UPSC Admit Card 2024: ಯುಪಿಎಸ್‌ಸಿ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡಲು ಇಲ್ಲಿದೆ ನೇರ ಲಿಂಕ್
UPSC Prelims 2024 Admit Card : UPSC ಪ್ರಿಲಿಮ್ಸ್ ಅಡ್ಮಿಟ್ ಕಾರ್ಡ್ 2024 ಬಿಡುಗಡೆಯಾದ ತಕ್ಷಣ, ಅದರಲ್ಲಿ ನಮೂದಿಸಿದ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು.
ನವದೆಹಲಿ: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್‌ನ CSE ಪ್ರಿಲಿಮ್ಸ್ ಪರೀಕ್ಷೆಯು ಜೂನ್ 16, 2024 ರಂದು ನಡೆಯಲಿದೆ. ಈ ವರ್ಷವೂ ಲಕ್ಷಾಂತರ ಅಭ್ಯರ್ಥಿಗಳು ಯುಪಿಇಸಿ ಸಿಎಸ್‌ಇ ಪ್ರಿಲಿಮ್ಸ್ ಪರೀಕ್ಷೆಗೆ ಹಾಜರಾಗಲಿದ್ದಾರೆ. ಯುಪಿಎಸ್‌ಸಿ ಪ್ರಿಲಿಮ್ಸ್ ಅಡ್ಮಿಟ್ ಕಾರ್ಡ್ 2024 ಅನ್ನು ಅಧಿಕೃತ ವೆಬ್‌ಸೈಟ್‌ಗಳಾದ upsc.gov.in ಮತ್ತು upsconline.nic.in ನಲ್ಲಿ ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ.
ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಯನ್ನು 3 ಹಂತಗಳಲ್ಲಿ ನಡೆಸಲಾಗುತ್ತದೆ. UPSC CSE ಪ್ರಿಲಿಮ್ಸ್ ಅಂದರೆ ಮೊದಲ ಹಂತದ ಪರೀಕ್ಷೆ. UPSC ಪರೀಕ್ಷೆಯ ಪ್ರವೇಶ ಕಾರ್ಡ್ ಬಿಡುಗಡೆಯಾದ ತಕ್ಷಣ, ಅದರಲ್ಲಿ ನಮೂದಿಸಲಾದ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಿ.
UPSC ಪ್ರಿಲಿಮ್ಸ್ ಅಡ್ಮಿಟ್ ಕಾರ್ಡ್ ಬಿಡುಗಡೆಯಾದ ನಂತರ ಏನು ಮಾಡಬೇಕು?
ಈ ವರ್ಷ UPSC ಪ್ರಿಲಿಮ್ಸ್ ಪರೀಕ್ಷೆಯನ್ನು 80 ಕೇಂದ್ರಗಳಲ್ಲಿ ನಡೆಸಲಾಗುವುದು. UPSC ಪ್ರಿಲಿಮ್ಸ್ ಅಡ್ಮಿಟ್ ಕಾರ್ಡ್ 2024 ಬಿಡುಗಡೆಯಾದ ತಕ್ಷಣ, ಅದರಲ್ಲಿ ನಮೂದಿಸಿದ ವಿವರಗಳನ್ನು ಎಚ್ಚರಿಕೆಯಿಂದ ಪರಿಶೀಲಿಸಬೇಕು. ಅಡ್ಮಿಟ್ ಕಾರ್ಡ್‌ನಲ್ಲಿ ಯಾವುದೇ ತಪ್ಪು ಕಂಡುಬಂದಲ್ಲಿ ಅಧಿಕಾರಿಗಳಿಗೆ ತಿಳಿಸಿ, ಸರಿಪಡಿಸಿಕೊಳ್ಳಬೇಕು.
1- ಹೆಸರು
2- ಫೋಟೋ
3- UPSC ಪರೀಕ್ಷಾ ಕೇಂದ್ರದ ವಿಳಾಸ
4- ರೋಲ್ ಸಂಖ್ಯೆ
ಇವುಗಳು ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಬೇಕು.
UPSC ಪ್ರಿಲಿಮ್ಸ್ ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?
1- ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್‌ನ ಅಧಿಕೃತ ವೆಬ್‌ಸೈಟ್ upsc.gov.in ಗೆ ಹೋಗಿ.
2- ಅಡ್ಮಿಟ್ ಕಾರ್ಡ್ ಡೌನ್‌ಲೋಡ್ ಲಿಂಕ್ ವೆಬ್‌ಸೈಟ್‌ನ ಮುಖಪುಟದಲ್ಲಿ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.
3- ಅಲ್ಲಿ ಅಗತ್ಯವಿರುವ ವಿವರಗಳನ್ನು ನಮೂದಿಸಿ.
4- ಯುಪಿಎಸ್‌ಸಿ ಪ್ರಿಲಿಮ್ಸ್ ಅಡ್ಮಿಟ್ ಕಾರ್ಡ್ 2024 ಓಪನ್ ಆಗುತ್ತದೆ.
5- ಅದರಲ್ಲಿ ನಮೂದಿಸಿದ ಎಲ್ಲಾ ವಿವರಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ.
6- ನಂತರ ಈ ಯುಪಿಎಸ್‌ಸಿ ಪ್ರಿಲಿಮ್ಸ್ ಅಡ್ಮಿಟ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿ ಮತ್ತು ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ.
UPSC ಪ್ರಿಲಿಮ್ಸ್ 2024 ಅಡ್ಮಿಟ್ ಕಾರ್ಡ್ ಅನ್ನು upsc.gov.in ಮತ್ತು upsconline.nic.in ನಲ್ಲಿ ಮಾತ್ರ ಬಿಡುಗಡೆ ಮಾಡಲಾಗುತ್ತದೆ. ಈ 2 ವೆಬ್‌ಸೈಟ್‌ಗಳನ್ನು ಹೊರತುಪಡಿಸಿ, ಇದು ಬೇರೆಲ್ಲಿಯೂ ಬಿಡುಗಡೆಯಾಗುವುದಿಲ್ಲ. ಆದ್ದರಿಂದ ಸುಳ್ಳು ಸುದ್ದಿ ಅಥವಾ ತಪ್ಪು ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ.
ಇದನ್ನೂ ಓದಿ: KCET Result 2024 : ಸಿಇಟಿ ಫಲಿತಾಂಶ ಪ್ರಕಟ... ರಿಸಲ್ಟ್ ಡೌನ್‌ಲೋಡ್ ಲಿಂಕ್ ಮತ್ತು ಟಾಪರ್ಸ್ ಲಿಸ್ಟ್ ಇಲ್ಲಿದೆ
UPSC ಯ ಅಧಿಕೃತ ಅಧಿಸೂಚನೆಯ ಪ್ರಕಾರ, UPSC ಪರೀಕ್ಷೆಯ ಮೂಲಕ IAS, IPS, IFS, IRS ಸೇರಿದಂತೆ ವಿವಿಧ ಕೇಂದ್ರ ಸರ್ಕಾರಿ ಸೇವೆಗಳು ಮತ್ತು ಇಲಾಖೆಗಳಲ್ಲಿ ಸುಮಾರು 1056 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಇದರಲ್ಲಿ 40 ಹುದ್ದೆಗಳನ್ನು ವಿಶೇಷಚೇತನರಿಗೆ ಮೀಸಲಿಡಲಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.