Woman Finds Naked Photos In Her Boy Friend Mobile: ಬೆಂಗಳೂರು ನಗರದ ಬೆಳ್ಳಂದೂರಿನಲ್ಲಿರುವ ಖಾಸಗಿ ಬ್ಯುಸಿನೆಸ್ ಪ್ರೊಸೆಸ್ ಔಟ್‌ಸೋರ್ಸಿಂಗ್ (ಬಿಪಿಒ) ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಯುವತಿಯೊಬ್ಬಳು ತನ್ನ ಗೆಳೆಯನ ಫೋನ್‌ನಲ್ಲಿ ಬೆತ್ತಲೆ ಫೋಟೋಗಳನ್ನು ಕಂಡು ಆಘಾತಕ್ಕೊಳಗಾಗಿದ್ದಾಳೆ. ಪ್ರಿಯತಮನ ಮೊಬೈಲ್‌ ಲಾಕ್ ತೆಗೆದು ಗ್ಯಾಲರಿ ವೀಕ್ಷಿಸಿದ ಬಳಿಕ, ಆಕೆ ಆತನ ಮನಸ್ಥಿತಿಯ ಬಗ್ಗೆ ಆತಂಕಗೊಂಡಿದ್ದಾಳೆ. ಆಕೆಯ ಬಾಯ್‌ಫ್ರೆಂಡ್‌ ಮೊಬೈಲ್‌ನ ಗ್ಯಾಲರಿ ತೆರೆದಾಗ ಕೆಲವು ಸಹೋದ್ಯೋಗಿಗಳು ಸೇರಿದಂತೆ ವಿವಿಧ ಮಹಿಳೆಯರ ಸುಮಾರು ನಗ್ನ ಫೋಟೋಗಳು ಆತನ ಮೊಬೈಲ್‌ನಲ್ಲಿ ಪತ್ತೆಯಾಗಿದೆ. 


COMMERCIAL BREAK
SCROLL TO CONTINUE READING

ಈಕೆಯ ಬಾಯ್‌ಫ್ರೆಂಡ್‌ ಸಹೋದ್ಯೋಗಿ ಆಗಿದ್ದು, ತಾನು ಸೇರಿದಂತೆ ತನ್ನ ಕಚೇರಿಯ ಇತರ ಸಹೋದ್ಯೋಗಿಗಳ ನಗ್ನ ಫೋಟೋಗಳು ಆತನ ಮೊಬೈಲ್‌ನಲ್ಲಿ ಕಂಡು ಶಾಕ್‌ ಆಗಿದ್ದಾರೆ. ಕೂಡಲೇ ಇವಳು ಈ  ವಿಷಯವನ್ನು ತನ್ನ ಕಚೇರಿಯ ಮುಖ್ಯಸ್ಥರಿಗೆ ತಿಳಿಸಿದ್ದು, ಮುಂದಿನ ದಿನಗಳಲ್ಲಿ ಸಂಸ್ಥೆಗೆ ಕೆಟ್ಟ ಹೆಸರು ಬರದಂತೆ, ಸಂಸ್ಥೆಯಲ್ಲಿರುವ ಇತರ ಮಹಿಳೆಯರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾಳೆ. ಈಕೆ ಅದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ 25 ವರ್ಷದ ಆದಿತ್ಯ ಸಂತೋಷ್ ಎಂಬ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದು, ಇವಳು ಫೋಟೋಗಳನ್ನು ಕಂಡು ಎಚ್ಚರಿಕೆ ನೀಡಿದ ನಂತರ ಅವನೊಂದಿಗಿನ ಎಲ್ಲಾ ಸಂಬಂಧಗಳನ್ನು ಮುರಿದುಕೊಂಡಿದ್ದಾಳೆ. 


ಇದನ್ನೂ ಓದಿ: ಬಿರಿಯಾನಿಯಲ್ಲಿ ಸತ್ತ ಜಿರಳೆ: ಹೈದರಾಬಾದ್‌ನ ಗ್ರಾಹಕ ಶಾಕ್!


