Drunken called Ambulance : ಕುಡಿದ ಮತ್ತಿನಲ್ಲಿ ಮದ್ಯಪ್ರಿಯರು ಏನ್‌ ಮಾಡ್ತಾರೆ ಅಂತ ಅವರಿಗೆ ಗೊತ್ತಿರುವುದಿಲ್ಲ. ಸಧ್ಯ ಕುಡುನೊಬ್ಬ ಕುಡಿದ ಮತ್ತಿನಲ್ಲಿ 108 ಕರೆ ಮಾಡಿ ಆಂಬ್ಯುಲೆನ್ಸ್ ಕರೆಯಿಸಿಕೊಂಡು ತನ್ನನ್ನು ತನ್ನ ಊರಿಗೆ ಡ್ರಾಪ್‌ ಮಾಡುವಂತೆ ಕೇಳಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.


COMMERCIAL BREAK
SCROLL TO CONTINUE READING

ವ್ಯಕ್ತಿಯೊಬ್ಬ ವಿಪರೀತ ಕುಡಿದು ನಡೆಯಲು ಸಹ ತ್ರಾಣವಿಲ್ಲದೆ ತುರ್ತು ಸೇವೆ 108ಗೆ ಕರೆ ಮಾಡಿದ್ದಾನೆ. ಅರ್ಜೆಂಟ್.. ಅಪಘಾತವಾಗಿದೆ ಅಂತ ಭಾವಿಸಿದ ಆಂಬ್ಯುಲೆನ್ಸ್ ಸಿಬ್ಬಂದಿ ಕೆಲವೇ ನಿಮಿಷಗಳಲ್ಲಿ ಅಲ್ಲಿಗೆ ತಲುಪಿದ್ದರು. ಆದ್ರೆ ನಿಜ ಸ್ಥಿತಿ ತಿಳಿದು ಬೆಚ್ಚಿಬಿದ್ದಿದ್ದಾರೆ. 


ಇದನ್ನೂ ಓದಿ:ಗ್ಯಾರಂಟಿ ಯೋಜನೆ ರದ್ದು, ಕಾಂಗ್ರೆಸ್ ಪಕ್ಷದ ರಹಸ್ಯ ಚರ್ಚೆ ಬಯಲು : ಹೆಚ್‌ಡಿಕೆ


ಹೌದು... ಈ ಘಟನೆ ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ನಡೆದಿದೆ. ಹೈದರಾಬಾದ್-ವಾರಂಗಲ್ ರಾಷ್ಟ್ರೀಯ ಹೆದ್ದಾರಿಯ ಭುವನಗಿರಿಯಲ್ಲಿ ರಮೇಶ್ ಎಂಬ ವ್ಯಕ್ತಿ ಬುಧವಾರ 108ಗೆ ಕರೆ ಮಾಡಿದ್ದಾನೆ. ವಿಪರೀತ ಕುಡಿದಿದ್ದ ಆತ, ನಡೆಯಲು ಸಾಧ್ಯವಾಗದೆ ಆಂಬುಲೆನ್ಸ್‌ಗೆ ಕರೆ ಮಾಡಿದ್ದ.


ಇನ್ನು ತುರ್ತು ಪರಿಸ್ಥಿತಿ ಅಂತ ಸ್ಥಳಕ್ಕೆ ಬಂದ ಆಂಬ್ಯುಲೆನ್ಸ್‌ ಸಿಬ್ಬಂದಿ ಕುಡುಕನ್ನು ಕಂಡು ಶಾಕ್‌ ಆಗಿದ್ದಾರೆ. ಅಲ್ಲದೆ, ಆತ ತನ್ನನ್ನು ತಮ್ಮ ಊರಿಗೆ ಕರೆದುಕೊಂಡು ಹೋಗುವಂತೆ 108 ಸಿಬ್ಬಂದಿ ಜೊತೆ ವಾಗ್ವಾದಕ್ಕೆ ಇಳಿದಿದ್ದಾನೆ. ಈ ದೃಶ್ಯವನ್ನು ಸಿಬ್ಬಂದಿ ತಮ್ಮ ಫೋನ್‌ ಕ್ಯಾಮರಾದಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದಾರೆ.


ಇದನ್ನೂ ಓದಿ:ಇಷ್ಟು ಕಳಪೆ ಬಜೆಟ್ ನಾನು ನೋಡಿರಲಿಲ್ಲ: ಡಿಸಿಎಂ ಡಿ.ಕೆ.ಶಿವಕುಮಾರ್


ಹೈದರಾಬಾದ್‌ನಿಂದ ಜನಗಾಮಕ್ಕೆ ಹೋಗಬೇಕು. ನಡೆದಾಡಲು ಸಾಧ್ಯವಾಗುತ್ತಿಲ್ಲ, ಬಸ್‌ಗಳಿಲ್ಲ. ನನ್ನನ್ನು ಜನಗಾಮಕ್ಕೆ ಬಿಡಿ. ನನಗೆ ತುರ್ತು ಪರಿಸ್ಥಿತಿ ಇದೆ. ನಾನು ಮೂರ್ಛೆ ಹೋಗಬಹುದು ಅಂತ ಕುಡುಕ ಆಂಬ್ಯುಲೆನ್ಸ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದಾನೆ.


ಕೊನೆಗೆ ಕುಡುಕನ ಕಾಟಕ್ಕೆ ಬೇಸತ್ತ ಸಿಬ್ಬಂದಿ ಅವನನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಸಧ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಮೇಶನ ಜಾಣತನ ಕಂಡು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಘಟನೆ ಕುರಿತು ಯಾವುದೇ ಅಧಿಕಾರಿಗಳು ಇನ್ನೂ ಸ್ಪಂದಿಸಿಲ್ಲ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.