ಬೆಂಗಳೂರು: ಇಂದು ಬೆಳ್ಳಂಬೆಳಗ್ಗೆ ರಾಜ್ಯದ ಸರ್ಕಾರಿ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶಾಕ್​ ನೀಡಿದೆ. ರಾಜ್ಯಾದ್ಯಂತ 80 ಕಡೆಗಳಲ್ಲಿ 300 ಎಸಿಬಿ ಅಧಿಕಾರಿಗಳ ತಂಡ 21 ಅಧಿಕಾರಿಗಳ ಮನೆಯ ಮೇಲೆ ದಾಳಿ ನಡೆಸಿದೆ. ವಿವಿಧ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಇಂದು ಬೆಳಗ್ಗೆ ಆರು ಗಂಟೆಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ‌.


COMMERCIAL BREAK
SCROLL TO CONTINUE READING

ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಸಂಬಂಧ ದಾಳಿ ನಡೆದಿದ್ದು, ಸರ್ಕಾರಿ ಅಧಿಕಾರಿಗಳ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ. ಬೆಂಗಳೂರು ಸೇರಿದಂತೆ 10 ಜಿಲ್ಲೆಗಳಲ್ಲಿ ಎಸಿಬಿ ದಾಳಿ ನಡೆದಿದೆ. ಬೆಂಗಳೂರಿನ ಜೆಪಿ ನಗರ, ಬಸವನಗುಡಿ, ಚಂದ್ರಾಲೇಔಟ್, ಬಸವೇಶ್ವರನಗರ, ಬನಶಂಕರಿ, ಕ್ರೆಸೆಂಟ್ ರಸ್ತೆ ಹಾಗೂ ಉತ್ತರಹಳ್ಳಿ ಭಾಗ ದೊಡ್ಡಕಲ್ಲಸಂದ್ರದಲ್ಲಿ ಎಸಿಬಿ ತಲಾಶ್ ನಡೆದಿದೆ. 


ಇದನ್ನೂ ಓದಿ: ಎತ್ತ ನೋಡಿದರೂ 500 ರ ನೋಟಿನ ಸುರಿಮಳೆ, ಸಂಗ್ರಹಕ್ಕೆ ಮುಗಿ ಬಿದ್ದ ಜನ ಇಲ್ಲಿದೆ ವಿಡಿಯೋ