ಆರೋಪಿ ಆಕೆಯೊಂದಿಗಿನ ಖಾಸಗಿ ಕ್ಷಣಗಳನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದನ್ನೆಲ್ಲಾ ಡಿಲೀಟ್ ಮಾಡಬೇಕೆಂದುಕೊಂಡು ಸಂತೋಷ್‌ಗೆ ತಿಳಿಯದಂತೆ ಆತನ ಫೋನ್ ತೆಗೆದುಕೊಂಡು ಗ್ಯಾಲರಿ ತೆರೆದಿದ್ದಾಳೆ. ಈ ವೇಳೆ 13,000 ನಗ್ನ ಫೋಟೋಗಳು ಆತನ ಮೊಬೈಲ್‌ನಲ್ಲಿ ಕಂಡುಬಂದಿದ್ದು, ಅಲ್ಲದೇ ಆತ ಕೆಲವು ಸಹೋದ್ಯೋಗಿಯ ಫೋಟೋವನ್ನು ಮಾರ್ಫ್ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ ಬಳಿಕ ಈ ಪ್ರಕರಣ ಪೋಲೀಸ್‌ ಠಾಣೆಯಲ್ಲಿ ದಾಖಲಾಗಿದೆ. ಆರೋಪಿತನ ಈ ಕೆಲಸವು ಕಚೇರಿಯ ಇತರ ಮಹಿಳೆಯರ ಜೀವನದ ಮೇಲೆ ಪರಿಣಾಮ ಬೀರಬಹುದು ಹಾಗೂ ಅವನ ಉದ್ದೇಶ ಯಾರಿಗೂ ಗೊತ್ತಿರಲಿಲ್ಲ. ಒಂದು ವೇಳೆ ಫೋಟೋಗಳು ಲೀಕ್ ಆಗಿದ್ದರೆ ಅದು ಮಹಿಳೆಯರಿಗೆ ಆಘಾತವನ್ನುಂಟು ಮಾಡುತ್ತಿತ್ತು. 


ಸದ್ಯ ಸಂತೋಷ್ ಕಳೆದ ಐದು ತಿಂಗಳಿನಿಂದ ಗ್ರಾಹಕ ಸೇವಾ ಏಜೆಂಟ್ ಆಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆಂದು ತಿಳಿದು ಬಂದಿದ್ದು,ಆತ ತನ್ನ ಸಹೋದ್ಯೋಗಿಗಳ ಫೋಟೋಗಳನ್ನು ಮಾರ್ಫ್ ಮಾಡಲು ಸಂಸ್ಥೆಯ ಯಾವುದೇ ಸಾಧನಗಳನ್ನು ಬಳಸಿಲ್ಲ ಎಂದು ಕಂಪನಿ ಸ್ಪಷ್ಟಪಡಿಸಿದೆ. ಸಂತೋಷ್ ವಿರುದ್ಧದ ಪ್ರಕರಣವನ್ನು ಕೈಗೆತ್ತಿಕೊಂಡು ಆತನನ್ನು ಕಚೇರಿಯಿಂದಲೇ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಅಲ್ಲದೇ ಆತ ಇಷ್ಟೊಂದು ಫೋಟೋಗಳನ್ನು ಏಕೆ ಇಟ್ಟುಕೊಂಡಿದ್ದ ಎನ್ನುವುದನ್ನು ತನಿಖೆ ನಡೆಸಬೇಕಿದೆ. ಫೋಟೋಗಳು ಕೆಲವು ಮಾರ್ಫ್ ಆಗಿದ್ದು, ಇನ್ನೂ ಕೆಲವು ನೈಜವಾಗಿವೆ. ಆತನ ಚಾಟ್ ಹಾಗೂ ಫೋನ್‌ ಕರೆಗಳನ್ನು ಸಹ ಪರಿಶೀಲನೆ ನಡೆಸಿದ್ದೇವೆ ಎಂದು ತಿಳಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.