ಬೆಂಗಳೂರು: ಖ್ಯಾತ ನಟಿ ಶ್ರೀಲೀಲಾ ಸದ್ಯ ಕನ್ನಡ ಅಲ್ಲದೇ ತೆಲುಗಿನಲ್ಲಿ ಫುಲ್‌ ಬ್ಯುಸಿಯಾಗಿದ್ದಾರೆ. ಆದರೆ ಶ್ರೀಲೀಲಾ ತಾಯಿ ಸ್ವರ್ಣಲತಾ ಮಾತ್ರ ಕಿರಿಕ್ ರಾಣಿಯಂತೆ ವರ್ತಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಪ್ರತಿಷ್ಠಿತ ಅಲೆಯನ್ಸ್ ವಿಶ್ವವಿದ್ಯಾನಿಲಯ ವಿಚಾರವಾಗಿ ಗಲಾಟೆ ಮಾಡಿಕೊಂಡು ವಿಚಾರಣೆ ಎದುರಿಸುತ್ತಿದ್ದಾರೆ. ಈ ಘಟನೆ ಮಾಸುವ ಮುನ್ನವೇ ತನ್ನ ಗಂಡನ ಮನೆಗೆ ನುಗ್ಗಿ ದಾಂಧಲೆ ಮಾಡಿದ್ದಾರೆ ಎನ್ನುವ ರೋಪ ಕೇಳಿಬಂದಿದೆ. ಸ್ವರ್ಣಲತಾ ಪತಿ ಸುಭಾಕರ್ ರಾವ್ ಸೂರಪನೇನಿ ದೂರಾಗಿ ಪ್ರತ್ಯೇಕವಾಗಿಯೇ ವಾಸುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ : Adipurush Teaser: ಟ್ರೋಲ್‌ ಆದ ಆದಿಪುರುಷ.! ಇದಕ್ಕಿಂತ ಛೋಟಾ ಭೀಮ್‌ ಬೆಟರ್‌ ಎಂದ ಫ್ಯಾನ್ಸ್‌.!


ಆದರೀಗ ಸ್ವರ್ಣಲತಾ ಕೋರಮಂಗಲದ ಪ್ರೆಸ್ಟೀಜ್ ಅಪಾರ್ಟ್ಮೆಂಟ್ ಗಂಡನ ಮನೆಗೆ ನುಗ್ಗಿ ದಧಲೆ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಮನೆಗೆ ಬೀಗ ಹಾಕಿರುವ ಬೀಗ ಮುರಿದು ಒಳ ನುಗ್ಗಿ ಸ್ವರ್ಣಲತಾ ದಾಂಧಲೆ ಮಾಡಿದ್ದಾರೆ ಎಂದು ಪತಿ ಸುಭಾಕರ್ ರಾವ್ ಪತ್ನಿ ಸ್ವರ್ಣಲತಾ ವಿರುದ್ಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 


ಐಪಿಸಿ ಸೆಕ್ಷನ್ 448, 34 ಅಡಿಯಲ್ಲಿ ಸ್ವರ್ಣಲತಾ ವಿರುದ್ಧ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಸ್ವರ್ಣಲತಾ ಅವರಿಗೆ ಪತಿ ಸುಭಾಕರ್ ರಾವ್ ಫ್ಲಾಟ್ ನೀಡಿದ್ದರು. ಆದರೆ ಗಂಡ ಹೆಂಡತಿ ನಡುವೆ ಮನಸ್ತಾಪದ ಬಳಿಕ ಇಬ್ಬರೂ ಬೇರೆ-ಬೇರೆಯಾಗಿ ಸುಭಾಕರ್ ರಾವ್ ಮನೆಗೆ ಬೀಗ ಹಾಕಿದ್ದರು. ಇದೀಗ ಸ್ವರ್ಣಲತಾ ಅಕ್ಟೋಬರ್ 3ರಂದು ಫ್ಲಾಟ್‌ಗೆ ಅಕ್ರಮವಾಗಿ ನುಗ್ಗಿ ಗಲಾಟೆ ಮಾಡಿದ್ದಾರೆ ಎನ್ನಲಾಗಿದೆ. 
 