ಯಾವ ಅಧಿಕಾರಿಗಳಿಗೆ‌ ಎಸಿಬಿ ಶಾಕ್?
1. ಭೀಮಾ ರಾವ್ ವೈ ಪವಾರ್ (ಸೂಪರಿಂಟೆಂಡೆಂಟ್ ಆಫ್ ಇಂಜಿನಿಯರ್, ಬೆಳಗಾವಿ)
2. ಹರೀಶ್ (ಸಹಾಯಕ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ಉಡುಪಿ)
3. ರಾಮಕೃಷ್ಣ ಎಚ್ .ವಿ. (ಎಇಇ, ಸಣ್ಣ ನೀರಾವರಿ, ಹಾಸನ)
4.ರಾಜೀವ್ ಪುರಸಯ್ಯ ನಾಯಕ್ (ಸಹಾಯಕ ಇಂಜಿನಿಯರ್, ಪಿಡಬ್ಲ್ಯುಡಿ ಇಲಾಖೆ, ಕಾರವಾರ)
5. ಬಿ ಆರ್ ಬೋಪಯ್ಯ (ಜೂನಿಯರ್ ಇಂಜಿನಿಯರ್, ಪೊನ್ನಂಪೇಟೆ ಜಿಲ್ಲಾ ಪಂಚಾಯತ್)
6. ಮಧುಸೂಧನ್ (ಜಿಲ್ಲಾ ನೋಂದಣಾಧಿಕಾರಿ, IGR ಕಚೇರಿ, ಬೆಳಗಾವಿ)
7. ಪರಮೇಶ್ವರಪ್ಪ (ಸಹಾಯಕ ಇಂಜಿನಿಯರ್, ಸಣ್ಣ ನೀರಾವರಿ, ಹೂವಿನಹಡಗಲಿ)
8. ಯೆಲ್ಲಪ್ಪ ಎನ್ ಪಡಸಾಲಿ (RTO, ಬಾಗಲಕೋಟೆ)
9. ಶಂಕರಪ್ಪ ನಾಗಪ್ಪ ಗೋಗಿ ( ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ, ಬಾಗಲಕೋಟೆ)
10. ಪ್ರದೀಪ್ ಎಸ್ ಆಲೂರ್ ( ಪಂಚಾಯತ್ ಗ್ರೇಡ್-2 ಕಾರ್ಯದರ್ಶಿ, RDPR, ಗದಗ)
11. ಸಿದ್ದಪ್ಪ ಟಿ. (ಉಪ ಮುಖ್ಯ ವಿದ್ಯುತ್ ಅಧಿಕಾರಿ, ಬೆಂಗಳೂರು)
12. ತಿಪ್ಪಣ್ಣ ಪಿ ಸಿರಸಗಿ ( ಜಿಲ್ಲಾ ಕಾರ್ಯಕ್ರಮಾಧಿಕಾರಿ ಬೀದರ್)
13. ಮೃತುಂಜಯ ಚೆನ್ನಬಸಯ್ಯ ತಿರಾಣಿ ( ಸಹಾಯಕ ಕಂಟ್ರೋಲರ್, ಕರ್ನಾಟಕ ಪಶುವೈದ್ಯಕೀಯ, ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್)
14. ಮೋಹನ್ ಕುಮಾರ್ (ಕಾರ್ಯನಿರ್ವಾಹಕ ಇಂಜಿನಿಯರ್, ನೀರಾವರಿ ಇಲಾಖೆ, ಚಿಕ್ಕಬಳ್ಳಾಪುರ ಜಿಲ್ಲೆ)
15. ಶ್ರೀಧರ್ (ಜಿಲ್ಲಾ ನೋಂದಣಾಧಿಕಾರಿ, ಕಾರವಾರ)
16. ಮಂಜುನಾಥ್ ಜಿ (ನಿವೃತ್ತ ಇಇ. PWD)
17. ಶಿವಲಿಂಗಯ್ಯ (ಸಿ ಗ್ರೂಪ್​, ಬಿಡಿಎ)
18. ಉದಯ ರವಿ ( ಪೊಲೀಸ್ ಇನ್ಸ್‌ಪೆಕ್ಟರ್, ಕೊಪ್ಪಳ)
19. ಬಿ. ಜಿ.ತಿಮ್ಮಯ್ಯ ( ಕೇಸ್ ವರ್ಕರ್, ಕಡೂರು ಪುರಸಭೆ)
20. ಚಂದ್ರಪ್ಪ ಸಿ ಹೋಳೇಕರ್ (UTP ಕಚೇರಿ, ರಾಣೆಬೆನ್ನೂರು)
21. ಜನಾರ್ದನ್ (ನಿವೃತ್ತ ರಿಜಿಸ್ಟ್ರಾರ್ ಮೌಲ್ಯಮಾಪನಗಳು (ಭೂಮಿ, ಬೆಂಗಳೂರು)


ಇದನ್ನೂ ಓದಿ: ಜೂ.23ರಿಂದ ಮುಂಗಾರು ಪ್ರವೇಶ: ಈ ರಾಜ್ಯದಲ್ಲಿ ಯೆಲ್ಲೋ ಅಲರ್ಟ್‌ ಘೋಷಿಸಿದ ಹವಾಮಾನ ಇಲಾಖೆ


ಬೆಂಗಳೂರು ಮಾತ್ರವಲ್ಲದೆ ಚಿಕ್ಕಮಗಳೂರು, ಬೆಳಗಾವಿ, ಕಲಬುರಗಿ, ವಿಜಯನಗರ, ಶಿವಮೊಗ್ಗ, ಕೊಪ್ಪಳ, ಬಾಗಲಕೋಟೆಯ ಹಲವಾರು ಕಡೆಗಳಲ್ಲಿ ಎಸಿಬಿ ದಾಳಿ ನಡೆಸಿದೆ. 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