Crime News: ಪ್ರಿಯಕರನೋರ್ವ ತನ್ನ ಪ್ರಿಯತಮೆ ಎದುರೇ ಮತ್ತೊಬ್ಬ ಮಹಿಳೆಗೆ ಮದ್ಯ ಕುಡಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಿದ ಘಟನೆ ಗೌರಿಬಿದನೂರು ತಾಲ್ಲೂಕಿನ ಕೊನಗಾನಹಳ್ಳಿ ಗ್ರಾಮ ಹೊರವಲಯದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.  ಕೊಲೆಯಾದ ದುರ್ದೈವಿಯನ್ನು ಅಲುಮೇಲಮ್ಮ(45)  ಎಂದು ಗುರುತಿಸಲಾಗಿದೆ. 


COMMERCIAL BREAK
SCROLL TO CONTINUE READING

ಅತ್ಯಾಚಾರವೆಸಗಿ ಕೊಲೆ ಮಾಡಿದ ಕಾಮುಕನನ್ನು ಸಂಜೀವಪ್ಪ ಎಂದು ಎಂದು ಹೇಳಲಾಗಿದ್ದು,  ಈತನ ಪ್ರಿಯತಮೆಯನ್ನು ರಾಮಾಂಜಿನಮ್ಮ ಎಂದು ಪತ್ತೆ ಮಾಡಲಾಗಿದೆ. 


ಸಂಜೀವಪ್ಪ ರಾಮಾಂಜಿನಮ್ಮ ನಡುವೆ ಅನೈತಿಕ‌ ಸಂಬಂಧವಿದ್ದ ಹಿನ್ನಲೆ ಅಲುಮೇಲಮ್ಮ ಇಬ್ಬರ ಅನೈತಿಕ ಸಂಬಂದಕ್ಕೆ ಅಡ್ಡಿಯಾಗಿದ್ದಳು. ಈ ಹಿನ್ನಲೆಯಲ್ಲಿ ಪಾಪಿ ಸಂಜೀವಪ್ಪ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. 


ಇದನ್ನೂ ಓದಿ- Kali River Tragedy: ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ ಆರು ಮಂದಿ ದುರ್ಮರಣ!


ಅಲುಮೇಲಮ್ಮ ನಾಲ್ಕು ದಿನಗಳ ಹಿಂದೆ ಗ್ರಾಮದಿಂದ ನಾಪತ್ತೆಯಾಗಿದ್ದಳು. ಇಂದು ಬೆಳಿಗ್ಗೆ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಹೊಸೂರು ಹೋಬಳಿ ಕೊನಗಾನಹಳ್ಳಿ ಕುರುಚಲು ಅರಣ್ಯ ಪ್ರದೇಶದಲ್ಲಿ ಅಲುಮೇಲಮ್ಮ ಶವವಾಗಿ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿತ್ತು. 


ಅರಣ್ಯ (Forest) ಪ್ರದೇಶದಲ್ಲಿ ಮಹಿಳೆ ಶವ ಗಮನಿಸಿದ ಕೊನಗಾನಹಳ್ಳಿ ಗ್ರಾಮಸ್ಥರು ಗ್ರಾಮಾಂತರ ಪೋಲೀಸರಿಗೆ ವಿಷಯ ಮುಟ್ಟಿಸಿದ್ದರು. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರೀಶಿಲಿಸಿದರು. ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದರು. 


ಅಲುಮೇಲಮ್ಮ ಅವರನ್ನು ಕೊನಗಾನಹಳ್ಳಿಯ ಸಂಜೀವಪ್ಪ ತಮ್ಮ ಗ್ರಾಮಕ್ಕೆ ಕೂಲಿಗಾಗಿ ಕರೆದುಕೊಂಡು ಬಂದಿದ್ದರು. ಈ ಹಿನ್ನೆಲೆಯಲ್ಲಿ ಸಂಜೀವಪ್ಪ ಅವರನ್ನು ಬಂಧಿಸಿ ಪೊಲೀಸರು ವಿಚಾರಣೆ ನಡೆಸುತ್ತಿದ್ದರು. 


ಇದನ್ನೂ ಓದಿ- ನೇಹಾ ಹತ್ಯೆ ಪ್ರಕರಣ: ಗಳಗಳನೇ ಅತ್ತ ದಿಂಗಾಲೇಶ್ವರ ಸ್ವಾಮೀಜಿ


ಅತ್ತ ಅಲುಮೇಲಮ್ಮ ಶವ ಪತ್ತೆಯಾದ ಬಳಿಕ ರಾಮಾಂಜಿನಮ್ಮ ವರ್ತನೆ‌ಯಿಂದ  ಅನುಮಾನಗೊಂಡಿದ್ದ ಗ್ರಾಮಸ್ಥರು ಕೊನೆಗೆ ಆಕೆಯನ್ನು ವಿಚಾರಿಸಿದ ವೇಳೆ ಅಸಲಿ ಸತ್ಯ ಬಾಯಿಬಿಟ್ಟಿದ್ದಾಳೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.