಯಾಸ


2. ಮಾಧ್ಯಮ / ಪತ್ರಿಕೋದ್ಯಮ


3. ಫ್ಯಾಷನ್ ತಂತ್ರಜ್ಞಾನ


4. ವಿಡಿಯೋ ರಚನೆ ಮತ್ತು ಸಂಪಾದನೆ


5. ಮಾನವ ಸಂಪನ್ಮೂಲ ತರಬೇತಿ, ಶಾಲಾ ಬೋಧನೆ, ಇತ್ಯಾದಿ


4. ITI (ಕೈಗಾರಿಕಾ ತರಬೇತಿ ಸಂಸ್ಥೆ):


ಶಾಲೆಯನ್ನು ಪೂರ್ಣಗೊಳಿಸಿದ ನಂತರ ಸುಲಭ ಉದ್ಯೋಗವನ್ನು ಬಯಸುವ ವಿದ್ಯಾರ್ಥಿಗಳಿಗೆ ಕೋರ್ಸ್‌ಗಳನ್ನು ಒದಗಿಸುವ ತರಬೇತಿ ಕೇಂದ್ರಗಳಾಗಿವೆ. ಯಾವುದೇ ತಾಂತ್ರಿಕ ಕೋರ್ಸ್ ಅನ್ನು ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಲು ಬಯಸುವ ವಿದ್ಯಾರ್ಥಿಗಳಿಗೆ ಐಟಿಐ ಕೋರ್ಸ್‌ಗಳು ಉತ್ತಮ ಅವಕಾಶಗಳಾಗಿವೆ.


ಇದನ್ನೂ ಓದಿ: Sanjjanaa Galrani: ತಾಯಿಯಾದ ನಟಿ ಸಂಜನಾ ಗಲ್ರಾನಿ, ಇಲ್ಲಿವೆ Cute Photos


ITI ಯಲ್ಲಿ ಕೋರ್ಸ್ ಪೂರ್ಣಗೊಳಿಸುವ ಮೂಲಕ, ವಿದ್ಯಾರ್ಥಿಯು ಕೈಗಾರಿಕಾ ಕೌಶಲ್ಯಗಳಲ್ಲಿ ತರಬೇತಿ ಪಡೆಯಬಹುದು. ಅದೇ ಕ್ಷೇತ್ರದಲ್ಲಿ ಕೆಲಸ ಮಾಡುವ ಮೂಲಕ ಜೀವನೋಪಾಯ ಗಳಿಸಬಹುದು.


ITI ನಂತರ ವೃತ್ತಿ ಆಯ್ಕೆಗಳು:


1.PWD ಮತ್ತು ಇತರ ಸಾರ್ವಜನಿಕ ವಲಯಗಳಲ್ಲಿ ಉದ್ಯೋಗಾವಕಾಶಗಳು.


2.ಖಾಸಗಿ ವಲಯಗಳಲ್ಲಿ ಉದ್ಯೋಗಗಳು


3. ಸ್ವಯಂ ಉದ್ಯೋಗಿ


4.ವಿದೇಶಗಳಲ್ಲಿ ಉದ್ಯೋಗಗಳು


5. ಅವರ ವಿಶೇಷತೆಯಲ್ಲಿ ಹೆಚ್ಚಿನ ಅಧ್ಯಯನಗಳು


5. ಪಾಲಿಟೆಕ್ನಿಕ್ ಕೋರ್ಸ್‌ಗಳು:


10ನೇ ತರಗತಿಯ ನಂತರ ವಿದ್ಯಾರ್ಥಿಗಳು ಮೆಕ್ಯಾನಿಕಲ್, ಸಿವಿಲ್, ಕೆಮಿಕಲ್, ಕಂಪ್ಯೂಟರ್, ಆಟೋಮೊಬೈಲ್ ನಂತಹ ಪಾಲಿಟೆಕ್ನಿಕ್ ಕೋರ್ಸ್‌ಗಳಿಗೆ ಹೋಗಬಹುದು. ಈ ಕಾಲೇಜುಗಳು 3 ವರ್ಷ, 2 ವರ್ಷ ಮತ್ತು 1 ವರ್ಷದ ಡಿಪ್ಲೊಮಾ ಕೋರ್ಸ್‌ಗಳನ್ನು ನೀಡುತ್ತವೆ.  


ಪಾಲಿಟೆಕ್ನಿಕ್ ಕೋರ್ಸ್ ನಂತರ ವೃತ್ತಿ ಆಯ್ಕೆಗಳು:


1. ಖಾಸಗಿ ವಲಯದ ಉದ್ಯೋಗಗಳು


2. ಸರ್ಕಾರಿ ವಲಯದ ಉದ್ಯೋಗಗಳು


3. ಉನ್ನತ ಅಧ್ಯಯನಗಳು


4. ಸ್ವಯಂ ಉದ್ಯೋಗಿ


5. ಸ್ವಂತ ವ್ಯಾಪಾರ


ವೃತ್ತಿಯನ್ನು ಆಯ್ಕೆ ಮಾಡುವುದು ನಿಮ್ಮ ಜೀವನದ ಪ್ರಮುಖ ನಿರ್ಧಾರಗಳಲ್ಲಿ ಒಂದಾಗಿದೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರವು ಕಡಿಮೆ ಅವಧಿಯಲ್ಲಿ ಯಶಸ್ಸಿನ ಶಿಖರಕ್ಕೆ ತಲುಪಲು ಸಹಾಯ ಮಾಡುತ್ತದೆ. ಆದ್ದರಿಂದ ವಿದ್ಯಾರ್ಥಿಯು ತಮ್ಮ ಕೌಶಲ್ಯ, ಆಸಕ್ತಿಗಳು ಮತ್ತು ಸಾಮರ್ಥ್ಯಗಳಿಗೆ ಅನುಗುಣವಾಗಿ ಕ್ಷೇತ್ರವನ್ನು ಆಯ್ಕೆ ಮಾಡುವುದು ಬಹಳ ಮುಖ್ಯ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.