ರೈಲಿನಲ್ಲಿ ಗುಂಡಿಕ್ಕಿ ನಾಲ್ವರನ್ನು ಕೊಂದ ಪ್ರಕರಣ: ಬೀದರ್ ಮೂಲದ ವ್ಯಕ್ತಿ ಸಾವು!
Jaipur-Mumbai train firing: ಸೈಫುದ್ದೀನ್ ಅವರು ಅಜ್ಮೇರ್ ದರ್ಗಾಕ್ಕೆ ಭೇಟಿ ನೀಡಿ ಜೈಪುರ-ಮುಂಬೈ ಸೆಂಟ್ರಲ್ ಎಕ್ಸ್ ಪ್ರೆಸ್ ರೈಲಿನಲ್ಲಿ ವಾಪಸ್ ಆಗುತ್ತಿದ್ದರು. RPF ಕಾನ್ಸ್ ಟೇಬಲ್ ಚೇತನ್ ಸಿಂಗ್ ತನ್ನ ಬಳಿಯಿದ್ದ ಸ್ವಯಂಚಾಲಿತ ಬಂದೂಕಿನಿಂದ ಗುಂಡಿ ಹಾರಿಸಿ ಎಸ್‍ಐ ಮಾತ್ರವಲ್ಲದೆ ಇತರ ಮೂವರು ಪ್ರಯಾಣಿಕರನ್ನು ಕೊಂದಿದ್ದ.
ಬೀದರ್: ಚಲಿಸುತ್ತಿದ್ದ ರೈಲಿನಲ್ಲಿ ಗುಂಡಿಕ್ಕಿ ನಾಲ್ವರನ್ನು ಕೊಂದ ಪ್ರಕರಣದಲ್ಲಿ ಬೀದರ್ ಮೂಲದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ರೈಲ್ವೆ ಸುರಕ್ಷತಾ ಪಡೆಯ(RPF) ಕಾನ್ಸ್‍ಟೇಬಲ್ ಚೇತನ್ ಸಿಂಗ್ ಎಂಬಾತ ಚಲಿಸುತ್ತಿದ್ದ ರೈಲಿನಲ್ಲಿ ಸೋಮವಾರ ಗುಂಡು ಹಾರಿಸಿ ನಾಲ್ವರನ್ನು ಹತ್ಯೆ ಮಾಡಿದ್ದ.
ಮಹಾರಾಷ್ಟ್ರದ ಪಾಲ್ಘರ್ ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿತ್ತು. ಜೈಪುರ -ಮುಂಬೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲಿನೊಳಗೆ ಗುಂಡಿಕ್ಕಿ ನಾಲ್ವರ ಹತ್ಯೆ ಮಾಡಿದ್ದ ಈ ಘಟನೆಯಲ್ಲಿ ಬೀದರ್ ಮೊಲದ ವ್ಯಕ್ತಿ ಸೈಯದ್ ಸೈಫುದ್ದೀನ್(38)ಸಾವನ್ನಪ್ಪಿದ್ದಾನೆ. ಬೀದರ್ ಜಿಲ್ಲೆಯ ಗಾದಗಿ ಗ್ರಾಮದ ನಿವಾಸಿ ಸೈಫುದ್ದೀನ್‍ಗೆ ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: ಮಾಹಾರಾಷ್ಟ್ರದಲ್ಲಿ ಕ್ರೇನ್ ಕುಸಿದು 16 ಮಂದಿ ಸಾವು!
ಸೈಫುದ್ದೀನ್ ಅವರು ಅಜ್ಮೇರ್ ದರ್ಗಾಕ್ಕೆ ಭೇಟಿ ನೀಡಿ ಜೈಪುರ-ಮುಂಬೈ ಸೆಂಟ್ರಲ್ ಎಕ್ಸ್ ಪ್ರೆಸ್ ರೈಲಿನಲ್ಲಿ ವಾಪಸ್ ಆಗುತ್ತಿದ್ದರು. RPF ಕಾನ್ಸ್ ಟೇಬಲ್ ಚೇತನ್ ಸಿಂಗ್ ತನ್ನ ಬಳಿಯಿದ್ದ ಸ್ವಯಂಚಾಲಿತ ಬಂದೂಕಿನಿಂದ ಗುಂಡಿ ಹಾರಿಸಿ ಎಸ್‍ಐ ಮಾತ್ರವಲ್ಲದೆ ಇತರ ಮೂವರು ಪ್ರಯಾಣಿಕರನ್ನು ಕೊಂದಿದ್ದ. ಇದರಲ್ಲಿ ಸೈಫುದ್ದೀನ್ ಕೂಡ ಸೇರಿದ್ದಾರೆ.
ರೈಲ್ವೆಯಲ್ಲಿ ಪ್ರಯಾಣ ಮಾಡುತ್ತಿದ್ದ ಎಸ್‍ಐ ಮತ್ತು ಮೂವರು ಪ್ರಯಾಣಿಕರ ಮೇಲೆ ಚೇತನ್ ಸಿಂಗ್ ಮನಬಂದಂತೆ ಫೈರಿಂಗ್ ಮಾಡಿದ್ದ. ಘಟನೆಯಲ್ಲಿ ಚೇತನ್ ಸಿಂಗ್ ಹಿರಿಯ ಸಹೋದ್ಯೋಗಿ, ಆರ್ಪಿಎಫ್ ಸಬ್ ಇನ್ಸ್ ಪೆಕ್ಟರ್ ಟಿಕಾರಾಮ್ ಮೀನಾ, ಅಬ್ದುಲ್ ಖಾದಿರ್ಭಾಯ್ (48), ಅಖ್ತರ್ ಅಬ್ಬಾಸ್ ಅಲಿ (48) ಮತ್ತು ಸೈಫುದ್ದೀನ್(38) ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಅಧಿಕಾರಿಗಳು ಕರ್ತವ್ಯದಲ್ಲಿ ನಿರ್ಲಕ್ಷ್ಯ-ಉದಾಸೀನ ತೋರಿಸಿದ್ರೆ ಕಠಿಣ ಕ್ರಮ: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
ಜೈಪುರದ ಅಜ್ಮೇರ್ ದರ್ಗಾಕ್ಕೆ ಭೇಟಿ ನೀಡಿ ವಾಪಸ್ ಆಗುತ್ತಿದ್ದ ಸೈಫುದ್ದೀನ್ ಚೇತನ್ ಸಿಂಗ್ ಗುಂಡಿಗೆ ಬಲಿಯಾಗಿದ್ದು, ಬೀದರ್ ಜಿಲ್ಲೆಯ ಗಾದಗಿಯ ಅವರ ಮನೆಯಲ್ಲಿ ಕುಟುಂಬಸ್ಥರ ಆಕ್ರಂದ ಮುಗಿಲುಮುಟ್ಟಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.