ಬೆಂಗಳೂರು : ಆಕೆ ಗಂಡ ಬಿಟ್ಟು ಮಕ್ಕಳ ಜೊತೆ ವಾಸವಿದ್ದಳು. ಇದೇ ಸಮಯದಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ಓರ್ವ ಪರಿಚಯವಾಗಿದ್ದ. ಪರಿಚಯ ಪ್ರೀತಿಗೆ ತಿರುಗಿತ್ತು. ಮದುವೆ ಮಾಡ್ಕೊತಿನಿ ಅಂತಾ ಕಲರ್ ಕಲರ್ ಕಾಗೆ ಹಾರಿಸಿ ಮಹಿಳೆಯ ದುಡ್ಡು ಗುಳುಂ ಮಾಡಿದ್ದ. ಒಂದು ವರ್ಷದ ಹಿಂದೆ ಹೋದ ಆಸಾಮಿ ಮತ್ತೆ ವಾಪಸ್ಸಾಗಲೇ ಇಲ್ಲ. ಇತ್ತ ನ್ಯಾಯ ಬೇಕು ಅಂತಾ ಮಹಿಳೆ ಒಂದು ವರ್ಷದಿಂದ ಪೊಲೀಸ್ ಠಾಣೆಗೆ ಅಲಿತಾ ಇದ್ರು ಪ್ರಯೋಜನವಾಗ್ತಿಲ್ಲ.


COMMERCIAL BREAK
SCROLL TO CONTINUE READING

ಈತನದ್ದು ಅದೇನ್ ರೀಲ್ಸ್ ಅದೇನ್ ಸ್ಟೈಲು. ಯಾವ ಸ್ಟಾರ್ ಗು ಕಡಿಮೆ‌ ಇಲ್ಲ ಅನ್ನೋ ಆ್ಯಕ್ಟಿಂಗ್. ಆತನಿಗೆ ಜೊತೆಯಾಗಿ ಸೊಂಟ ಬಳುಕಿಸ್ತಿರೊ ಮಹಿಳೆ. ತಾವಾಯ್ತು ತಮ್ಮ ಕೆಲಸ ಆಯ್ತು ಅಂತಾ ಇದ್ದಿದ್ದರೆ ನಾವು ಇವತ್ತು ಇವ್ರನ್ನ ತೋರಿಸ್ತಿರ್ಲಿಲ್ಲ. ಕಲರ್ ಕಲರ್ ಕಾಗೆ ಹಾರಿಸಿ ಮಹಿಳೆ ಬಳಿ ಆರು‌ ಲಕ್ಷ ಪೀಕಿದ ಕಲಾಡಿ ಇವರು.


ಇದನ್ನೂ ಓದಿ: ಚಪ್ಪಲಿ ಸ್ಟಾಂಡ್ ಬೀಳಿಸಿ ಕಿರಿಕಿರಿ.. ರಂಗೋಲಿ ಅಳಿಸಿ ವಿಕೃತಿ : ಪೊಲೀಸ್ ಠಾಣೆ ಮೆಟ್ಟಿಲೇರಿದ ನೆರೆಹೊರೆಯವರ ಕಿರಿಕ್


ಹೌದು.. ಈ ಫೋಟೊದಲ್ಲಿ ಕಾಣ್ತಿರೊ ಮಹಿಳೆಯ ಹೆಸರು ರಾಧಿಕಾ. ರಾಮಮೂರ್ತಿನಗರದ ಸರ್.ಎಂ.ವಿ ನಗರದಲ್ಲಿ ವಾಸವಿದ್ದಾಳೆ. ಇನ್ನು ಆಕೆಯ ಪಕ್ಕ ನಿಂತು ಫೋಟೊಗೆ ಪೋಸ್ ಕೊಡ್ತಿರೊ ಆಸಾಮಿ ಹೆಸರು ಪರಮಶಿವಮ್. ಗಂಡನಿಂದ ದೂರವಾಗಿದ್ದ ರಾಧಿಕಾ ಟೈಲರಿಂಗ್ ಕೆಲಸ ಮಾಡ್ತಾ ಇಬ್ಬರು ಮಕ್ಕಳ ಜೊತೆಗೆ ವಾಸವಿದ್ದಾಳೆ.


