ಬೆಂಗಳೂರು:‌  ಕನ್ನಡದ ಹೆಸಾರಂತ ಸಿನಿಮಾದಲ್ಲಿ  ಖಳನಾಯಕನ‌ ಪಾತ್ರವನ್ನ ಅಚ್ಚುಕಟ್ಟಾಗಿ ನಿರ್ವಹಿಸಿದ್ದ ಆತ ನಿಜ‌ಜೀವನದಲ್ಲೂ ಕೂಡ ಮಹಾಲಕ್ಷ್ಮೀ ಲೇಔಟ್ ಠಾಣೆಯ ರೌಡಿ ಶೀಟರ್ ಆಗಿದ್ದ. ಸಿನಿಮಾ ಮಾಡ್ಕೊಂಡು ಆರಾಮವಾಗಿ ಇದ್ದಿದ್ರೆ ಓಕೆ ಆದ್ರೆ ಅದನ್ನ ಬಿಟ್ಟು ಸಿನಿಮಾ ಸ್ಟೈಲ್‌ನಲ್ಲಿ ಇಲ್ಲೂ ವಿಲನ್ ರೀತಿ ಹಣಕ್ಕಾಗಿ ಕಿಡ್ನಾಪ್ ಮಾಡಿ ಜೈಲು ಸೇರಿದ್ದಾನೆ. 


COMMERCIAL BREAK
SCROLL TO CONTINUE READING

ಇದನ್ನು ಓದಿ: ಹಿಜಾಬ್ ಧರಿಸಿ ಬಂದ ಆರು ವಿದ್ಯಾರ್ಥಿನಿಯರು ಅಮಾನತು ..!


ನಾರಾಯಣ ಕೃತ್ಯವೆಸಗಿರುವ ಕಿರಾತಕ. ಈತ ವೀರಪರಂಪರೆ, ದುಷ್ಟ ಸೇರಿದಂತೆ 40ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾನೆ. ಸದ್ಯ ನಾರಾಯಣ ಆಂಡ್ ಟೀಂ ಕಿಡ್ನಾಪ್ ಕೇಸ್‌ನಲ್ಲಿ ಜೈಲು ಸೇರಿದ್ದಾರೆ.


ಮೇ 20ರಂದು ನಗರದ ಶಿವಾನಂದ ಸರ್ಕಲ್ ಬಳಿ ವಜ್ರದ ವ್ಯಾಪಾರಿಯನ್ನ ಕಿಡ್ನಾಪ್ ಮಾಡಿದ್ದರು. ‌ಕಿಡ್ನಾಪ್ ಮಾಡಿ ಎರಡು ಕೋಟಿಗೆ ಡಿಮ್ಯಾಂಡ್ ಇಟ್ಟಿದ್ದ ಆರೋಪಿಗಳು ಕೊನೆಗೆ 25ಲಕ್ಷ ಹಣ ಪಡೆದು ಆರು ಚೆಕ್‌ಗಳನ್ನು ಪಡೆದಿದ್ರು. ಈ ಪ್ರಕರಣ ದಾಖಲಿಸಿಕೊಂಡಿದ್ದ ಹೈಗ್ರೌಂಡ್ ಪೊಲೀಸರು ಸದ್ಯ ನಾರಾಯಣ, ಉಮೇಶ, ಅಶ್ವಥ್, ನೂತನ್‌ನನ್ನು ಬಂಧಿಸಿದ್ದಾರೆ. 


ಇದನ್ನು ಓದಿ: ರಾಜ್ಯ ಮತ್ತು ಇಲ್ಲಿನ ಜನ ಉಳಿಯಬೇಕು ಎಂಬ ಕಾರಣಕ್ಕೆ ನಾವು ಗೆಲ್ಲಬೇಕಾಗಿದೆ'


ವಜ್ರದ ವ್ಯಾಪಾರಿ ಬಳಿ ಸಾಕಷ್ಟು ಹಣ ಇದೆ. ಬೆದರಿಸಿದ್ರೆ ಪಕ್ಕಾ ಹಣ ಸಿಗುತ್ತೆ ಅನ್ನೋ ಪ್ಲಾನ್ ಮಾಡಿದ್ರು. ಪ್ಲಾನ್ ವರ್ಕೌಟ್ ಆದ್ರೂ ಕೊನೆಗೆ ಖಾಕಿ‌ ಕೈಗೆ ಲಾಕ್ ಆದಾಗ ಸಾಲದ ಕಥೆ ಕಟ್ಟಿ  ತಪ್ಪಿಸಿಕೊಳ್ಳುವ ನಾಟಕವಾಡಿದ್ರೂ. ಆದ್ರೆ ತನಿಖೆಯಲ್ಲಿ ಆರೋಪಿಗಳು ಹಣಕ್ಕಾಗಿ ಕಿಡ್ನಾಪ್ ಮಾಡಿರೋದು ಕನ್ಫರ್ಮ್ ಆಗಿದ್ದು,15 ಲಕ್ಷ ನಗದು ಹಾಗೂ ಒಂದು ಕಾರ್ ಸೀಜ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