ಬೆಂಗಳೂರು : ಅದೊಂದು ವ್ಯವಸ್ಥಿತ ಗ್ಯಾಂಗ್.. ಸಿಲಿಕಾನ್ ಸಿಟಿಯ ರಾತ್ರಿ ಲೋಕಕ್ಕೆ ಮತ್ತೇರಿಸುವ ಜಾಲವದು.. ಹೊರ ರಾಜ್ಯದಿಂದ ಸದ್ದಿಲ್ಲದ ನಶೆ ಏರಿಸಲು ಬಂದಿದ್ದ ಗಾಂಜಾ ವಾಸನೆ ಖಾಕಿ ಮೂಗಿಗೆ ಬಡಿದಿತ್ತು.. ಸಿಕ್ಕ ವಾಸನೆಯ ಜಾಡು ಹಿಡಿದ ಪೊಲೀಸರು ಭರ್ಜರಿ ಭೇಟೆಯಾಡಿದ್ದು, ಬರೋಬ್ಬರಿ 2 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತುವನ್ನ.


COMMERCIAL BREAK
SCROLL TO CONTINUE READING

ಯಸ್, ಸಿಲಿಕಾನ್ ಸಿಟಿಗೆ ಗಾಂಜಾ ಮತ್ತೇನು ಹೊಸದಲ್ಲ.. ಮಿಡ್ ನೈಟ್ ಮೋಜು ಮಸ್ತಿ ಅಂತ ಕುಣಿಯೋ ಯುವಕರಿಗೆ ಗಾಂಜಾ ಅನ್ನೊದು ಅಸಾಧ್ಯದ ಮಾತು.. ಹಾಗಂತ ಇದಕ್ಕೆಲ್ಲಾ ಬ್ರೇಕ್ ಹಾಕೊ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರು ಅದೆಷ್ಟೇ ಪ್ರಯತ್ನ ಪಟ್ಟರು ಗಾಂಜಾ ಮಾತ್ರ ಸಿಲಿಕಾನ್ ಸಿಟಿಗೆ ಎಂಟ್ರಿ ಕೊಡುತ್ತಲೇ ಇದೆ.. ಇನ್ನು ಇದೇ ರೀತಿ ಸದ್ದಿಲ್ಲದೇ ಎಂಟ್ರಿ ಕೊಟ್ಟ ಗಾಂಜಾ ಮೂಲ ಕೆದಕಿದ ಡಿಜೆ ಹಳ್ಳಿ ಪೊಲೀಸರಿಗೆ ದೊಡ್ಡ ಜಾಲವೇ ಬಲೆಗೆ ಬಿದ್ದಂತಾಗಿದ್ದು, ಇಬ್ಬರ ಬಂಧನದಿಂದ ಬರೊಬ್ಬರಿ 2.4 ಕೋಟಿಯಷ್ಟು ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ..


ಇದನ್ನೂ ಓದಿ: ಟ್ರ್ಯಾಪ್‌ನಲ್ಲಿ ಲಾಕ್ ಆದ ಪ್ರಶಾಂತ್‌ಗೆ ಮತ್ತೊಂದು ಶಾಕ್..! ಮಾಡಾಳ್‌ಗೆ 'ಲೋಕಾ' ತಲಾಶ್


