UGC NET June 2024 Result : ಅಕ್ಟೋಬರ್ 18 ಅಂದರೆ ನಾಳೆಯೊಳಗೆ UGC NET ಜೂನ್ 2024 ರ ಪರೀಕ್ಷೆಯ ಫಲಿತಾಂಶವನ್ನು ಘೋಷಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಪ್ರಕಟಿಸಿದೆ.ಫಲಿತಾಂಶದ ಘೋಷಣೆಯ ನಂತರ, UGC NET ಪರೀಕ್ಷೆ 2024ಕ್ಕೆ ಹಾಜರಾದ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಅಂದರೆ ugcnet.nta.ac.in ನಿಂದ ತಮ್ಮ ಫಲಿತಾಂಶಗಳನ್ನು ಪರಿಶೀಲಿಸಿಕೊಳ್ಳಬಹುದು.   NTA ತನ್ನ ಅಧಿಕೃತ X ಹ್ಯಾಂಡಲ್ ಮೂಲಕ ಈ ಸುದ್ದಿಯನ್ನು ಹಂಚಿಕೊಂಡಿದೆ.


COMMERCIAL BREAK
SCROLL TO CONTINUE READING

UGC NET ಜೂನ್ 2024 ಫಲಿತಾಂಶ:
ಅಭ್ಯರ್ಥಿಗಳು ತಮ್ಮ UGC NET ಜೂನ್ ಫಲಿತಾಂಶ 2024 ಅನ್ನು ಪರಿಶೀಲಿಸಲು ಮತ್ತು ಡೌನ್‌ಲೋಡ್ ಮಾಡಲು ಈ ಹಂತಗಳನ್ನು ಅನುಸರಿಸಬಹುದು:


ಹಂತ 1: ಅಧಿಕೃತ ವೆಬ್‌ಸೈಟ್ ಅಂದರೆ ugcnet.nta.ac.in ಗೆ ಹೋಗಿ.
ಹಂತ 2: ಮುಖಪುಟದಲ್ಲಿ, 'UGC NET Result 2024'ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ 3: ನಿಮ್ಮ ಪರದೆಯ ಮೇಲೆ ಹೊಸ ಪುಟವು ಲೋಡ್ ಆಗುತ್ತದೆ.
ಹಂತ 4: ಅಗತ್ಯವಿರುವ ಕ್ರೆಡೆನ್ಶಿಯಲ್ ಹಾಕಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಿ.
ಹಂತ 5: ನಿಮ್ಮ ಫಲಿತಾಂಶವು ಪರದೆಯ ಮೇಲೆ ಕಾಣಿಸುತ್ತದೆ.
ಹಂತ 6: ನಿಮ್ಮ ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.


ಇದನ್ನೂ ಓದಿ : ದೊಡ್ಡ ವೇತನದ ನೌಕರಿ ಬೇಕಿದ್ದರೆ ಈ ಕೋರ್ಸ್ ಗಳನ್ನೇ ಆಯ್ಕೆ ಮಾಡಿಕೊಳ್ಳಿ ! ಪದವಿ ಮುಗಿಯುತ್ತಿದ್ದ ಹಾಗೆ ಕೆಲಸ ಗ್ಯಾರಂಟಿ


ಫೈನಲ್ ಆನ್ಸರ್ ಕೀ ಆಧರಿಸಿ ಫಲಿತಾಂಶ :
UGC NET ಜೂನ್ ಮರು ಪರೀಕ್ಷೆಯನ್ನು 21, 22, 23, 27, 28, 29, 30 ಆಗಸ್ಟ್ ಮತ್ತು 2, 3, 4 ಮತ್ತು 5 ರಂದು ನಡೆಸಲಾಯಿತು. NTA ಯುಜಿಸಿ NET  ಪ್ರೋವಿಷಿನಲ್ ಆನ್ಸರ್ ಕೀಯನ್ನು ಎರಡು ಹಂತಗಳಲ್ಲಿ ಬಿಡುಗಡೆ ಮಾಡಿತ್ತು. ಪ್ರೋವಿಷಿನಲ್ ಆನ್ಸರ್ ಕೀ ಬಿಡುಗಡೆಯಾದ ನಂತರ, ಅಭ್ಯರ್ಥಿಗಳು ಪ್ರತಿ ಪ್ರಶ್ನೆಗೆ 200 ರೂಪಾಯಿ ಶುಲ್ಕವನ್ನು ಪಾವತಿಸುವ ಮೂಲಕ ಆಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿತ್ತು. ಅಕ್ಟೋಬರ್ 12 ರಂದು, NTA UGC NET ಫೈನಲ್ ಆನ್ಸರ್ ಕೀ ಬಿಡುಗಡೆ ಮಾಡಿತು. UGC NET ಜೂನ್ ಫಲಿತಾಂಶ 2024 ಫೈನಲ್ ಆನ್ಸರ್ ಕೀಯನ್ನು ಆಧರಿಸಿ ನೀಡಲಾಗುತ್ತದೆ. 


ಇದನ್ನೂ ಓದಿ : PM Internship Scheme 2024: ನೋಂದಣಿ ಪ್ರಕ್ರಿಯೆ ಆರಂಭ, ಯಾರೆಲ್ಲಾ ಅರ್ಹರು? ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ..!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.