ರಾಯಚೂರು: ರಾಯಚೂರಿನಲ್ಲಿ ಶಿಕ್ಷಕಿ ಮಿಸ್ಸಿಂಗ್ ಕೇಸ್ ಹಿಂದೆ ಲವ್ ಜಿಹಾದ್ ಅನುಮಾನ ವ್ಯಕ್ತವಾಗಿದೆ. ಮುಸ್ಲಿಂ ಯುವಕನ ಜೊತೆ ಖಾಸಗಿ ಶಾಲೆ ಶಿಕ್ಷಕಿ ನಾಪತ್ತೆ ಆರೋಪ ಕೇಳಿಬಂದಿದೆ. ಯರಮರಸ್ ಕ್ಯಾಂಪ್ ನಿವಾಸಿ ಶಿಕ್ಷಕಿ ಸುಹಾಸಿನಿ (29) ನಾಪತ್ತೆಯಾಗಿದ್ದಾರೆ. ಅಕ್ಟೋಬರ್ 20ರಂದು ಹೊರಗೆ ಹೋಗಿ ಬರುವುದಾಗಿ ಮನೆಯಿಂದ ಸುಹಾಸಿನಿ ನಾಪತ್ತೆಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಸಲೀಂ ಎಂಬ ಯುವಕನ ಜೊತೆ ಶಿಕ್ಷಿಕಿ ಸುಹಾಸಿನಿ ಮಿಸ್ಸಿಂಗ್ ಆಗಿರುವ ಬಗ್ಗೆ ಆರೋಪ ಕೇಳಿಬಂದಿದೆ. ಸುಹಾಸಿನಿಯವರ ತಾಯಿ ನಿರ್ಮಲಾ ಎಂಬುವರು ಗಂಭೀರ ಆರೋಪ ಮಾಡಿದ್ದಾರೆ. ಕ್ಲಾಸ್‍ಮೇಟ್ ಹೆಸರಿನಲ್ಲಿ ಪದೇ ಪದೇ ಮನೆಗೆ ಬರುತ್ತಿದ್ದ ಸಲೀಂ ಮದುವೆ ಆಗಿ ಮಕ್ಕಳಿದ್ರು ಶಿಕ್ಷಕಿ ಸುಹಾಸಿನಿ ಜೊತೆ ಸಂಪರ್ಕದಲ್ಲಿದ್ದ. ಯಾರೂ ಇಲ್ಲದೆ ವೇಳೆ ಮನೆಗೆ ಬರುತ್ತಿದ್ದ ಸಲೀಂ ಶಿಕ್ಷಕಿ ಜೊತೆಗೆ ಪ್ರೀತಿ-ಪ್ರೇಮದಾಟವಾಡುತ್ತಿದ್ದನಂತೆ. 1 ತಿಂಗಳ ಹಿಂದೆ ಮನೆಯಲ್ಲಿ ವಿಚಾರ ಗೊತ್ತಾಗುತ್ತಿದ್ದಂತೆ ನಾಪತ್ತೆಯಾಗಿದ್ದಾರೆ.


ಇದನ್ನೂ ಓದಿ: ಕಬ್ಬಿಗೆ ಸೂಕ್ತ ಬೆಲೆ ನಿರ್ಣಯ ಸಂಧಾನ ಸಭೆ ವಿಫಲ- ಇಂದು ಮುಧೋಳ ನಗರ ಬಂದ್


ಈ ಬಗ್ಗೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 10 ವರ್ಷಗಳ ಹಿಂದೆ ಲಿಂಗರಾಜ ಎಂಬುವರ ಜೊತೆ ಸುಹಾಸಿನಿ ಮದುವೆಯಾಗಿದ್ದರು. ಯರಮರಸ್ ಬಳಿಯ ಖಾಸಗಿ ಶಾಲೆಯಲ್ಲಿ ಸುಹಾಸಿನಿ ಶಿಕ್ಷಕಿಯಾಗಿದ್ದರು. ಲವ್ ಜಿಹಾದ್ ಆರೋಪ ಹೊತ್ತಿರುವ ರಾಯಚೂರು ಹೊರವಲಯದ ಪೊತಗಲ್ ಗ್ರಾಮದ ನಿವಾಸಿ ಸಲೀಂ ಎಂಬಾತನ ಜೊತೆ 7 ವರ್ಷದ ಪುಟ್ಟನ ಮಗುವನ್ನು ಬಿಟ್ಟು ಸುಹಾಸಿನಿ ನಾಪತ್ತೆಯಾಗಿದ್ದಾರೆ.  


