ರೀಲ್ಸ್ ತಂದಿಟ್ಟ ಫಜೀತಿ, ಪ್ರೀಯಕರನ ಅನುಮಾನಕ್ಕೆ ಬಲಿಯಾದ ಯುವತಿ
ಬೇರೊಬ್ಬರ ಜೊತೆ ಇನ್ಸಾಗ್ರಾಮ್ ನಲ್ಲಿ ರೀಲ್ಸ್ ಮಾಡಿದಕ್ಕೆ ಕೋಪಗೊಂಡಿದ್ದ ಪಾಗಲ್ ಪ್ರೇಮಿಯೋಬ್ಬನು ತನ್ನ ಪ್ರಿಯತಮೆಯನ್ನು ಕೊಲೆಗೈದು ಸುಟ್ಟು ಹಾಕಿರುವ ಘಟನೆ ಯಾದಗಿರಿ ತಾಲೂಕಿನ ಅರಕೇರಾದಲ್ಲಿ ನಡೆದಿದೆ.ಈಗ ಕೊಲೆಗೈದಿರುವ ಪಾತಕಿಯನ್ನು ಗುರುಮಠಕಲ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಯಾದಗಿರಿ: ಬೇರೊಬ್ಬರ ಜೊತೆ ಇನ್ಸಾಗ್ರಾಮ್ ನಲ್ಲಿ ರೀಲ್ಸ್ ಮಾಡಿದಕ್ಕೆ ಕೋಪಗೊಂಡಿದ್ದ ಪಾಗಲ್ ಪ್ರೇಮಿಯೋಬ್ಬನು ತನ್ನ ಪ್ರಿಯತಮೆಯನ್ನು ಕೊಲೆಗೈದು ಸುಟ್ಟು ಹಾಕಿರುವ ಘಟನೆ ಯಾದಗಿರಿ ತಾಲೂಕಿನ ಅರಕೇರಾದಲ್ಲಿ ನಡೆದಿದೆ.ಈಗ ಕೊಲೆಗೈದಿರುವ ಪಾತಕಿಯನ್ನು ಗುರುಮಠಕಲ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನೂ ಓದಿ-PM Modi Visit: 7 ಪಟ್ಟಣಗಳು, 8 ಕಾರ್ಯಕ್ರಮಗಳು 36 ಗಂಟೆಗಳಲ್ಲಿ ಪ್ರಧಾನಿ ಮೋದಿ 5300 ಕಿಮೀ ಯಾತ್ರೆ!
ಕೊಲೆಗೈದಿರುವ ವ್ಯಕ್ತಿಯನ್ನು ಮಾರುತಿ ರಾಥೋಡ್ ಎನ್ನಲಾಗಿದ್ದು, ಇತನು ಮೂಲತಃ ಯಾದಗಿರಿ ತಾಲೂಕಿನ ಅರಕೇರಾದ ಪಂಚಶೀಲ ನಗರದ ನಿವಾಸಿ ಎನ್ನಲಾಗಿದೆ.ಮುಂಬೈನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.ಈಗ ಕೊಲೆಯಾಗಿರುವ ಮಹಿಳೆ ಉತ್ತರ ಪ್ರದೇಶ ಮೂಲದ ಅಂತಿಮ ವರ್ಮಾ ( 25) ಎನ್ನಲಾಗಿದ್ದು ಆಕೆ ಮುಂಬೈನಲ್ಲಿರುವ ತನ್ನ ಸಹೋದರ ಮನೆಯಲ್ಲಿ ವಾಸಿಸುತ್ತಿದ್ದಳು ಎನ್ನಲಾಗಿದೆ.
ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ಆರೋಪಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ತಿರುಗೇಟು
ಮಾರುತಿ ಕೂಡ ಆಕೆಯ ಮನೆ ಪಕ್ಕದಲ್ಲಿಯೇ ವಾಸಿಸುತ್ತಿದ್ದನು, ಹೀಗಾಗಿ ಇಬ್ಬರಿಗೂ ಪರಿಚಯವಾಗಿ ನಂತರ ಅದು ಪ್ರೇಮಾಂಕುರಕ್ಕೆ ತಿರುಗಿತ್ತು ಎನ್ನಲಾಗಿದೆ.ಆದರೆ ಆಕೆ ಆತನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿ ಬೇರೆಯವರ ಜೊತೆ ರಿಲ್ಸ್ ಮಾಡಲು ಮುಂದಾಗಿದ್ದಳು ಎನ್ನಲಾಗಿದೆ.ಇದರಿಂದ ಕುಪಿತನಾಗಿದ್ದ ಆತನು ಆಕೆ ತನ್ನ ಊರಿಗೆ ಬಂದಾಗ ಹೊಲದಲ್ಲಿ ಆಕೆಯನ್ನು ಹತ್ಯೆಗೈದು ಪೆಟ್ರೋಲ್ ಹಾಕಿ ಸುತ್ತಿದ್ದಾನೆ ಎನ್ನಲಾಗಿದೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.