ಬೆಂಗಳೂರು : ಜುಲೈ 16ರಂದು ಬೆಂಗಳೂರಿನ ನೈಸ್ ರಸ್ತೆ ಬಳಿಯ ಅಂಡರ್ ಪಾಸ್‌ನಲ್ಲಿ ಯುವಕನೊಬ್ಬನ ಬರ್ಬರ ಹತ್ಯೆಯಾಗಿತ್ತು. ಈಗ ಈ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಕೊಲೆ ಮಾಡಿರುವುದು ನಟೋರಿಯಸ್ ರೌಡಿಶೀಟರ್ ಕುಳ್ಳು ರಿಜ್ವಾನ್ ಸಹಚರರು ಎಂಬುದು ಪೊಲೀಸರ ತನಿಖೆ ವೇಳೆ ಗೊತ್ತಾಗಿದೆ. 


COMMERCIAL BREAK
SCROLL TO CONTINUE READING

ನಿಮ್ಮ ಬಾಸ್ ಗೊತ್ತಿಲ್ಲ ಎಂದಿದ್ದಕ್ಕೆ‌ ಕೊಲೆ..!


ಕೊಲೆಯಾದ ಹೇಮಂತ್, ಅವತ್ತು ಹುಟ್ಟುಹಬ್ಬ ಆಚರಿಸಿಕೊಳ್ಳುವುದಕ್ಕಾಗಿ ಮೂವರು ಸ್ನೇಹಿತರ ಜೊತೆ  ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ನೈಸ್ ರಸ್ತೆ ಬಳಿ ಇರುವ ಅಂಡರ್ ಪಾಸ್ ಒಂದರ ಬಳಿ ಹೋಗಿದ್ದ. ಇದೇ ವೇಳೆ ಕುಳ್ಳು ರಿಜ್ವಾನ್ ಶಿಷ್ಯಂದಿರೂ ಅದೇ ಜಾಗದಲ್ಲಿ ಎಣ್ಣೆ ಪಾರ್ಟಿ ಮಾಡುತ್ತಿದ್ದರು. ಇತ್ತ ಹೇಮಂತ್ ಹಾಗೂ ಸ್ನೇಹಿತರು ಪಾರ್ಟಿ ಮಾಡುತ್ತಾ ಎಂಜಾಯ್ ಮಾಡುತ್ತಿದ್ದರು. ಈ ವೇಳೆ ಹೇಮಂತ್ ಹಾಗೂ ಸ್ನೇಹಿತರ ನಡುವೆ ರೌಡಿಸಂ ಬಗ್ಗೆ ಮಾತುಕತೆ ಆರಂಭವಾಗಿತ್ತು. ಮಾತಿನ ಭರದಲ್ಲಿ‌ ಹೇಮಂತ್ ಈಗ ಯಾವ ರೌಡಿಗಳು ಏನೂ ಇಲ್ಲಾ ಎಂದು ಜೋರಾಗಿ ಮಾತನಾಡಿದ್ದ. ಇದನ್ನು‌ ಸ್ಥಳದಲ್ಲಿಯೇ ಇದ್ದ ಕುಳ್ಳು ರಿಜ್ವಾನ್ ಶಿಷ್ಯರು ಕೇಳಿಸಿಕೊಂಡು ಕೋಪಗೊಂಡಿದ್ದರು. ಇನ್ನೇನು ಪಾರ್ಟಿ ಮುಗಿಸಿ ಸ್ಥಳದಿಂದ ಹೊರಟಿದ್ದ ಹೇಮಂತನನ್ನು ಡೆದು ನಮ್ಮ ಬಾಸ್ ಗೊತ್ತಿಲ್ವಾ ಎಂದು ಕೇಳಿದ್ದಾರೆ. ಈ ವೇಳೆ ಹೇಮಂತ್
ಯಾವ ಬಾಸ್, ನನಗೆ ಯಾರು ಗೊತ್ತಿಲ್ಲ ಎಂದಿದ್ದಾನೆ. 


ಇದನ್ನೂ ಓದಿ : Acid Naga Case : ಕಾಮಾಕ್ಷಿಪಾಳ್ಯ ಆ್ಯಸಿಡ್ ಕೇಸ್: ನಾಗನ ವಿರುದ್ಧ ಸಿಕ್ತು ಬಲವಾದ ಸಾಕ್ಷ್ಯ..!