ಹೀಗಿರ್ಬೇಕಾದ್ರೆ 2019 ರಲ್ಲಿ ಇನ್ಸ್ಟಾಗ್ರಾಮ್ ನಲ್ಲಿ ತಮಿಳುನಾಡು ಮೂಲದ ಪರಮಶಿವಮ್ ಎಂಬಾತನ ಪರಿಚಯವಾಗಿದೆ. ಪರಿಚಯ ಸ್ನೇಹವಾಗಿ ಪ್ರೀತಿಗೆ ತಿರುಗಿತ್ತು. ಮದುವೆಯಾಗೋದಾಗಿ ಕಲರ್ ಕಲರ್ ಕಾಗೆ ಹಾರಿಸಿದ್ದ. ಆತನನ್ನ ರಾಧಿಕಾ ನಂಬಿದ್ಳು ಕೂಡ‌. ಹೀಗಿರ್ಬೇಕಾದ್ರೆ ನಿನ್ನ ಲೈಫ್ ಸೆಟಲ್ ಮಾಡ್ತೀನಿ ನನ್ನ ಬಳಿ ಇರುವ ಕಾರಿನ ಜೊತೆಗೆ ಮತ್ತೆರಡು ಕಾರು ಖರೀದಿಸಿ ಕಂಪನಿಗಳಿಗೆ ಬಿಟ್ರೆ ಒಳ್ಳೆ ಹಣ ಬರುತ್ತೆ ಅಂತಾ ನಂಬಿಸಿದ್ದ ಅದ್ರಂತೆ ಹಂತ ಹಂತವಾಗಿ ರಾಧಿಕಾಳಿಂದ 6 ಲಕ್ಷ ಹಣ ಪಡೆದು ತಮಿಳುನಾಡಿನ ಸುಲೋಚನ ಎಂಬಾಕೆಗೆ ಶಾರ್ಟ್ ಫಿಲಂ ಮಾಡಲು ಕೊಟ್ಟಿದ್ದನಂತೆ‌.


ಇದನ್ನೂ ಓದಿ:ಬೆಂಗಳೂರಿನ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಒಂದು ವರ್ಷ ವಾಹನ ಸಂಚಾರ ಬಂದ್!


ಹೀಗೆ 2023 ರಿಂದ ಬೆಂಗಳೂರಿನಿಂದ ಪರಾರಿಯಾದವ್ನು ಮತ್ತೆ ವಾಪಸ್ಸು ಆಗ್ಲಿಲ್ಲ. ತಮಿಳುನಾಡಿನಲ್ಲಿ ಠಿಕಾಣಿ ಹೂಡಿದ್ದ. ತಮಿಳು ನಾಡಿಗೆ ರಾಧಿಕ ತೆರಳಿದ್ದಾಗ ಅಸಲಿ ಸಂಗತಿ ಗೊತ್ತಾಗಿದೆ. .ಪರಮಶಿವಮ್‌ ಈ ಹಿಂದಯೇ ಮದುವೆಯಾಗಿರೋದು ಗೊತ್ತಾಗಿದೆ. ಆಗಿದ್ದಾಯ್ತು ಹಣ ವಾಪಸ್ಸು ಕೊಡಿ ಎಂದು ಕೇಳಿದ್ರೆ ಇವ್ರ ಆರು ಜನರ ತಂಡ ಸೇರಿ ಧಮ್ಕಿ ಹಾಕಿ ಹಲ್ಲೆ ಮಾಡಿರೊ ಆರೋಪ ಕೂಡ ಇದೆ. 


ಅಷ್ಟೇ ಅಲ್ಲ ಇನ್ಸ್ಟಾಗ್ರಾಮ್ ನಲ್ಲಿ ರಾಧಿಕ ಫೋಟೊ ಹಾಕಿ ಕೆಟ್ಟದಾಗಿ ಬರೆದುಕೊಂಡಿದ್ದಾರಂತೆ. ಕಳೆದ ಒಂದು ವರ್ಷದಿಂದ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ನ್ಯಾಯಕ್ಕಾಗಿ ಓಡಾಡಿದ್ರು. ಪ್ರಯೋಜ ಆಗ್ತಿಲ್ಲ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾಳೆ. ಅದಕ್ಕೆ ಹೇಳೋದೆ ಸಾಮಾಜಿಕ ಜಾಲತಾಣದಲ್ಲಿ ಕಂಡ ಕಂಡವರನ್ನು ನಂಬಿ ಹಣ ಕಳೆದುಕೊಳ್ಳೋ ಮುಂಚೆ ಸ್ವಲ್ಪ ಹಿಂದು ಮುಂದು ಯೋಚನೆ ಮಾಡ್ಬೇಕು ಅಂತಾ. ಹಣ ಪಡೆದವನ್ನು ರೀಲ್ಸ್ ಮಾಡ್ತಾ ಮಜಾ ಮಾಡ್ತಿದ್ರೆ. ಹಣ ಕಳೆದುಕೊಂಡಾಕೆ ಮ್ಯಾಯಕ್ಕಾಗಿ ಅಲೆಯುವಂತಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.