Edcational qualification of space scientist : ಬ್ರಹ್ಮಾಂಡವು ತುಂಬಾ ದೊಡ್ಡದಾಗಿದೆ. ವಿಜ್ಞಾನಿಗಳ ಪ್ರಕಾರ, ಇಲ್ಲಿಯವರೆಗೆ ಮಾನವರು ಬ್ರಹ್ಮಾಂಡದ 10 ಪ್ರತಿಶತವನ್ನು ಮಾತ್ರ ಅನ್ವೇಷಿಸುವುದು ಸಾಧ್ಯವಾಗಿದೆ.ಒಂದು ವೇಳೆ ಬಾಹ್ಯಾಕಾಶ ವಿಜ್ಞಾನ ನಿಮ್ಮನ್ನು ಆಕರ್ಷಿಸುತ್ತಿದ್ದು, ನಿಮ್ಮ ಮಕ್ಕಳನ್ನು ಬಾಹ್ಯಾಕಾಶ ವಿಜ್ಞಾನಿಯಾಗಿಸಬೇಕು ಎಂದಾದರೆ ಮೊದಲು ಅಧ್ಯಯನದ ಮಾರ್ಗವನ್ನು ಆರಿಸಬೇಕಾಗುತ್ತದೆ.ಬಾಹ್ಯಾಕಾಶ ವಿಜ್ಞಾನಿಯಾಗಲು 10ನೇ ತರಗತಿಯ ನಂತರ ಯಾವ್ ವಿಶ್ಯಾನ್ನು ಆರಿಸಿಕೊಳ್ಳಬೇಕು ಎಂದು ತಿಳಿದಿರಬೇಕು.


COMMERCIAL BREAK
SCROLL TO CONTINUE READING

ಬಾಹ್ಯಾಕಾಶ ವಿಜ್ಞಾನಿಯಾಗಲು 10 ನೇ ನಂತರ ಏನು ಅಧ್ಯಯನ ಮಾಡಬೇಕು: 
1.ಭೌತಶಾಸ್ತ್ರ,ರಸಾಯನಶಾಸ್ತ್ರ ಮತ್ತು ಗಣಿತದೊಂದಿಗೆ ನಿಮ್ಮ 10+2 ಅನ್ನು ಪೂರ್ಣಗೊಳಿಸಬೇಕು. ಬಾಹ್ಯಾಕಾಶ ವಿಜ್ಞಾನ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಕೆಲಸ ಮಾಡಲು ಇದು ಮೂಲ ಶಿಕ್ಷಣವಾಗಿದೆ. 
2.ಏರೋಸ್ಪೇಸ್ ಎಂಜಿನಿಯರಿಂಗ್, ಬಾಹ್ಯಾಕಾಶ ತಂತ್ರಜ್ಞಾನ, ಭೌತಶಾಸ್ತ್ರ ಅಥವಾ ಅಪ್ಲೈಡ್ ಮಾಥ್ಸ್ ನಂಥಹ ವಿಷಯಗಳಲ್ಲಿ ಪದವಿ ಪಡೆಯಬೇಕು.ಇದು ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಅಂಶಗಳಲ್ಲಿ ಬಲವಾದ ಅಡಿಪಾಯವನ್ನು ಒದಗಿಸುತ್ತದೆ. 


ಇದನ್ನೂ ಓದಿ : ಅರಿವು ಯೋಜನೆಯಡಿ ಮತೀಯ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಸಾಲಕ್ಕಾಗಿ ಅರ್ಜಿ ಆಹ್ವಾನ 


3.ಪದವಿಯ ಸಮಯದಲ್ಲಿ,ಇಂಟರ್ನ್‌ಶಿಪ್, ಸಂಶೋಧನಾ ಯೋಜನೆ ಮತ್ತು ವಿದ್ಯಾರ್ಥಿ ಉಪಗ್ರಹ ಅಥವಾ ರಾಕೆಟ್ ವಿನ್ಯಾಸ ಸ್ಪರ್ಧೆ ಇತ್ಯಾದಿಗಳಲ್ಲಿ ಭಾಗವಹಿಸಬೇಕು.ಇದು ನಿಮ್ಮ ತಾಂತ್ರಿಕ ಕೌಶಲ್ಯ ಮತ್ತು ಪ್ರಾಯೋಗಿಕ ಜ್ಞಾನವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ.
4.ಅಸ್ತ್ರೋನೋಟಿಕ್ಸ್, ಸ್ಪೇಸ್ ಎಕ್ಸ್ಫೋರೇಶನ್ ಸಿಸ್ಟಮ್, ಪ್ಲಾನೆಟರಿ ಸಯನ್ಸ್ ನಂಥಹ  ನಿರ್ದಿಷ್ಟ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸುವುದರತ್ತ ಗಮನ ಹರಿಸಬೇಕು. 
5.ಇದರ ಹೊರತಾಗಿ, ಬಾಹ್ಯಾಕಾಶ ವಿಜ್ಞಾನದಲ್ಲಿ ಪಿಎಚ್‌ಡಿ ಪ್ರೋಗ್ರಾಂಗೆ ನೇರವಾಗಿ ಅರ್ಜಿ ಸಲ್ಲಿಸಬಹುದು.ದು ಸ್ವತಂತ್ರ ಸಂಶೋಧನೆ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. 
6. ನಿಮ್ಮ ಶೈಕ್ಷಣಿಕ ಪ್ರಯಾಣದ ಉದ್ದಕ್ಕೂ,ಹೊಸ ಬಾಹ್ಯಾಕಾಶ ಪರಿಶೋಧನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಟ್ಟುಕೊಳ್ಳಿ ಅಂದರೆ ಈ ಕ್ಷೇತ್ರದಲ್ಲಿ ಹೊಸದೇನಾದರೂ ನಡೆಯುತ್ತಿದ್ದರೆ,ಇದಕ್ಕೆ ಸಂಬಂಧಿಸಿದ ಸೆಮಿನಾರ್ ಮತ್ತು ಕಾರ್ಯಾಗಾರಗಳಲ್ಲಿ ಭಾಗವಹಿಸಿ. 


ಇದನ್ನೂ ಓದಿ : ತಾಯಿ ನೃತ್ಯ ಕಲಾವಿದೆ ತಂದೆ ಸ್ಟಾರ್ ಕ್ರಿಕೆಟರ್ ಆದರೂ ಸನಾ ಗಂಗೂಲಿ ಆಯ್ಕೆ ಮಾಡಿದ್ದು ಈ ವೃತ್ತಿ ಬದುಕು! ಅವರ ವಿದ್ಯಾಭ್ಯಾಸ ಪೂರೈಸಿದ್ದು ಈ ವಿವಿಯಲ್ಲಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.