ಬೆಂಗಳೂರು: ಅಮಾವಾಸ್ಯೆ ದಿನ ಮನೆಯವರನ್ನು ದೇವಸ್ಥಾನಕ್ಕೆ ಕಳುಹಿಸಿ ಮನೆಗೆ ತೆರಳಿ ಚಿನ್ನಾಭರಣ ದೋಚಿ ನಿಂಬೆಹಣ್ಣು ಇಟ್ಟು ಮಾಟ ಮಾಡಿಸಿದ್ದಾರೆ ಅಂತಾ ಹೇಳಿ ಜ್ಯೋತಿಷಿ ಯಾಮಾರಿಸುತ್ತಿದ್ದ ಪ್ರಸಂಗ ಬೆಳಕಿಗೆ ಬಂದಿದೆ.  ಸದ್ಯ ಕಳ್ಳ ಜ್ಯೋತಿಷಿ ವಿರುದ್ಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಸಪೇಟೆಯ ಸುರೇಶ್ ಪಾಟೀಲ್ ವಿರುದ್ಧ ಸದ್ಯ ಮೋಸ ಹೋದ ಇಂದಿರಾ ಎಂಬುವರು ದೂರು ದಾಖಲಿಸಿದ್ದಾರೆ.


COMMERCIAL BREAK
SCROLL TO CONTINUE READING

ಗಂಡ-ಮಕ್ಕಳೊಂದಿಗೆ ಆಳ್ಳಾಲಸಂದ್ರದಲ್ಲಿ ಇಂದಿರಾ ವಾಸವಾಗಿದ್ದು ಜೀವನಕ್ಕಾಗಿ ಮನೆಗೆಲಸ ಮಾಡುತ್ತಿದ್ದರು. ಮಗಳನ್ನ ಕುಣಿಗಲ್ ನ ಹೆಬ್ಬೂರು ನಿವಾಸಿ ಗೋವಿಂದಗೌಡ ಎಂಬುವರೊಂದಿಗೆ ಮದುವೆ ಮಾಡಿಕೊಟ್ಟಿದ್ದರು. ಕೆಲ ತಿಂಗಳ ಬಳಿಕ ದಂಪತಿ ನಡುವೆ ಕೌಟುಂಬಿಕ ಕಲಹ ಹಿನ್ನೆಲೆ ತವರು ಮನೆಗೆ ಬರುತ್ತಿದ್ದ ಮಗಳನ್ನ ಕಂಡು ಇಂದಿರಾ ಚಿಂತಾಕ್ರಾಂತಳಾಗಿದ್ದಳು. ಈ ಬಗ್ಗೆ ತನ್ನ ತಾಯಿಯೊಂದಿಗೆ ಮನದ ದುಃಖವನ್ನ ಇಂದಿರಾ ವ್ಯಕ್ತಪಡಿಸಿದ್ದಳು.  ಸಮಸ್ಯೆಗೆ ಪರಿಹಾರವೆಂಬಂತೆ ಆಕೆಯ ತಾಯಿಯು ತನಗೆ ಜ್ಯೋತಿಷಿ ಸುರೇಶ್ ಪಾಟೀಲ್ ಪರಿಚಯವಿದೆ. ಅವರಿಗೆ ಶಾಸ್ತ್ರ ತೋರಿಸು ಎಲ್ಲವೂ ಸರಿಹೋಗಲಿದೆ ಎಂದು ಹೇಳಿ ಕಳೆದ ಡಿಸೆಂಬರ್ ನಲ್ಲಿ ಇಂದಿರಾ ನಿವಾಸಕ್ಕೆ ಕಳುಹಿಸಿದ್ದಳು.