ಇನ್ನೂ ಕೆಲ ತಿಂಗಳ ಹಿಂದೆ ನಟಿ ಶ್ರೀಲೀಲಾ ತನ್ನ ಮಗಳಲ್ಲ ಎಂದು ಸುಭಾಕರ್ ರಾವ್ ಹೇಳಿದ್ದರು. ಎಲ್ಲಾ ಕಡೆ ಶ್ರೀಲೀಲಾ ನನ್ನ ಮಗಳು ಎನ್ನುವ ಸುದ್ದಿ ಹರಿದಾಡುತ್ತಿದೆ. ಆದರೆ ಆಕೆ ನನ್ನ ಮಗಳಲ್ಲ. ಪತ್ನಿ ಜತೆ ಡೈವೋರ್ಸ್​ ಆದ ನಂತರ ಶ್ರೀಲೀಲಾ ಹುಟ್ಟಿದ್ದಾರೆ. ಆ ಡೈವೋರ್ಸ್ ಕೇಸ್ ಕೋರ್ಟ್​ನಲ್ಲಿ ಇನ್ನೂ ಇತ್ಯರ್ಥವಾಗಿಲ್ಲ. ನಾನು ಅವಳಿಗೆ ಜನ್ಮ ನೀಡಿದ ಅಪ್ಪನಲ್ಲ. ವಿನಾಕಾರಣ ನಾನು ಆಕೆಯ ತಂದೆ ಎಂದು ಹೇಳುತ್ತಿದ್ದಾರೆ. ನನ್ನ ಆಸ್ತಿಯಲ್ಲಿ ಪಾಲು ಕೇಳಲೆಂದು ಶ್ರೀಲೀಲಾ ಮತ್ತು ಆಕೆಯ ತಾಯಿ ನನ್ನ ಹೆಸರು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದರು. ನಟಿ ಶ್ರೀಲೀಲಾ ತನ್ನ ತಾಯಿ ಸ್ವರ್ಣಲತಾ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. 


ಇದನ್ನೂ ಓದಿ : ಚಿತ್ರಮಂದಿರಗಳಲ್ಲಿ ನಾಡಗೀತೆ ಮೊಳಗುವಂತೆ ಮಾಡಿ : ಸಿಎಂ ಗೆ ನಟ ಝೈದ್ ಖಾನ್ ಮನವಿ


ಇನ್ನೂ ಕೆಲ ದಿನಗಳ ಹಿಂದೆ ಖ್ಯಾತ ರಾಜಕಾರಣಿಯೊಬ್ಬರಿಗೆ ಪ್ರತಿಷ್ಠಿತ ಅಲೆಯನ್ಸ್ ವಿಶ್ವವಿದ್ಯಾಲಯ ಮಾರಿಸಲು ಶ್ರೀಲೀಲಾ ತಾಯಿ ಸ್ವರ್ಣಲತಾ ಪ್ಲಾನ್ ಮಾಡಿದ್ದರು ಎನ್ನುವ ಆರೋಪವಿದೆ. ಇದಕ್ಕಾಗಿ ಅಲೆಯನ್ಸ್ ವಿವಿ ಮಾಜಿ ಚೇರ್ಮನ್ ಮಧುಕರ್ ಅಂಗೂರ್ ಜೊತೆ ಸೇರಿ ಡೀಲ್ ಕುದುರಿಸಲು ಮುಂದಾಗಿದ್ದರು. ಕೋರ್ಟ್ ಆದೇಶವಿದೆ, ಈ‌ ಕಾಲೇಜು‌ ನಮ್ಮದು ಎಂದು ಮಧುಕರ್ ಅಂಗೂರ್ ಹಾಗೂ ಸ್ವರ್ಣಲತಾ ವಿವಿಗೆ ಅಕ್ರಮವಾಗಿ ನುಗ್ಗಿದ್ದರು. ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಜೀವ ಬೆದರಿಕೆ ಹಾಕಿದ್ದರು. 


ಈ ಘಟನೆ ಬಳಿಕ ಸ್ವರ್ಣಲತಾ ವಿರುದ್ಧ ಎಫ್ಐಆರ್ ಸಹ ದಾಖಲಾಗಿದೆ. ಇದೀಗ ಮತ್ತೊಂದು ಕಿರಿಕ್ ಮಾಡಿಕೊಂಡಿರುವ ನಟಿ ಶ್ರೀಲೀಲಾ ತಾಯಿ  ಸ್ವರ್ಣಲತಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ರೀತಿ ಸ್ವರ್ಣಲತಾ ಕಿರಿಕ್‌ ಮಾಡಿಕೊಳ್ಳುತ್ತಾ ಹೋದರೆ ಮಗಳ ಸಿನಿ ಕರಿಯರ್‌ಗೂ ಕೂಡ ಇದು ಎಫೆಕ್ಟ್‌ ಆಗಬಹುದಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.