Meat being given by depositing Aadhaar-PAN card at the shop: ಉತ್ತರ ಪ್ರದೇಶ ರಾಜ್ಯದ ಶಾಮ್ಲಿಯಲ್ಲಿ ಬರುವ ಠಾಣಾ ಭವನ ಪೊಲೀಸ್ ಠಾಣೆ ವ್ಯಾಪ್ತಿಯ ಜಲಾಲಾಬಾದ್‌ನಲ್ಲಿ, ಕೋಳಿ ಮಾಂಸದ ಅಂಗಡಿಯಲ್ಲಿ ಉಚಿತ ಮಾಂಸವನ್ನು ಪಡೆಯಲು ಜನರು ಮುಗಿಬಿದ್ದ ಘಟನೆ ಸಂಭವಿಸಿದೆ. ವಿಶೇಷವೆಂದರೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ನಕಲು ಪ್ರತಿ ಸಲ್ಲಿಸಿದ ಮೇಲೆ ಉಚಿತ ಕೋಳಿ ಮಾಂಸದ ಆಮೀಷ ನೀಡುವಲ್ಲಿ ತೊಡಗಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

COMMERCIAL BREAK
SCROLL TO CONTINUE READING

ತನಿಖೆ ನಡೆಸುತ್ತಿರುವ ಸೈಬರ್ ಕ್ರೈಂ ತಂಡ 
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸೈಬರ್ ಕ್ರೈಂ ತಂಡದ ಪೊಲೀಸರು ತನಿಖೆಯಲ್ಲಿ ನಿರತರಾಗಿದ್ದಾರೆ. ಪ್ರಕರಣದ ಆಳಕ್ಕೆ ತಲುಪುವ ಉದ್ದೇಶದಿಂದ ಪೋಲೀಸ್ ಅಧಿಕಾರಿಗಳು, ಇನ್ನೂ ಏನನ್ನೂ ಹೇಳುವುದರಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಕೋಳಿ ಮಾಂಸ ಹಂಚುತ್ತಿದ್ದ ಆರೋಪಿಗಳಿಬ್ಬರೂ ಚಿಕ್ಕಪ್ಪ ಮತ್ತು ಸೋದರಳಿಯರಾಗಿದ್ದಾರೆ ಎನ್ನಲಾಗಿದೆ. ದೆಹಲಿ-ಯಮುನೋತ್ರಿ ಹೆದ್ದಾರಿಯಲ್ಲಿ ಬರುವ ಪೀಠ್ ಮೈದಾನ್ ಪುಲಿಯಾ ಬಳಿ ಪ್ರದೀಪ್ ಅವರು ರೂಸ್ಟರ್ ಮಾಂಸದ ಅಂಗಡಿಯನ್ನು ಹೊಂದಿದ್ದಾರೆ. ಬಹಳ ದಿನಗಳಿಂದ ಈ ಅಂಗಡಿಯಲ್ಲಿ ಫೋಟೊ, ಆಧಾರ್ ಕಾರ್ಡ್, ಪಾನ್ ಕಾರ್ಡ್ ನಕಲು ಪ್ರತಿ ಸಲ್ಲಿಸಿದವರಿಗೆ  ಕೋಳಿ ಮಾಂಸವನ್ನು ಉಚಿತವಾಗಿ ನೀಡಲಾಗುತ್ತಿತ್ತು.


ಇದನ್ನೂ ಓದಿ- Lover Arrested: ರಸ್ತೆಯಲ್ಲಿಯೇ ಪ್ರೇಮಿಗಳ ಲವ್ವಿ-ಡವ್ವಿ: ಯುವಕನನ್ನು ವಶಕ್ಕೆ ಪಡೆದ ಪೊಲೀಸರು