ಇದನ್ನೂ ಓದಿ- ʼಜೋಡಿ ಕೊಲೆʼ ಮಾಡಿ ಎಸ್ಕೇಪ್ ಆದ ರೀಲ್ಸ್ ಸ್ಟಾರ್ ʼಜೋಕರ್ ಫಿಲಿಕ್ಸ್ʼ ..! ಬಂಧನಕ್ಕೆ ಬಲೆ ಬೀಸಿದ ಖಾಕಿ ಪಡೆ


ಮನೆ ದೋಚಿ ನಿಂಬೆಹಣ್ಣು ಇಡುತ್ತಿದ್ದ ಜ್ಯೋತಿಷಿ: 
ಕಳೆದ‌ ಡಿಸೆಂಬರ್ ನಲ್ಲಿ ಮನೆಗೆ ಬಂದ ಜ್ಯೋತಿಷಿ ಎಲ್ಲವೂ ಗಮನಿಸಿದ್ದಾನೆ. ನಿಮ್ಮ‌ ಮಗಳ ಜೀವನ ಸರಿಪಡಿಸುತ್ತೇನೆ. ಅಮಾವಾಸ್ಯೆ ದಿನದಂದು ಮನೆಯಲ್ಲಿ ಯಾರು ಇರಬಾರದು. ಎಲ್ಲರೂ ದೇವಸ್ಥಾನಕ್ಕೆ ಹೋಗುವಂತೆ ಹೇಳಿದ್ದ.‌ ಇದರಂತೆ ಇಂದಿರಾ ಕುಟುಂಬ ದೇವಸ್ಥಾನಕ್ಕೆ ಹೋಗಿತ್ತು.‌ ಇದೇ ಸರಿಯಾದ ಸಮಯದಲ್ಲಿ ಆರೋಪಿ ಮನೆಗೆ ಬಂದು 5 ಲಕ್ಷ ಬೆಲೆಯ ಚಿನ್ನಾಭರಣ ದೋಚಿದ್ದಾನೆ.‌ ಬಳಿಕ ಬೀರುವಿನಲ್ಲಿ ನಿಂಬೆ ಹಣ್ಣು ಇಟ್ಟಿದ್ದ‌‌. ಇದೇ ರೀತಿ ಅಮಾವಾಸ್ಯೆ ದಿನಗಳಂದೆ ಕಳ್ಳತನ ಮಾಡುತ್ತಿದ್ದ.‌ 


ಇದನ್ನೂ ಓದಿ- ಬೆಂಗಳೂರು ಟೆಕ್ ಸಂಸ್ಥೆಗೆ ನುಗ್ಗಿ ಸಿಇಒ, ವ್ಯವಸ್ಥಾಪಕ ನಿರ್ದೇಶಕರನ್ನು ಹತ್ಯೆಗೈದ ಮಾಜಿ ಉದ್ಯೋಗಿ


ಕೆಲ ದಿನಗಳ ಬಳಿಕ ಕುಟುಂಬಸ್ಥರನ್ನ ಭೇಟಿಯಾಗಿ ಮನೆಗೆ ಬಂದು ಬೀರುವನ್ನ ತೆರೆಯಿಸಿ ತಾನೇ ಇಟ್ಟಿದ್ದ ನಿಂಬೆಹಣ್ಣು ತೋರಿಸಿದ್ದಾನೆ. ನಿಮ್ಮ ಬೀಗರು ಮಾಟ- ಮಂತ್ರ ಮಾಡಿಸಿ ಚಿನ್ನದೊಡವೆ ದೋಚಿದ್ದಾರೆ‌. 65 ದಿನ ಕಾಲಾವಕಾಶ ಕೊಟ್ಟರೆ ದೋಚಿರುವ ಒಡವೆಗಳನ್ನು ಮರಳಿ ಕೊಡಿಸುವುದಾಗಿ ನಂಬಿಸಿ ಎಸ್ಕೇಪ್ ಆಗಿದ್ದಾನೆ.‌ ಎರಡು ತಿಂಗಳ ಬಳಿಕ ಪೋನ್ ಮಾಡಿದಾಗ ಕಳ್ಳ ಜ್ಯೋತಿಷಿ ಫೋನ್ ಸ್ಚಿಚ್ ಆಫ್ ಮಾಡಿಕೊಂಡಿದ್ದು, ಈತನ ಮೇಲೆ ಅನುಮಾನಗೊಂಡ ಕುಟುಂಬಸ್ಥರು ಯಲಹಂಕ ಪೊಲೀಸರಿಗೆ ಜ್ಯೋತಿಷಿ ವಿರುದ್ಧ ದೂರು ದಾಖಲಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.