ಗೆಳೆಯನ ಪತ್ನಿ ಕೊಂದು ಆತನನ್ನು ಮದುವೆಯಾಗುವ ಪ್ಲಾನ್ ಮಾಡಿದ್ದ ಮಹಿಳೆ ಬಂಧನ..! ಥ್ರಿಲ್ಲರ್ ಸಿನಿಮಾ ಮೀರಿಸುತ್ತೆ ಈ ಸ್ಟೋರಿ
ಪ್ರಿಯಕರನ ಪತ್ನಿಯನ್ನು ಕೊಲ್ಲಲು ಯತ್ನಿಸಿದ ಮಹಿಳೆಯೊಬ್ಬಳನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ತನಿಖೆಯಲ್ಲಿ ಹಲವು ಬೆಚ್ಚಿ ಬೀಳಿಸುವ ಮಾಹಿತಿಗಳು ಬಹಿರಂಗವಾಗಿವೆ.
ಕೇರಳ : ತನ್ನ ಗೆಳೆಯನ ಪತ್ನಿಯನ್ನು ಕೊಂದು ನಂತರ ಆತನನ್ನು ಮದುವೆಯಾಗುವ ಆಸೆ ಕಂಡಿದ್ದ ಮಹಿಳೆಯೊಬ್ಬಳು ಸಧ್ಯ ಕೇರಳ ಪೊಲೀಸರ ವಶದಲ್ಲಿದ್ದಾಳೆ. ತನಿಖೆಯ ವೇಳೆ ಹಲವಾರು ಮಾಹಿತಿಗಳು ಲಭ್ಯವಾಗಿದ್ದು, ಬೆಚ್ಚಿ ಬೀಳಿಸುವಂತಿವೆ.
ಹೌದು.. ಕೇರಳದ ತಿರುವಳ್ಳ ಬುಲ್ಲು ಕುಲಂಗರೈ ಪ್ರದೇಶದ ತುಂಬು ತಿಂಗಳ ಗರ್ಭಿಣಿ ಸ್ನೇಹಾ (25) ಹೆರಿಗೆಗಾಗಿ ಪರುಮಲ ಪ್ರದೇಶದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅಲ್ಲಿಯೇ ಆಕೆಗೆ ಜನ್ಮ ನೀಡಿದ್ದರಿಂದ ಆಸ್ಪತ್ರೆಯ ಆಡಳಿತ ಮಂಡಳಿ ಶುಕ್ರವಾರ ಡಿಸ್ಚಾರ್ಜ್ ಮಾಡಲು ನಿರ್ಧರಿಸಿತ್ತು. ಆದರೆ ಮಗುವಿನ ಆರೋಗ್ಯ ಸಮಸ್ಯೆ ಹಿನ್ನಲೆ ಕಾರಣ ಡಿಸ್ಚಾರ್ಜ್ ಆಗಿರಲಿಲ್ಲ. ಸ್ನೇಹಾ ಮತ್ತು ಅವರ ತಾಯಿ ತಮಗಾಗಿ ಮೀಸಲಿಟ್ಟ ಕೋಣೆಯಲ್ಲಿ ಮಗುವಿಗಾಗಿ ಕಾಯುತ್ತಿದ್ದರು.
ಇದನ್ನೂ ಓದಿ: ಪಾಕ್ ನ ಸಿಂಧ್ ದಲ್ಲಿ ಹಳಿ ತಪ್ಪಿದ ರೈಲು, 15 ಸಾವು, 50 ಜನರಿಗೆ ಗಾಯ
ಈ ವೇಳೆ ಶುಕ್ರವಾರ ಸಂಜೆ 5.30ರ ಸುಮಾರಿಗೆ ನರ್ಸ್ ವೇಷದಲ್ಲಿ ಮಹಿಳೆಯೊಬ್ಬರು ತಮ್ಮ ಕೊಠಡಿಗೆ ಬಂದು ಸ್ನೇಹಾಗೆ ಇಂಜೆಕ್ಷನ್ ಹಾಕಬೇಕು ಎಂದು ಹೇಳಿದ್ದಾರೆ. ಸ್ನೇಹಾಳ ತಾಯಿ ಪನ್ನಿಯಾಚೆ ಡಿಸ್ಚಾರ್ಜ್ ಮಾಡ್ತೀನಿ ಅಂದು ಇವಾಗ ಇಂಜೆಕ್ಷನ್ ಅಂತೀದಿರಾ ಅಂತ ಕೇಳಿದ್ದಾರೆ. ಅದಕ್ಕೆ ವೇಷದಲ್ಲಿದ್ದ ನರ್ಸ್ ಇನ್ನೂ ಒಂದು ಇಂಜೆಕ್ಷನ್ ಕೊಡಬೇಕು ಅಂತ ಹೇಳಿ ಸ್ನೇಹಾಳ ಕೈ ಹಿಡಿದು ಸೂಜಿಯನ್ನು ಅಂಟಿಸಲು ಪ್ರಯತ್ನಿಸಿದಳು.
