ಬೆಂಗಳೂರು : ಮಲಯಾಳಂನ ಖ್ಯಾತ ಥ್ರಿಲ್ಲರ್ ಸಿನಿಮಾ 'ಕೋಲ್ಡ್ ಕೇಸ್'ನ ಕಥಾಹಂದರ ನೆನಪಿಸುವಂತೆ ನಿರ್ಜನ ಪ್ರದೇಶದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಅಪರಿಚಿತ ಅಸ್ಥಿಪಂಜರದ ಮೂಲವನ್ನು  ಹುಳಿಮಾವು ಪೊಲೀಸರು ಪತ್ತೆ ಹಚ್ಚಿದ್ದಾರೆ. 


COMMERCIAL BREAK
SCROLL TO CONTINUE READING

ನಿನ್ನೆ ಹುಳಿಮಾವಿನ ಅಕ್ಷಯ ನಗರದ ಅಪಾರ್ಟ್ಮೆಂಟ್ ಒಂದರ ಹಿಂಭಾಗದ ನಿರ್ಜನ ಪ್ರದೇಶದ ಪೊದೆ ನಡುವೆ ಮರಕ್ಕೆ ನೇಣುಬಿಗಿದ ಸ್ಥಿತಿಯಲ್ಲಿ  ಅಸ್ಥಿಪಂಜರ ಪತ್ತೆಯಾಗಿದ್ದು, ನೇಪಾಳ ಮೂಲದ ಪುಷ್ಪಾ ದಾಮಿ (22) ಎಂಬ ಮಹಿಳೆಯದ್ದು ಎಂದು ಗೊತ್ತಾಗಿದೆ. ನೇಪಾಳ ಮೂಲದ ಪುಷ್ಪಾದಾಮಿ ಹಾಗೂ ಆಕೆಯ ಪತಿ ಅಮರ್ ದಾಮಿ ಹುಳಿಮಾವು ಠಾಣಾ ವ್ಯಾಪ್ತಿಯ ಅಕ್ಷಯ ನಗರದಲ್ಲಿ ವಾಸವಿದ್ದರು. 


ಇದನ್ನೂ ಓದಿ : ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಉಳಿಸಿಕೊಂಡವರಿಗೆ ಗುಡ್‌ ನ್ಯೂಸ್. !


ಪತಿಯ ಮದ್ಯಪಾನ ಚಟದಿಂದ ಬೇಸತ್ತ ಪುಷ್ಪಾ ನೇಪಾಳಕ್ಕೆ ಹಿಂದಿರೂಗಲು ಬಯಸಿದ್ದಳು. ಇದೇ ವಿಚಾರವಾಗಿ ಮನೆಯಲ್ಲಿ ಇಬ್ಬರ ನಡುವೆ ಗಲಾಟೆಯಾಗಿ ಕಳೆದ ಜುಲೈ 8ರಂದು ಗಂಡನ ಮೇಲೆ ಕೋಪಗೊಂಡು ಮನೆಯಿಂದ ತೆರಳಿದ್ದ ಪುಷ್ಪಾ ಪುನಃ ವಾಪಾಸಾಗಿರಲಿಲ್ಲ. 


ಪತ್ನಿ ಕಾಣೆಯಾಗಿರುವ ಬಗ್ಗೆ ಹುಳಿಮಾವು ಠಾಣೆಯಲ್ಲಿ ಅಮರ್ ದಾಮಿ ಪ್ರಕರಣ ದಾಖಲಿಸಿದ್ದ. ನೇಣು ಬಿಗಿದ ಸ್ಥಿತಿಯಲ್ಲಿ ನಿನ್ನೆ ಬೆಳಗ್ಗೆ ಪತ್ತೆಯಾದ ತಲೆಬುರುಡೆ, ಮೂಳೆಗಳನ್ನ ಪರಿಶೀಲನೆ ನಡೆಸಿದ್ದ ಹುಳಿಮಾವು ಠಾಣಾ ಪೊಲೀಸರು, ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳದಲ್ಲಿ ದೊರೆತ ಮಹಿಳೆಯ ಚಪ್ಪಲಿ, ನೆಕ್ಲೆಸ್ ವಶಕ್ಕೆ ಪಡೆದಿದ್ದರು. ಕೂಲಂಕಷವಾಗಿ ಪರಿಶೀಲಿಸಿದಾಗ ಪತ್ತೆಯಾದ ಅಸ್ಥಿಪಂಜರ ಪುಷ್ಪಾದಾಮಿಯದ್ದು ಎಂದು ಗೊತ್ತಾಗಿದೆ. ಸದ್ಯ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಗೊತ್ತಾಗಿದೆ.


ಇದನ್ನೂ ಓದಿ : ಸಿಡಿ ವಿಚಾರವಾಗಿ ರಮೇಶ್ ಜಾರಕಿಹೊಳಿಗೆ ಈಶ್ವರಪ್ಪ ಬೆಂಬಲ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.