ಬೆಂಗಳೂರು : ರಾಜಧಾನಿ ರಾತ್ರಿಯಾದರೆ ಹೆಣ್ಣು ಮಕ್ಕಳಿಗೆ ಸೇಫ್‌ ಅಲ್ಲ ಎನ್ನುವಂತಹ ಘಟನೆಗೆಳು ನಡೆಯುತ್ತಲೇ ಇವೆ. ಕ್ಯಾಬ್‌, ಟ್ಯಾಕ್ಸಿಗಳು ಸೇಫ್‌ ಎನ್ನುವ ಕಂಪನಿಗಳ ಕಾರು ಚಾಲಕರಿಂದಲೇ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿದೆ. ಸದ್ಯ ಇದಕ್ಕೆ ಉದಾರಹಣೆ ಎನ್ನುವಂತೆ ಚಿತ್ರನಟಿ, ಮಾಡೆಲ್‌ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ.


COMMERCIAL BREAK
SCROLL TO CONTINUE READING

ಜಕ್ಕೂರಿನಿಂದ ಬಾಬುಸಾಪಾಳ್ಯಕ್ಕೆ ಯಾರ್ಪಿಡೋ ಟ್ಯಾಕ್ಸಿ ಬುಡ್‌ ಮಾಡಿದ್ದ ನಟಿ ಸುಜೀತಾ ಸುಂದರ್‌ ಮೇಲೆ ಮಂಜುನಾಥ್‌ ತಿಪ್ಪೆಸ್ವಾಮಿ ಎಂಬ ಕಾಮುಕ ಡ್ರೈವರ್‌ ಅಸಭ್ಯವಾಗಿ ವರ್ತನೆ ಮಾಡಿದ್ದು, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸುಜೀತಾ ಆರೋಪಿಸಿದ್ದಾರೆ. ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಕೆಲಸ ಮಾಡುತ್ತಿರುವ ಸುಜೀತಾ ಅವರು, 10-30ಕ್ಕೆ ಜಕ್ಕೂರಿನಿಂದ ಬಾಬುಸಾಪಾಳ್ಯಕ್ಕೆ ರ್ಯಾಪಿಡೋ ಟ್ಯಾಕ್ಸಿ ಬುಕ್ ಮಾಡಿದ್ದರು.


ಇದನ್ನೂ ಓದಿ: David Warner : ರಶ್ಮಿಕಾಗೆ ಐ ಆಮ್ ಸಾರಿ.. ಎಂದ ಕ್ರಿಕೆಟರ್ ಡೇವಿಡ್ ವಾರ್ನರ್! 


ಕೆಎ 51 ಹೆಚ್‌ 5965 ಚಾಲಕ ಮಂಜುನಾಥ್‌ ತಿಪ್ಪೇಸ್ವಾಮಿ ಸುಜೀತಾ ಜೊತೆ ಅಸಭ್ಯ ವರ್ತನೆ ತೋರಿ, ಲೈಂಗಿಕ ದೌರ್ಜನ್ಯ ನಡೆಸಿದ್ದಾಗಿ ತಿಳಿದು ಬಿಂದಿದೆ. ಈ ಕುರಿತು ಸುಜೀತಾ ಅವರು ರ್ಯಾಪಿಡ್‌ ಹಾಗೂ ಚಾಲಕನ ವಿರುದ್ಧ ಹೆಣ್ಣೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಂತಹ ಸಾಲು ಸಾಲು ಪ್ರಕರಣಗಳು ಬೆಂಗಳೂರಿನಲ್ಲಿ ಜರುಗುತ್ತಿದ್ದು, ರಾತ್ರಿ ಹೊತ್ತು ಬೆಂಗಳೂರು ಹೆಣ್ಣು ಮಕ್ಕಳಿಗೆ ಸೇಫ್‌ ಅಲ್ಲ ಎನ್ನುವ ಮಾತಿಗೆ ಪೂರಕವಾಗಿದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.