ಬೆಂಗಳೂರು: ವಿಧಾನಸೌಧದಲ್ಲಿ ಅನಧಿಕೃತವಾಗಿ ಹಣ ಸಾಗಾಟ ಮಾಡುತ್ತಿದ್ದ ಎಂಜಿನಿಯರ್ ಓರ್ವರನ್ನು ವಶಕ್ಕೆ ಪಡೆದಿರು ಪೊಲೀಸರು ಆತನಿಂದ  ರೂ.10.5 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಬುಧವಾರ ಸಂಜೆ 7 ಗಂಟೆಗೆ ವಿಕಾಸಸೌಧದ ಪಶ್ಚಿಮ ದ್ವಾರದ ಮೂಲಕ ಮಂಡ್ಯ ಮೂಲಕ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಜಗದೀಶ್ ಎಂಬಾತ ಹಣ ಸಾಗಾಟ ಮಾಡುತ್ತಿದ್ದರು. 


ಇದನ್ನೂ ಓದಿ- ಅಯ್ಯಪ್ಪಸ್ವಾಮಿ ಮಾಲಾಧಾರಿಗಳಿಗೆ ಮುಸ್ಲಿಮರಿಂದ ಅನ್ನಪ್ರಸಾದ ವ್ಯವಸ್ಥೆ
 
ಗೇಟ್‌ನಲ್ಲಿ ಪೊಲೀಸರು ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಬ್ಯಾಗ್‌ನಲ್ಲಿ ದೊಡ್ಡ ಮೊತ್ತದ ಹಣ ಇರುವುದು ಪತ್ತೆಯಾಗಿದೆ.  ಆದರೆ ಹಣದ ಮೂಲಕ ಕುರಿತಾಗಿ ಪೊಲೀಸರು ಪ್ರಶ್ನಿಸಿದಾಗ ಗುತ್ತಿಗೆದಾರರಿಗೆ ನೀಡಬೇಕು.ಸಚಿವರ ಕಚೇರಿಗೆ ತೆರಳುತ್ತಿದ್ದೇನೆಂದು ಎಇ ತಿಳಿಸಿದ್ದಾನೆ ಎನ್ನಲಾಗಿದೆ. ಆದರೆ ಸಚಿವಾಲಯ ಅಥವಾ ಗುತ್ತಿಗೆದಾರರ ಮಾಹಿತಿ ಬಗ್ಗೆ ಸ್ಪಷ್ಟ ಮಾಹಿತಿ ನೀಡದಿರುವ ಹಿ‌ನ್ನಲೆಯಲ್ಲಿ ನಗದು ಹಣ ಮತ್ತು ಎಇ ಜಗದೀಶ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಘಟನೆಯ ಕುರಿತಾಗಿ‌ ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ಕ್ರೈ ನಂಬರ್ 3/2023 ಎಫ್‌ಐ ಆರ್‌ ದಾಖಲಾಗಿದ್ದು ಮಾಡಲಾಗಿದೆ ಎಂದು ತಿಳಿದುಬಂದಿದೆ. 
 
ಇದನ್ನೂ ಓದಿ- ಸವದತ್ತಿ ಯಲ್ಲಮ್ಮ ದೇವಿ ದರ್ಶನಕ್ಕೆ ಹೊಗುವ ಮಾರ್ಗಮಧ್ಯ ತಡರಾತ್ರಿ ಭೀಕರ ಅಪಘಾತ ಸ್ಥಳದಲ್ಲೇ ಆರು ಸಾವು
 
ಸಂಜೆ ವೇಳೆ ಎಂಜಿನಿಯರ್ ಬಳಿ ಹಣ ಮತ್ತು ಅನುಮಾನಾಸ್ಪದ ನಡೆ,ವರ್ತನೆ ಮತ್ತು ಹಣದ‌ ಮೂಲದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.