ಇವರೇ ನೋಡಿ ಆ ಕದೀಮರು.. ಹೆಸರು ನವಾಜ್ ಹಾಗೂ ರೆಹಮಾನ್.. ಡಿಜೆಹಳ್ಳಿ ನಿವಾಸಿಗಳಾದ ಇವರು ಪೆಡ್ಲರ್ ಗಳು.. ಏರಿಯಾಗಳಲ್ಲಿ ತನ್ನದೇ ನೆಟ್ವರ್ಕ್ ಗಳನ್ನು ಹೊಂದಿರೊ ಈ ಇಬ್ಬರು ಗಾಂಜಾ ಮಾರಾಟವನ್ನೇ ಕಾಯಕವನ್ನಾಗಿ ಮಾಡಿಕೊಂಡಿದ್ದಾರೆ.. ಇನ್ನು ಬಂಧಿತರಲ್ಲಿ ರೆಹಮಾನ್ ಗೆ ಜೈಲೆಂಬುದು ಇದೇ ಮೊದಲಲ್ಲ.. ಈ ಹಿಂದೆ ಅಂದ್ರೆ 2017 ರಲ್ಲಿ ಗಾಂಜಾ ಕೇಸ್ ನಲ್ಲಿ ಸಿಸಿಬಿಗೆ ಸಿಕ್ಕಾಗ ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದ.. ಆ ಬಳಿಕ ಬಂಧಿಸಿದ್ದ ಆಗಿನ ಪೊಲೀಸರು ಏರೊಪ್ಲೇನ್ ಹತ್ತಿಸಿದ್ರು, ಇನ್ನು ಈ ಹಳೆ ಕಸುಬು ಬಿಟ್ಟಿಲ್ಲ.. ಆಂಧ್ರದ ವೈಜಾಗದ ಲಿಂಕ್ ಹೊಂದಿದ್ದ ಈತ ಪೊಲೀಸರಿಗೆ ಸಿಗದಂತೆ ಬೇರೆ ಮಾರ್ಗದ ಮೂಲಕ ವ್ಯವಹಾರ ನಡೆಸಿದ್ರು ಅದರ ಕಹಾನಿ ಕೇಳಿದ ಪೊಲೀಸರ ಒಮ್ಮೆಲೆ ಶಾಕ್ ಆಗಿದ್ದಾರೆ..


ಹೌದು, ಗಾಂಜಾ ಅಂದ್ರೆ ಎಲ್ಲೆಡೆ ಸಿಗತ್ತೆ ಆದ್ರೆ ಪ್ರ್ಯೂರ್ ಮಾಲ್ ಅನ್ನೊದು ವೈಜಾಕದ ಅರಕು ಎಂಬ ಊರಿನಲ್ಲಿ ಸಿಗತ್ತೆ.. ಇನ್ನು ಅದರ ಕೊಟೆಗೆ ಲಗ್ಗೆ ಇಟ್ಟ ರೆಹಮಾನ್ ಡೀಲರ್ ಜೊತೆ ವ್ಯವಹಾರ ನಡೆಸಿದ್ದ.. ಅದರಂತೆ ಡೀಲರ್ ಗಳು ಹೇಳಿದಷ್ಟು ಮಾಲ್ ಗಳನ್ನು ಟ್ರೈನ್ ನಲ್ಲಿ ತುಂಬಿಕೊಂಡು ಬರುತಿದ್ರು.. ನಂತರ ಮೊದಲೇ ನಿರ್ಧರಿಸಿದಂತೆ ಯಾವುದೇ ಕಾಲ್, ಮೆಸೆಜ್ ಇಲ್ಲದೇ ಬೆಂಗಳೂರಿನ ಅದೊಂದು ಏರಿಯಾದಲ್ಲಿ ಚಲಿಸುತಿದ್ದ ಟ್ರೈನ್ ನಿಂದಲೇ ಗಾಂಜಾದ ಮೂಟೆಗಳನ್ನು ಎಸೆದು ಹೋಗುತಿದ್ರು.. ಬಳಿಕ ಈ ವೇಳೆ ಅಲ್ಲೇ ಇರುತಿದ್ದ ರೆಹಮಾನ್, ನವಾಜ್ ಗಾಂಜಾ ತಂದು ಮಾರಾಟ ಮಾರಾಟ ಮಾಡುತಿದ್ದರು.. 


ಇದನ್ನೂ ಓದಿ:Bribe case: ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗಾಗಿ ತೀವ್ರ ಹುಡುಕಾಟ!


ಸದ್ಯ ಇಬ್ಬರು ಆರೋಪಿಗಳ ಬಂಧಿಸಿರೊ ಡಿಜೆಹಳ್ಳಿ ಪೊಲೀಸರು, ಗಾಂಜಾ ಮೂಲಕ್ಕೆ ಕೈ ಹಾಕಲು ಮುಂದಾಗಿದ್ದಾರೆ.. ಪೆಡ್ಲರ್ ಗಳ ಬಿಟ್ಟು ಡೀಲರ್ ಗಳನ್ನೇ ಖೆಡ್ಡಕೆ ಕೆಡವಲು ಬಲೆ ಬೀಸಿದ್ದು, ಶೀಘ್ರದಲ್ಲೇ ಗಾಂಜಾ ಕೇಸ್ ನಲ್ಲಿ ಮತ್ತಷ್ಟು ತಿಮಿಂಗಲಗಳು ಬಲೆಗೆ ಬೀಳೊ ಸಾಧ್ಯತೆ ಇದೆ..https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.