ಬೆಂಗಳೂರು: ಪಿಎಫ್ಐ ಹಾಗೂ ಅದರ ಅಂಗ ಸಂಸ್ಥೆಗಳ ಮೇಲೆ‌ ಪೊಲೀಸರು ಹಾಗೂ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದರು. ಈಗ ಕೆಲ ಸಾಕ್ಷಿಗಳು ಹಾಗೂ ದಾಖಲೆಗಳನ್ನು ಪರಿಗಣಿಸಿ ಕೇಂದ್ರ ಸರ್ಕಾರ ಪಿಎಫ್‌ಐ ಸೇರಿ 9 ಸಂಘಟನೆಯನ್ನು ಬ್ಯಾನ್‌ ಮಾಡಿದೆ. ಸದ್ಯ ಅಧಿಕಾರಿಗಳ ದಾಳಿ ವೇಳೆ ಕೆಲವೊಂದು ಪೂರಕ ಸಾಕ್ಷಿಗಳು ಮತ್ತೆ ದೊರೆಯುತ್ತಿವೆ. ಪೊಲೀಸರು ಇವುಗಳನ್ನು ಪರಿಶೀಲಿಸಿದಾಗ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ಐ) ಕುರಿತ ಸ್ಫೋಟಕ ಸಂಗತಿ ಹೊರಬಿದ್ದಿದೆ.


COMMERCIAL BREAK
SCROLL TO CONTINUE READING

ಸಿಎಫ್ಐ ಮುಖಂಡರು ಗುರಿಯಾಗಿಸಿಕೊಂಡು ಯುವ ಸಮುದಾಯ ಮತ್ತು ವಿದ್ಯಾರ್ಥಿಗಳನ್ನು ಬ್ರೈನ್‌ ವಾಶ್‌ ಮಾಡುತ್ತಿದ್ದರು ಎಂಬುದಕ್ಕೆ ಒಂದು ಚಿತ್ರ ಹಾಗೂ ಅದರಲ್ಲಿ ಬರೆದಿರುವ ಅಂಶಗಳೇ‌‌ ಸಾಕ್ಷಿಯಾಗಿವೆ. 'ಜಿನೋಸೈಡ್' ಎಂಬ ಹೆಸರಿನ ಬರಹದಲ್ಲಿ ಭಾರತದಲ್ಲಿ ಮುಸಲ್ಮಾನರ ಮೇಲೆ ನರಮೇಧ ನಡೆಯುತ್ತಿದೆ ಎಂದು ಉಲ್ಲೇಖಿಸಲಾಗಿದೆ. ಬಲಪಂಥೀಯ ಹಿಂದುತ್ವವು ಕೇಂದ್ರದಲ್ಲಿ ಅಧಿಕಾರ ಹಿಡಿದ ನಂತರ ಅಲ್ಪಸಂಖ್ಯಾತರು, ವಿಶೇಷವಾಗಿ ಮುಸ್ಲಿಂಮರ ಹಿಂಸಾಚಾರ ಹೆಚ್ಚಾಗಿದೆ. ಸಮುದಾಯಗಳ ನಡುವೆ ದ್ವೇಷ ಹರಡಲು ಸಮಾಜದಲ್ಲಿ ಅರ್ಥಹೀನ ಸುಳ್ಳುಗಳನ್ನು ಹರಡುತ್ತಾರೆ.


ಇದನ್ನೂ ಓದಿ: Adipurush Teaser: ಟ್ರೋಲ್‌ ಆದ ಆದಿಪುರುಷ.! ಇದಕ್ಕಿಂತ ಛೋಟಾ ಭೀಮ್‌ ಬೆಟರ್‌ ಎಂದ ಫ್ಯಾನ್ಸ್‌.!


