Davanagere: SBI ಬ್ಯಾಂಕ್ ಲಾಕರ್ನಲ್ಲಿದ್ದ 13 ಕೋಟಿ ರೂ. ಮೌಲ್ಯದ 17.750 KG ಚಿನ್ನಾಭರಣ ಕಳುವು!
Davanagere SBI bank: ಈ SBI ಬ್ಯಾಂಕ್ ಜನವಸತಿ ಕಡಿಮೆ ಇರುವ ಪ್ರದೇಶದಲ್ಲಿದೆ. SBI ಬ್ಯಾಂಕ್ ಸುತ್ತಮುತ್ತ ಸಾಕಷ್ಟು ಗಿಡಗಂಟಿಗಳು ಬೆಳೆದಿವೆ. ಖದೀಮರು ಸೋಮವಾರ ರಾತ್ರಿ ಬ್ಯಾಂಕಿನ ಕಿಟಕಿಯನ್ನು ಗ್ಯಾಸ್ ಕಟರ್ನಿಂದ ಕಟ್ ಮಾಡಿ ಒಳಗೆ ಪ್ರವೇಶಿಸಿದ್ದಾರೆ. ಬಳಿಕ ಲಾಕರ್ ಅನ್ನು ಸಹ ಗ್ಯಾಸ್ ಕಟರ್ನಿಂದ ಕಟ್ ಮಾಡಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ.
Gold stolen in Davanagere SBI bank: SBI ಬ್ಯಾಂಕ್ ಲಾಕರ್ನ 509 ಬ್ಯಾಗ್ಗಳಲ್ಲಿದ್ದ 13 ಕೋಟಿ ರೂ. ಮೌಲ್ಯದ 17 ಕೆಜಿ 750 ಗ್ರಾಂ ಚಿನ್ನಾಭರಣ ಕಳ್ಳತನವಾಗಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ಪಟ್ಟಣದಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬ್ಯಾಂಕ್ನಲ್ಲಿ ಸೋಮವಾರ (ಅ.28) ಕಳ್ಳತನದ ಘಟನೆ ನಡೆದಿದೆ.
ಕಳ್ಳತನದ ವಿಚಾರವನ್ನು ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಬೆರಳಚ್ಚು ತಜ್ಞ ಮತ್ತು ಡಾಗ್ ಸ್ಕ್ಯ್ವಾಡ್ ತಂಡ ತಪಾಸಣೆ ನಡೆಸಿತು. ಬ್ಯಾಂಕ್ ಹೊರಗೆ ಮತ್ತು ಒಳಗೆ ಎಲ್ಲಾ ಕಡೆ ತಡಕಾಡಿದರೂ ಕಳ್ಳರ ಯಾವುದೇ ರೀತಿಯ ಸುಳಿವು ಪತ್ತೆಯಾಗಿಲ್ಲ.
ಇದನ್ನೂ ಓದಿ: ರಾಜ್ಯ ಸರಕಾರ ಮಣ್ಣು ತಿನ್ನುವ ಕೆಲಸ ಮಾಡುತ್ತಿದೆ: ಬಿ.ವೈ ವಿಜಯೇಂದ್ರ
ಈ SBI ಬ್ಯಾಂಕ್ ಜನವಸತಿ ಕಡಿಮೆ ಇರುವ ಪ್ರದೇಶದಲ್ಲಿದೆ. SBI ಬ್ಯಾಂಕ್ ಸುತ್ತಮುತ್ತ ಸಾಕಷ್ಟು ಗಿಡಗಂಟಿಗಳು ಬೆಳೆದಿವೆ. ಖದೀಮರು ಸೋಮವಾರ ರಾತ್ರಿ ಬ್ಯಾಂಕಿನ ಕಿಟಕಿಯನ್ನು ಗ್ಯಾಸ್ ಕಟರ್ನಿಂದ ಕಟ್ ಮಾಡಿ ಒಳಗೆ ಪ್ರವೇಶಿಸಿದ್ದಾರೆ. ಬಳಿಕ ಲಾಕರ್ ಅನ್ನು ಸಹ ಗ್ಯಾಸ್ ಕಟರ್ನಿಂದ ಕಟ್ ಮಾಡಿ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ.
ಬೆರಳಚ್ಚು ಗುರುತು ಸಿಗದೆ ಹ್ಯಾಂಡ್ ಗ್ಲೌಸ್ ಹಾಕಿಕೊಂಡು ಖತರ್ನಾಕ್ ಖದೀಮರು ಕಳ್ಳತನ ಮಾಡಿದ್ದಾರೆ. ಶ್ವಾನಗಳಿಗೆ ಯಾವುದೇ ರೀತಿ ವಾಸನೆ ಗ್ರಹಿಕೆಯಾಗಬಾರದು ಅಂತಾ ಬ್ಯಾಂಕ್ ತುಂಬಾ ಖಾರದ ಪುಡಿ ಹಾಕಿ ಪರಾರಿಯಾಗಿದ್ದಾರೆ. ಜೊತೆಗೆ ಬ್ಯಾಂಕ್ನ CCTVಯ ಡಿವಿಆರ್ ಅನ್ನು ಸಹ ಕಳ್ಳರು ಎತ್ತುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: ಅಕ್ರಮ ಮದ್ಯ ಮಾರಾಟ ಬಂದ್ ಮಾಡುವಂತೆ ಪಟ್ಟು
ನ್ಯಾಮತಿಯ SBI ಬ್ಯಾಂಕ್ನಲ್ಲಿ 13 ಕೋಟಿ ಮೌಲ್ಯದ ಚಿನ್ನ ಕಳುವು ಆಗಿರುವುದು ಅಲ್ಲಿನ ಗ್ರಾಹಕರ ನಿದ್ದೆಗೆಡಿಸಿದೆ. ನಮ್ಮ ಚಿನ್ನಾಭರಣ ಮತ್ತು ದುಡ್ಡಿಗೆ ಭದ್ರತೆ ನೀಡುವವರು ಯಾರು ಅನ್ನೋ ಆತಂಕ ಗ್ರಾಹಕರಲ್ಲಿ ಮೂಡಿದೆ. ಆದಷ್ಟು ಬೇಗ ಕಳ್ಳರನ್ನು ಪತ್ತೆಹಚ್ಚಬೇಕೆಂದು ಪೊಲೀಸರಿಗೆ ಗ್ರಾಹಕರು ಒತ್ತಾಯಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.