ನವದೆಹಲಿ: ತನ್ನ ಗೆಳತಿಯ ಮುಂದೆಯೇ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಪಟಾನ್ ತಹಸಿಲ್‌ನ ವಿಹೆ ಘಾಟ್ ಬಳಿಯ ಲಾಡ್ಜ್‌ನಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಯುವತಿಯ ಕಿರುಚಾಟ ಕೇಳಿದ ನಂತರ ಲಾಡ್ಜ್ ಸಿಬ್ಬಂದಿ ಕೋಣೆಗೆ ಧಾವಿಸಿದಾಗ ಇದು ಬೆಳಕಿಗೆ ಬಂದಿದೆ.


COMMERCIAL BREAK
SCROLL TO CONTINUE READING

ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಮೃತ ತನ್ಮಯ್ ದೇಸಾಯಿ ಮತ್ತು ಆತನ ಗೆಳತಿ ಶನಿವಾರ ಮಧ್ಯಾಹ್ನ 3 ಗಂಟೆಗೆ ಸೆಂಚುರಿ ಲಾಡ್ಜ್‌ಗೆ ಆಗಮಿಸಿದ್ದರು. ಆಧಾರ್ ಕಾರ್ಡ್ ನೀಡಿದ ನಂತರವೇ ಅವರಿಗೆ ರಿಸೆಪ್ಷನ್‌ನಲ್ಲಿ ಕೊಠಡಿಯನ್ನು ಬುಕ್‌ ಮಾಡಿ ಕೊಡಲಾಗಿತ್ತು. 


ಇದನ್ನೂ ಓದಿ: Ram Mandir : ರಾಮನವಮಿ ಹಿನ್ನೆಲೆ ರಾಮ ಮಂದಿರಕ್ಕೆ1,11,111 ಕೆಜಿ ಲಡ್ಡು


ಬಳಿಕ ಲಾಡ್ಜ್‌ನಲ್ಲಿ ಯಾವುದೋ ವಿಷಯಕ್ಕೆ ಇಬ್ಬರ ನಡುವೆ ಜಗಳ ನಡೆದಿದೆ. ಇದರಿಂದ ಬೇಸತ್ತ ತನ್ಮಯ್ ತನ್ನ ಗೆಳತಿಯ ದುಪಟ್ಟಾದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ ನೇಣು ಬಿಗಿದುಕೊಳ್ಳುತ್ತಿದ್ದಂತೆ ಪ್ರೇಯಸಿ ಕಿರುಚಲು ಪ್ರಾರಂಭಿಸಿದ್ದಾಳೆ.


ಯುವತಿಯ ಚೀರಾಟ ಕೇಳಿ ಲಾಡ್ಜ್ ಸಿಬ್ಬಂದಿ ತಕ್ಷಣವೇ ಓಡಿ ಬಂದಿದ್ದಾರೆ. ದುರದೃಷ್ಟವಶಾತ್ ತನ್ಮಯ್‌ ಪ್ರಾಣಪಕ್ಷಿ ಹಾರಿಹೋಗಿತ್ತು. ಲಾಡ್ಜ್ ಮ್ಯಾನೇಜರ್ ಮಹೇಶ್ ಧುಮಾಲ್ ತಕ್ಷಣವೇ ಈ ಘಟನೆಯನ್ನು ಮಲ್ಹಾರ್ಪೇತ್ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ತನ್ಮಯ್‌ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 


ಇದನ್ನೂ ಓದಿ: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಚಿಹ್ನೆಗಳು ಕಂಡುಬಂದರೆ ಫೋನ್ ಹ್ಯಾಕ್ ಆಗಿದೆ ಅಂತ ಅರ್ಥ..! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.