ಪ್ರಿಲಿಮಿನರಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಿಶೇಷ ಸೂಚನೆ ನೀಡಿದ ಯುಪಿಎಸ್‌ಸಿ
UPSC Prelims Exam: ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ (ಪ್ರಿಲಿಮಿನರಿ) ಪರೀಕ್ಷೆ 2024ಕ್ಕೆ ಹಾಜರಾಗುವ ಅಭ್ಯರ್ಥಿಗಳಿಗಾಗಿ ಯುಪಿಎಸ್‌ಸಿ ವಿಶೇಷ ಸೂಚನೆಯನ್ನು ನೀಡಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
UPSC Prelims Civil Services 2024: ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ (ಪ್ರಿಲಿಮಿನರಿ) ಪರೀಕ್ಷೆಗೆ ಸಂಬಂಧಿಸಿದಂತೆ ರಾಷ್ಟ್ರದಾದ್ಯಂತ ವಿವಿಧ ಸ್ಥಳಗಳಲ್ಲಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗಾಗಿ ಯುಪಿಎಸ್‌ಸಿ ಕೆಲವು ಸೂಚನೆಗಳನ್ನು ನೀಡಿದೆ. ಪರೀಕ್ಷಾರ್ಥಿಗಳು ಈ ಸೂಚನೆಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ.
ವಾಸ್ತವವಾಗಿ, ಜೂನ್ 16, 2024 ರಂದು ದೇಶಾದ್ಯಂತ ನಾಗರಿಕ ಸೇವೆಗಳ ಪ್ರಿಲಿಮ್ಸ್ 2024 ಪರೀಕ್ಷೆ (Civil Services Prelims 2024 Exam) ನಡೆಯಲಿದೆ. ಈ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಯುಪಿಎಸ್‌ಸಿ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದ್ದು, ಆ ಸೂಚನೆಗಳೇನು ಎಂಬ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ.
ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ (ಪ್ರಿಲಿಮಿನರಿ) ಪರೀಕ್ಷೆ 2024 ಕ್ಕೆ ಹಾಜರಾಗುವ ಅಭ್ಯರ್ಥಿಗಳು ಅನುಸರಿಸಬೇಕಾದ ಸೂಚನೆಗಳೆಂದರೆ...
* ಇ-ಅಡ್ಮಿಟ್ ಕಾರ್ಡ್‌ನ ಪ್ರಿಂಟ್‌ಔಟ್:
ನೀವು ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡಿದ್ದರೆ ಅಂತಹ ಅಭ್ಯರ್ಥಿಗಳು ತಮ್ಮ ಇ-ಅಡ್ಮಿಟ್ ಕಾರ್ಡ್‌ನ (E-Admit Card) ಪ್ರಿಂಟ್‌ಔಟ್ ಅನ್ನು ತೆಗೆದುಕೊಂಡು ನಿಗದಿಪಡಿಸಲಾಗಿರುವ ಪರೀಕ್ಷಾ ಕೇಂದ್ರದಲ್ಲಿ ತೋರಿಸಬೇಕು. ಇಲ್ಲದಿದ್ದರೆ, ಪರೀಕ್ಷೆಗೆ ಕೂರಿಸಲಾಗುವುದಿಲ್ಲ.
ಇದನ್ನೂ ಓದಿ- CBSE Supplementary Exam 2024: ಸಿಬಿಎಸ್‌ಸಿ 10 ನೇ ತರಗತಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಇಲ್ಲಿದೆ
* ಫೋಟೋ ಐಡಿ ಕಾರ್ಡ್:
ಯುಪಿಎಸ್‌ಸಿ ಪರೀಕ್ಷೆಗೆ (UPSC Exam) ಹಾಜರಾಗುವ ಅಭ್ಯರ್ಥಿಗಳು ಪರೀಕ್ಷೆಯ ಪ್ರತಿ ಸೆಷನ್‌ನಲ್ಲಿ ಹಾಜರಾಗುವಾಗ ಇ-ಅಡ್ಮಿಟ್ ಕಾರ್ಡ್‌ನಲ್ಲಿ ನಮೂದಿಸಲಾದ ಫೋಟೋ ಐಡಿ ಕಾರ್ಡ್ ಅನ್ನು ತೋರಿಸಬೇಕು.
* ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರ:
ಒಂದೊಮ್ಮೆ ಅಭ್ಯರ್ಥಿಯ ಇ-ಅಡ್ಮಿಟ್ ಕಾರ್ಡ್‌ನಲ್ಲಿ ನಿಮ್ಮ ಛಾಯಾಚಿತ್ರ ಸ್ಪಷ್ಟವಾಗಿಲ್ಲ ಎಂದಾದರೆ ಅಂತಹವರು ಪರೀಕ್ಷೆಗೆ ತೆರಳುವಾಗ ಎರಡು ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರಗಳೊಂದಿಗೆ ಫೋಟೋ ಗುರುತಿನ ಚೀಟಿಯನ್ನು ಕೊಂಡೊಯ್ಯುವುದನ್ನು ಮರೆಯಬೇಡಿ.
