Money Scandal: ಐಡಿಬಿಐ ಬ್ಯಾಂಕಿನಲ್ಲಿ ಪ್ರವಾಸೋದ್ಯಮ‌ ಇಲಾಖೆಯ ಅಕ್ರಮ ಹಣ ವರ್ಗಾವಣೆ (Money Laundering Scandals) ಹಗರಣ ಬೆಳಕಿಗೆ ಬಂದ ಬೆನ್ನಲ್ಲೇ ಈಗ ಮತ್ತೆ ಪಂಚಾಯತರಾಜ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಹಗರಣ ಬೆಳಕಿಗೆ ಬಂದಿದೆ. ಈ ಕುರಿತು ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮಾಹಿತಿ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಬಾಗಲಕೋಟೆ ನಗರದ ತಮ್ಮ ಕಚೇರಿಯಲ್ಲಿ ಮಾತನಾಡಿರುವ ಬಾಗಲಕೋಟೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಅವರು, ಪಂಚಾಯತರಾಜ್ (Panchayat Raj) ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸೇರಿದ 1ಕೋಟಿ 66 ಲಕ್ಷ ಅಕ್ರಮ ಹಣ ವರ್ಗಾವಣೆಯಾಗಿದೆ ಎಂದು ತಿಳಿಸಿದ್ದಾರೆ. 


ಇದನ್ನೂ ಓದಿ- ATM Card Trap Scam: ಏನಿದು ಎಟಿಎಂ ಕಾರ್ಡ್ ಟ್ರ್ಯಾಪ್ ಸ್ಕ್ಯಾಮ್? ಈ ಬಗ್ಗೆ ಇರಲಿ ಎಚ್ಚರ


ಪಂಚಾಯತರಾಜ್ ವಿಭಾಗದಿಂದ 86ಲಕ್ಷ 40ಸಾವಿರ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ 79ಲಕ್ಷ 75 ಸಾವಿರ ಹಣ ವರ್ಗಾವಣೆಯಾಗಿದೆ. ಕಳೆದ 2023-2024ನೇ ಸಾಲಿನಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣಗಳು ಇವಾಗಿವೆ ಎಂದು ಹೇಳಿದ್ದಾರೆ. 


ಅನುದಾನ ಕೋರಿ ಬಂದ ಇಲಾಖೆಯ ಪತ್ರದ ಹೆಡ್ಡಿಂಗ್ ಮತ್ತು ಸಹಿ‌ ತುಂಡರಿಸಿ ಬಿಳಿ ಹಾಳೆ ಮೇಲೆ ಅಂಟಿಸಿ ಹಣ ವರ್ಗಾವಣೆಯಾಗಿದೆ ಎಂದು‌ ತಿಳಿಸಿದ್ದಾರೆ. ಈಗ ಎರಡೂ ಇಲಾಖೆಯಿಂದ ಬಾಗಲಕೋಟೆಯ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ (CEN Crime Police Station) ಪ್ರಕರಣ ದಾಖಲಾಗಿದೆ. 


ಇದನ್ನೂ ಓದಿ- Car Insurance Tips: ರಿಯಾಯಿತಿ ಹೆಸರಿನಲ್ಲಿ ಮೋಸ ಹೋಗದಿರಿ, ಕಾರ್ ವಿಮೆ ಕೊಳ್ಳುವಾಗ ನೆನಪಿರಲಿ ಈ ವಿಷಯ


ಕಳೆದ ಎರಡು‌ ವರ್ಷಗಳಿಂದ ಆ್ಯಕ್ಟೀವ್ ಆಗಿರುವ ಖಾತೆಗಳನ್ನು ಪತ್ತೆ ಮಾಡಿ ಐಡಿಬಿಐ ಬ್ಯಾಂಕ್ ಸಿಬ್ಬಂದಿ ಅಕ್ರಮ‌ ನಡೆಸಿದ್ದಾರೆ. ಈಗಾಗಲೇ ಅಕ್ರಮದಲ್ಲಿ ಭಾಗಿಯಾದ ಬ್ಯಾಂಕ್ ಸಿಬ್ಬಂದಿ ಸೇರಿ ಒಟ್ಟು ಒಂಭತ್ತು‌ ಜನರನ್ನ ಬಂಧಿಸಲಾಗಿದೆ. ಬ್ಯಾಂಕಿನ ಸಿಬ್ಬಂಸಿ ಸೂರಜ ಸಾಗರ್ ಸೇರಿ ಒಂಬತ್ತು‌ ಜನರ ವಿಚಾರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ಲಭ್ಯವಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.