ಆದರೆ ಸೂಜಿಯಲ್ಲಿ ಔಷಧಿ ಇಲ್ಲದಿರುವುದನ್ನು ಕಂಡು ಸ್ನೇಹಾಳ ತಾಯಿ ಅಲಾರಾಂ ಒತ್ತಿದ್ದಾರೆ. ಶಬ್ದ ಕೇಳಿದ ಆಸ್ಪತ್ರೆ ಸಿಬ್ಬಂದಿ ನರ್ಸ್ ವೇಷದಲ್ಲಿದ್ದ ಮಹಿಳೆಯನ್ನು ಹಿಡಿದು ಠಾಣೆಗೆ ಮಾಹಿತಿ ನೀಡಿದ್ದಾರೆ. ಬಳಿಕ ಪುಲಿಕಿಲು ಠಾಣೆಯ ಪೊಲೀಸರು ಸ್ಥಳಕ್ಕೆ ಬಂದು ಮಹಿಳೆಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: ಅಮೃತ ಭಾರತ್ ಸ್ಟೇಷನ್ ಯೋಜನೆಯಡಿ ಪ್ರಧಾನಮಂತ್ರಿಗಳಿಂದ ನಿಲ್ದಾಣ ಅಭಿವೃದ್ಧಿಗೆ ಚಾಲನೆ
ಬಂಧಿತ ಮಹಿಳೆ ಕಯಂಗಳಂ ಪ್ರದೇಶದ ಅನುಷಾ (25) ಎಂಬುದಾಗಿ ತಿಳಿದುಬಂದಿದ್ದು, ಈಗಾಗಲೇ ಈಕೆ ಎರಡು ಮದುವೆಯಾಗಿದ್ದಳು. ಅಲ್ಲದೇ ಸ್ನೇಹಾ ಪತಿಗೆಯೊಂದಿಗೆ ಸಂಬಂಧಹೊಂದಿದ್ದಳು. ಕಾಲೇಜು ದಿನಗಳಿಂದಲೂ ಇಬ್ಬರೂ ಆತ್ಮೀಯರಾಗಿದ್ದರು ಎಂಬ ಮಾಹಿತಿಯೂ ಬೆಳಕಿಗೆ ಬಂದಿದೆ.
ಔಷಧ ಅಂಗಡಿಗಳಲ್ಲಿ ಕೆಲಸ ಮಾಡಿದ ಅನುಭವವಿರುವ ಅನುಷಾ, ಹೃದಯಾಘಾತ ಮತ್ತು ಸಾವಿಗೆ ಕಾರಣವಾಗಬಹುದೆಂದು ತಿಳಿದು ಔಷಧವಿಲ್ಲದೆ ಗಾಳಿ ತುಂಬಿದ ಚುಚ್ಚುಮದ್ದು ನೀಡಲು ಯತ್ನಿಸಿರುವುದು ಕೂಡ ಬಯಲಾಗಿದೆ. ಆ ನಂತರ ಅನುಷಾ ಈ ಕೃತ್ಯದಲ್ಲಿ ಭಾಗಿಯಾಗಿರುವುದು ಸ್ನೇಹಾಳ ಪತಿಗೆ ತಿಳಿಯಿತೇ? ಅಥವಾ ಅವರು ಅನೈಚ್ಛಿಕವಾಗಿ ತೊಡಗಿಸಿಕೊಂಡಿದ್ದಾರೆಯೇ? ಎಂದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.