* ಇಮೇಲ್:
ಒಂದೊಮ್ಮೆ ಇ-ಅಡ್ಮಿಟ್ ಕಾರ್ಡ್‌ನಲ್ಲಿ ಯಾವುದೇ ತಪ್ಪಾದ ಮಾಹಿತಿ ನಮೂದಾಗಿದ್ದರೆ ಅಂತಹವರು ತಕ್ಷಣವೇ ಇಮೇಲ್ ಮೂಲಕ (ಇಮೇಲ್ ಐಡಿ uscsp-upsc@nic.in ನಲ್ಲಿ) ಆಯೋಗಕ್ಕೆ ಮಾಹಿತಿ ನೀಡಬೇಕು.
* ಅರ್ಧಗಂಟೆ ಮೊದಲು ಪರೀಕ್ಷಾ ಕೇಂದ್ರಕ್ಕೆ ಹಾಜರಿ:
ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಂಡಿರುವ ಅಭ್ಯರ್ಥಿಗಳು ಪರೀಕ್ಷೆ ಆರಂಭಕ್ಕೂ ಅರ್ಧಗಂಟೆ ಮೊದಲು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಬೇಕು. ನಿಗದಿತ ತಮಕ್ಕಿಂತ ತಡವಾಗಿ ಬರುವ ಅಭ್ಯರ್ಥಿಗಳನ್ನು ಪರೀಕ್ಷಾ ಸ್ಥಳಕ್ಕೆ ಪ್ರವೇಶಿಸಲು ಅನುಮತಿಸುವುದಿಲ್ಲ.
* ಈ ವಸ್ತುಗಳನ್ನು ಪರೀಕ್ಷಾ ಸ್ಥಳಕ್ಕೆ ಕೊಂಡೊಯ್ಯುವಂತಿಲ್ಲ:
ಯುಪಿಎಸ್‌ಸಿ ಸೂಚನೆಗಳ ಪ್ರಕಾರ, ಅಭ್ಯರ್ಥಿಗಳು ಯಾವುದೇ ಯಾವುದೇ ಬೆಲೆಬಾಳುವ ವಸ್ತುಗಳು, ಮೊಬೈಲ್ ಫೋನ್‌ಗಳು, ಸ್ಮಾರ್ಟ್/ಡಿಜಿಟಲ್ ವಾಚ್‌ಗಳು, ಇತರ ಐಟಿ ಗ್ಯಾಜೆಟ್‌ಗಳು, ಪುಸ್ತಕಗಳು, ಬ್ಯಾಗ್‌ಗಳು ಇತ್ಯಾದಿಗಳೊಂದಿಗೆ ಪರೀಕ್ಷಾ ಆವರಣವನ್ನು ಪ್ರವೇಶಿಸಲು ಅನುಮತಿ ಇರುವುದಿಲ್ಲ. ಹಾಗಾಗಿ ಈ ನಿಷೇಧಿತ ವಸ್ತುಗಳನ್ನು ತರದಂತೆ ಅಭ್ಯಾರ್ಟಿಗಳಿಗೆ ಸೂಚಿಸಲಾಗಿದೆ.
* ಕಪ್ಪು ಪೆನ್:
ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಕಪ್ಪು ಬಾಲ್ ಪಾಯಿಂಟ್ ಪೆನ್ ಅನ್ನು ತರಲು ಸೂಚಿಸಲಾಗಿದೆ.
* ಸಾಮಾನ್ಯ ಕೈಗಡಿಯಾರ:
ಅಭ್ಯರ್ಥಿಗಳಿಗೆ ಸಾಮಾನ್ಯ ಕೈಗಡಿಯಾಗಳನ್ನು ಧರಿಸಿ ಪರೀಕ್ಷಾ ಕೊಠಡಿಗಳು/ಹಾಲ್‌ಗಳ ಒಳಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ.
* ಹೆಸರು ಬದಲಾವಣೆ:
ಒಂದೊಮ್ಮೆ ಮೆಟ್ರಿಕ್ಯುಲೇಷನ್ ನಂತರ ಕಾನೂನು ಪ್ರಕ್ರಿಯೆಯಲ್ಲಿ ನಿಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದರೆ ಅಂತಹ ಅಭ್ಯರ್ಥಿಗಳು ಯುಪಿಎಸ್‌ಸಿ ಪರೀಕ್ಷೆಯ ಪ್ರತಿ ಸೆಷನ್‌ಗೆ ಇ-ಅಡ್ಮಿಟ್ ಕಾರ್ಡ್, ಸರ್ಕಾರ ನೀಡಿದ ಫೋಟೋ ಗುರುತಿನ ಚೀಟಿ ಮತ್ತು/ಅಥವಾ ಬದಲಾದ ಹೆಸರಿನ ಮೂಲ ಗೆಜೆಟ್ ಅಧಿಸೂಚನೆಯನ್ನು ಕೊಂಡೊಯ್ಯುವುದು ಕಡ್ಡಾಯವಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.