ಮಂಗಳೂರು: ಎರಡು ಕಾರುಗಳ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಐವರು ಗಾಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ.ರೋಡ್-ಬೆಳ್ತಂಗಡಿ ರಾಜ್ಯ ಹೆದ್ದಾರಿಯ ಪರ್ಲ ಚರ್ಚ್ ಸಮೀಪ ಇಂದು ನಡೆದಿದೆ.


COMMERCIAL BREAK
SCROLL TO CONTINUE READING

ಓಮ್ನಿ ಕಾರು ಮತ್ತು ಸ್ವಿಫ್ಟ್ ಕಾರು ಮಧ್ಯೆ ಈ ಅಪಘಾತ ಸಂಭವಿಸಿದೆ. ಪರ್ಲ ಚರ್ಚ್ ಗೆ ಪೂಜೆಗೆಂದು ಬರುತ್ತಿದ್ದವರ ಓಮ್ನಿ ಕಾರಿಗೆ ಹಿಂಬದಿಯಿಂದ ಬಂದ ಸ್ವಿಫ್ಟ್ ಕಾರು ಢಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ. ಢಿಕ್ಕಿ ಹೊಡೆದ ರಭಸಕ್ಕೆ ಓಮ್ನಿ ಕಾರನ್ನು ಸುಮಾರು ದೂರು ದೂಡಿಕೊಂಡು ಹೋಗಿದ್ದಲ್ಲದೆ ಕಾರು ಉರುಳಿಬಿದ್ದಿದೆ.


ಕಾರಿನೊಳಗಿದ್ದ ಪ್ರಯಾಣಿಕರನ್ನು ಹಿಂಬದಿಯ ಗಾಜು ಒಡೆದು ಹೊರಕ್ಕೆ ತೆಗೆಯಲಾಗಿದೆ. ಓಮ್ನಿ ಕಾರು ಚಾಲಕ ರಾಯ್ಸನ್ ಹಾಗೂ ಜೊತೆಯಲ್ಲಿ ಮಕ್ಕಳು ಸೇರಿದಂತೆ ಮೂವರು ಮತ್ತು ಸ್ವಿಫ್ಟ್ ಕಾರು ಚಾಲಕ ಆದಿಲ್ ಎಂಬವರಿಗೆ ಗಾಯಗಳಾಗಿವೆ.


ಇದನ್ನೂ ಓದಿ: ʼಯೇ ಸಾವು ಆಗಿಲ್ಲ ಮಾರ್ರೆ ಪ್ರದೀಪ್; ಬಜೆಟ್‌ ಮಂಡನೆ ವೇಳೆ ಸ್ವೀಕರ್‌, ಶಾಸಕನಿಗೆ ಪಾಠ.. ವಿಡಿಯೋ ವೈರಲ್‌ ..‌ !


ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಎರಡು ಕಾರುಗಳು ವಗ್ಗದಿಂದ ಬರುತ್ತಿದ್ದು, ಪರ್ಲ ಚರ್ಚ್ ಬಳಿಗೆ ಬರುತ್ತಿದ್ದಂತೆ ಓಮ್ನಿ ಕಾರು ಚರ್ಚ್ ಗೆ ಹೋಗುವ ಉದ್ದೇಶದಿಂದ ಕಾರನ್ನು ತಿರುಗಿಸುವ ವೇಳೆ ವೇಗವಾಗಿ ಬಂದ ಸ್ವಿಫ್ಟ್ ಕಾರು ಹಿಂಬದಿಯಿಂದ ಢಿಕ್ಕಿ ಹೊಡೆದಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.