ರಿಜ್ವಾನ್ ಶಿಷ್ಯರು ಸಹ ನಮ್ಮ ಬಾಸ್, ನಮ್ಮ  ಡಾನ್  ಕುಳ್ಳು ರಿಜ್ವಾನ್ ಗೊತ್ತಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಹೇಮಂತ್ ಸಹ ಗೊತ್ತಿಲ್ಲ ಎಂದು ಏರುಧ್ವನಿಯಲ್ಲೇ ಉತ್ತರಿಸಿದ್ದಾನೆ. ಇದರಿಂದ ರೊಚ್ಚಿಗೆದ್ದ ಕುಳ್ಳು ರಿಜ್ವಾನ್ ಸಹಚರರು ಮಚ್ಚಿನಿಂದ ಹೇಮಂತ್ ಮುಖಕ್ಕೆ ಗುರುತು ಸಿಗದಂತೆ ನೂರಕ್ಕೂ ಹೆಚ್ಚು ಬಾರಿ ಹೊಡೆದಿದ್ದಾರೆ. ಇದನ್ನೆಲ್ಲ ಕಣ್ಣಾರೆ ಕಂಡು ಭಯಭೀತರಾದ ಹೇಮಂತ್ ಸ್ನೇಹಿತರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಇಷ್ಟೇ ಅಲ್ಲದೇ ದುಷ್ಕರ್ಮಿಗಳು ಮಚ್ಚಿನಿಂದ ಹೇಮಂತನ ಮುಖ ಕೊಚ್ಚುವ ವಿಡಿಯೋ ರೆಕಾರ್ಡ್ ಮಾಡಿ ಕುಳ್ಳು ರಿಜ್ವಾನ್‌ಗೆ ಕಳುಹಿಸಿ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಇತ್ತ ಪ್ರಕರಣ ಸಂಬಂಧ ಕೆಂಗೇರಿ ಪೊಲೀಸರ ತನಿಖೆ ವೇಳೆ ಹೇಮಂತ್ ಜೊತೆ ಪಾರ್ಟಿ ಮಾಡಿದ್ದವರೇ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿತ್ತು. 


ನಂತರ ಹೇಮಂತ್ ಸ್ನೇಹಿತರು ಬೇರೆ ಯಾರನ್ನೋ ಕರೆಸಿ ಕೊಲೆ ಮಾಡಿಸಿರಬಹುದು ಎಂದು ಊಹಿಸಲಾಗಿತ್ತು. ಆದರೆ ಕೆಂಗೇರಿ ಪೊಲೀಸರ ತನಿಖೆ ನಡೆಯುತ್ತಿರುವಾಗಲೇ ಕೆಂಪೇಗೌಡ ನಗರ ಪೊಲೀಸರು ಶಿವಮೊಗ್ಗದಲ್ಲಿ ಕುಳ್ಳು ರಿಜ್ವಾನ್ ಲಾಕ್ ಮಾಡಿದ್ದಾರೆ. ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸುವಾಗ ರಿಜ್ವಾನ್ ಶಿಷ್ಯರು ಕೊಲೆ ಮಾಡುತ್ತಿರುವ ವಿಡಿಯೋ ನೋಡಿ ಪೊಲೀಸರು ಶಾಕ್ ಆಗಿದ್ದರು. ಸದ್ಯ ವಿಡಿಯೋ ಆಧರಿಸಿ ವಿಚಾರಣೆ ನಡೆಸಿದಾಗ ಕೊಲೆ ಹಿಂದಿನ ರಹಸ್ಯ ಬಯಲಾಗಿದ್ದು, ಸದ್ಯ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. 


ಇನ್ನು ಬೆಂಗಳೂರಿನ ಹಲವೆಡೆ ಡ್ರಗ್ಸ್ ಸಪ್ಲೈ, ರಾಬರಿ, ಕೊಲೆ ಯತ್ನ, ಹಫ್ತಾ ವಸೂಲಿ, ಬೆದರಿಕೆ ಹಾಕಿ ಹಣದ ಬೇಡಿಕೆ ಹೀಗೆ ಹಲವಾರು ಕೃತ್ಯದಲ್ಲಿ ಕುಳ್ಳು ರಿಜ್ವಾನ್ ಭಾಗಿಯಾಗಿದ್ದಾನೆ. ಈತನ ಟೀಮ್‌ನಲ್ಲಿ ನಗರದ ಇನ್ನೂರಕ್ಕೂ ಹೆಚ್ಚು ರೌಡಿಗಳಿದ್ದಾರೆ. ಇವರೆಲ್ಲ ಕುಳ್ಳು ರಿಜ್ವಾನ್ ಅಣತಿಯಂತೆ ಕೆಲಸ ಮಾಡುತ್ತಾರಂತೆ. ಕುಳ್ಳು ರಿಜ್ವಾನ್ ಸದ್ಯ ಪೊಲೀಸರ ವಶದಲ್ಲಿದ್ದಾನೆ.


ಇದನ್ನೂ ಓದಿ : ಪೊಲೀಸ್ ಆಯುಕ್ತರ ಕಚೇರಿ ಬಳಿಯೇ ಲಕ್ಷ ಲಕ್ಷ ದೋಚಿದ ಖದೀಮರು..!


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.