ಗಂಜ್‍ನಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಸಲೀಂಗೆ ಮದುವೆಯಾಗಿ 1 ಹೆಣ್ಣು ಮಗು ಸಹ ಇದೆ. ಆದರೂ ಈತ ಶಿಕ್ಷಕಿ ಸುಹಾಸಿನಿ ಹಿಂದೆ ಬಿದಿದ್ದನಂತೆ. ‘ಮುಸ್ಲಿಂ ಯುವಕ‌ ಸಲೀಂ ಸುಹಾಸಿನಿಯ ಕ್ಲಾಸ್ ಮೇಟ್ ಆಗಿದ್ದ. ಆತ ನನಗೆ ಇಷ್ಟ, ಅವನನ್ನು ಮದುವೆಯಾಗುವುದಾಗಿ ಸುಹಾಸಿನಿ ಹೇಳಿದ್ದಳು. ನಾವು ಬ್ಯಾಡ.. ನೀನು ಮದುವೆಯಾಗಿರುವ  ಹುಡುಗಿ ಅಂತಾ ಹೇಳಿದ್ವಿ. ಒಂದು ದಿನ ಸಲೀಂ ಕಾಲ್ ಮಾಡಿ ನಾವಿಬ್ಬರು ಮದುವೆ ಆಗತ್ತೀವಿ ಅಂದಿದ್ದ. ಅವಳಿಗೆ ಡೈವೋರ್ಸ್ ಆಗದೆ ಮದುವೆ ಹೇಗೆ ಆಗತ್ತೀಯಾ? ಅಂತಾ ನಾವು ಪಶ್ನೆ ಮಾಡಿದ್ದೇವು ಎಂದು ಸುಹಾಸಿನಿ ಮಿಸ್ಸಿಂಗ್ ಬಗ್ಗೆ ತಾಯಿ ನಿರ್ಮಲಾ ಹೇಳಿದ್ದಾರೆ.


ಇದನ್ನೂ ಓದಿ: ಮತಾಂತರ ಅಲ್ಲ ಮನಸಾಂತರ: ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ತಡರಾತ್ರಿ ಪ್ರೊಟೆಸ್ಟ್


‘ಅಕ್ಟೋಬರ್ 20ರಂದು ಇದೇ ವಿಚಾರವಾಗಿ ಮನೆಯಲ್ಲಿ ಜಗಳ ಮಾಡಿ ಮನೆಬಿಟ್ಟು ಹೋದಳು. ನಮ್ಮ ಸಂಬಂಧಿಕರಿಗೆ ಕರೆ ಮಾಡಿ ಇಬ್ಬರು ಮದುವೆ ಆಗಿರೋ ಬಗ್ಗೆ ಹೇಳಿದ್ದಾರೆ. ನಮ್ಮ ಮಗಳ ಜೊತೆ 58 ವರ್ಷ ಒಬ್ಬಳು ಹೆಣ್ಣು ಮಗಳು ಇದ್ದಾಳೆ. ಅಷ್ಟೇ ಅಲ್ಲದೇ ಸಲೀಂ ಹೊರತುಪಡಿಸಿ ಇನ್ನೋರ್ವ ವ್ಯಕ್ತಿ ಇದ್ದಾರೆ. ಆಕೆಗೆ ಈ ಕಡೆ ತಂದೆ-ತಾಯಿ ಮತ್ತು ಮಗನ ನೆನಪು ಸಹ ಇಲ್ಲ. ಈ ಬಗ್ಗೆ ಪೊಲೀಸ್ ದೂರು ಕೊಟ್ಟರು ಇನ್ನೂ ಯಾವುದೇ ಕ್ರಮವಾಗಿಲ್ಲ’ವೆಂದು ಸುಹಾಸಿನಿಯವರ ತಾಯಿ ಬೇಸರ ವ್ಯಕ್ತಪಡಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.