ಈ ಸುಳ್ಳುಗಳನ್ನೇ ನಂಬಿ ಜನ ನಿಜ ಎಂದ ಭಾವಿಸಿದ್ದಾರೆ. ಕೋಮುಗಲಭೆ, ಹತ್ಯೆ ನಡೆದಾಗ ನಮ್ಮ ಸಮುದಾಯವನ್ನು ಗುರಿಯಾಗಿಸಿಕೊಂಡು ಫೈರಿಂಗ್ ನಡೆಯುತ್ತದೆ. ವಿದ್ಯಾವಂತ ಹಾಗೂ ಅಮಾಯಕರನ್ನು ಜೈಲಿಗೆ ಕಳುಹಿಸುತ್ತಾರೆ. ನಿಜವಾದ ಅರ್ಥದಲ್ಲಿ ಇದು ವ್ಯವಸ್ಥಿತ ಮತ್ತು ಸಂಘಟಿತ ಕಾರ್ಯಕ್ರಮದ ಒಂದು ಭಾಗವಾಗಿದೆ. ಇದನ್ನು ನರಮೇಧ ಎಂದು ಕರೆಯಲಾಗುತ್ತದೆ. ಒಂದು ಗುಂಪಿನಿಂದ ಮತ್ತೊಂದು ಗುಂಪಿನಿಂದ ಯೋಜಿತ ಸಾಮೂಹಿಕ ಹತ್ಯೆಯಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.ಇಂತಹ ವಿಚಾರಗಳಿಂದ ಯುವ ಸಮುದಾಯದ ಮನಸ್ಸನ್ನು ಕಡೆಸಿ ಒಂದು ಕೋಮಿನ ವಿರುದ್ಧ ಎತ್ತಿಕಟ್ಟುವ ಕೆಲಸ ನಡೆಯುತ್ತಿತ್ತು ಎಂಬುದಕ್ಕೆ ಈ ಬರಹ ಬಲವಾದ ಸಾಕ್ಷಿಯಾಗಿದೆ. 


ಆರೋಪಿಗಳಿಗೆ ಜಾಮೀನು ನಿರಾಕರಣೆ:


ಇನ್ನೂ ಪೂರ್ವ ವಿಭಾಗದ ಪೊಲೀಸರು ಬಂಧಿಸಿರುವ ಪಿಎಫ್‌ಐನ 15 ಮಂದಿ ಆರೋಪಿಗಳ ಪೊಲೀಸ್ ಕಸ್ಟಡಿ ಅಂತ್ಯ ಹಿನ್ನೆಲೆ ಇಂದು 11ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಪೊಲೀಸರ ಪರ ವಕೀಲರು ವಾದ ಮಂಡಿಸಿ ಬಂಧಿತ ಎಲ್ಲಾ‌ ಆರೋಪಿಗಳು ಸಮಾಜ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾಗಿ‌ ಕಾನೂನು‌ ಸುವ್ಯವಸ್ಥೆಗೆ ಧಕ್ಕೆಗೆ ಸಂಚು ರೂಪಿಸಿದ್ದರು. ಆರೋಪಿಗಳ ಗುರುತರವಾದ ಅಪರಾಧದ ವಿರುದ್ಧ ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ತಡೆ ಕಾಯ್ದೆಯಡಿ (ಯುಎಪಿಎ) ಪ್ರಕರಣ ದಾಖಲಿಸಿಕೊಂಡಬೇಕೆಂದು ಮನವಿ ಮಾಡಿದರು. ಮತ್ತೊಂದು ಕಡೆ ಆರೋಪಿಗಳ ಪರವಾಗಿರುವ ವಕೀಲರು ಜಾಮೀನು ನೀಡುವಂತೆ ಕೋರ್ಟ್‌ಗೆ ಮನವಿ ಮಾಡಿದರು. ಆದರೆ ಪೊಲೀಸರ ಮನವಿ ಪುರಸ್ಕರಿಸಿರುವ ನ್ಯಾಯಲಯ ಜಾಮೀನು ನಿರಾಕರಿಸಿ ಎನ್ಐಎ ವಿಶೇಷ ನ್ಯಾಯಾಲಯಕ್ಕೆ 6ನೇ ತಾರೀಖು ಆರೋಪಿಗಳನ್ನು ಹಾಜರುಪಡಿಸಿ ಎಂದು ಸೂಚಿಸಿ 15 ದಿನಗಳ ನ್ಯಾಯಾಂಗ ಬಂಧನಕ್ಕೆ ವಹಿಸಿ ಆದೇಶಿಸಿತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.