ವಿಚಾರಣೆಯಲ್ಲಿ ಬಹಿರಂಗವಾಗಿದ್ದಾದ್ದರು ಏನು?
ನಂತರ ಕ್ರಮೇಣವಾಗಿ ಈ ಸಂಗತಿ ಎಲ್ಲರಿಗೂ ತಿಳಿದ ಹಿನ್ನೆಲೆ ನೂರಕ್ಕೂ ಹೆಚ್ಚು ಜನರು ಉಚಿತವಾಗಿ ನೀಡಿದ ಕೋಳಿ ಮಾಂಸದ ರುಚಿಯನ್ನು ಅಸ್ವಾದಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಅಂಗಡಿ ಮಾಲೀಕ ಸ್ವಾಮಿ ಪ್ರದೀಪ್ ಕುಮಾರ್ ಮತ್ತು ದೆಹಲಿ ನಿವಾಸಿ ತುಷಾರ್ ಎಂಬ ಯುವಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇಬ್ಬರನ್ನೂ ತೀವ್ರ ವಿಚಾರಣೆಗೊಳಪಡಿಸಿದ ನಂತರ, ಬಂಧಿತ ಯುವಕ ತುಷಾರ್ ತಾನು ದೆಹಲಿ ನಿವಾಸಿಯಾಗಿದ್ದೇನೆ ಮತ್ತು ಬಿಎ ವಿದ್ಯಾರ್ಥಿಯಾಗಿದ್ದೇನೆ ಎಂದು ಹೇಳಿದ್ದಾನೆ. ಖಾಸಗಿ ಕಂಪನಿಯಲ್ಲಿ ಬಹಳ ದಿನಗಳಿಂದ ಕೆಲಸ ಮಾಡುತ್ತಿದ್ದು, ಆ ಕಂಪನಿಯಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು  ಫೋಟೋ ವಿವರಗಳನ್ನು ಸಲ್ಲಿಸಿದ ಬಳಿಕ ಕೈತುಂಬಾ ಹಣ ಸಿಗುತ್ತಿತ್ತು ಮತ್ತು ಇದೇ ಕಾರಣಕ್ಕಾಗಿ ಇಬ್ಬರು ಕೋಳಿ ಮಾಂಸವನ್ನು ಜನರಿಗೆ ಉಚಿತವಾಗಿ ನೀಡುತ್ತಿದ್ದರು ಎಂಬುದನ್ನು ಒಪ್ಪಿಕೊಂಡಿದ್ದಾನೆ. ಕಳೆದ 3 ತಿಂಗಳಿನಿಂದ ಅವರ ಈ ವ್ಯವಹಾರ ನಡೆಯುತ್ತಿತ್ತು ಎಂಬುದು ಇಲ್ಲಿ ಗಮನಾರ್ಹ.


ಇದನ್ನೂ ಓದಿ-NRI: ಮಲೇಷ್ಯಾನಲ್ಲಿರುವ ಭಾರತೀಯ ಮೂಲದ ವಿಕಲಚೇತನ ವ್ಯಕ್ತಿಗೆ ಮುಂದಿನ ವಾರ ಗಲ್ಲುಶಿಕ್ಷೆ, ಕಾರಣ ಇಲ್ಲಿದೆ

ಪ್ರಕರಣದ ತನಿಖೆ ಮುಂದುವರಿದಿದೆ
ಇಷ್ಟು ದೊಡ್ಡ ಪ್ರಮಾಣದಲ್ಲಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವ್ಯಕ್ತಿಗಳ ಫೋಟೋಗಳಲ್ಲಿ ಸಂಗ್ರಹಿಸಿದ ದತ್ತಾಂಶವನ್ನು ಇದೀಗ ಇವರಿಬ್ಬರು ಏನು ಮಾಡಲು ಹೊರಟಿದ್ದಾರೆ ಮತ್ತು ಅವರ ಜಾಲ ಎಲ್ಲಿಯವರೆಗೆ ಪಸರಿಸಿದೆ ಎಂಬುದರ ತನಿಖೆಯಲ್ಲಿ ಠಾಣಾ ಭವನ ಪೊಲೀಸರು ಮತ್ತು ಸೈಬರ್ ಕ್ರೈಂ ತಂಡ ನಿರತರಾಗಿದ್ದಾರೆ. ಈ ಬಗ್ಗೆ ಪೊಲೀಸರು ಇನ್ನೂ ಯಾವುದೇ ಮಾಹಿತಿ ನೀಡಲು ಸಿದ್ಧರಿಲ್ಲದಿದ್ದರೂ, ಈ ವಿಷಯವು ಪ್ರದೇಶದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಸದ್ಯ ಪೊಲೀಸರು ಈ ಪ್ರಕರಣದ ಪ್ರಮುಖ ಆರೋಪಿಗಳ ಹುಡುಕಾಟದಲ್ಲಿ ನಿರತರಾಗಿದ್ದಾರೆ.


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.