ಬೆಂಗಳೂರು: ದೇವರ ಮೇಲಿಟ್ಟಿರುವ ನಂಬಿಕೆಯನ್ನು‌ ದುರುಪಯೋಗ ಮಾಡಿಕೊಳ್ಳುವಂತಹ ವಂಚಕರು ರಾಜಧಾನಿಯಲ್ಲಿ ದಿನೇ ದಿನೆ ಹೆಚ್ಚಾಗುತ್ತಿದ್ದಾರೆ. ಅದೃಷ್ಟದ ಚೊಂಬು ನೀಡುತ್ತೇವೆ ಎಂದು ವಂಚಿಸುವ ಹಲವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಸದ್ಯ ಇಂತಹದೇ ದೈವದ ಕಲ್ಲು, ಅದೃಷ್ಟದ ‌ಕಲ್ಲು ಎಂದು ಜನರನ್ನು ನಂಬಿಸಿ ಬೆಂಗಳೂರಿನಲ್ಲಿ ಮಾರಾಟ ಮಾಡಲು ಯತ್ನಿಸಿದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.


COMMERCIAL BREAK
SCROLL TO CONTINUE READING

ದೈವದ ಕಲ್ಲು, ಅದೃಷ್ಟದ ಸಾಲಿಗ್ರಾಮದ ಕಲ್ಲು ಎಂದು ನಂಬಿಸಿ ವಂಚಿಸುತ್ತಿದ್ದ ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರ ಮೂಲದ ಮನೋಜ್ ಹಾಗೂ ಆದಿತ್ಯ ಸಾಗರ್ ಎಂದು ಗುರುತಿಸಲಾಗಿದೆ. ಬಂಧಿತರಿಂದ ಸಾಲಿಗ್ರಾಮದ ಎರಡು ಕಲ್ಲುಗಳು ಹಾಗೂ ಕೆಲ ರಾಸಾಯನಿಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 


ಇದನ್ನೂ ಓದಿ- ಮದುವೆಯಾದ ಮೂರೇ ದಿನಕ್ಕೆ ಹೆಂಡತಿ ಬಿಟ್ಟ ಭೂಪ: ಕೇಳಿದ್ರೆ ಮದುವೆಯಲ್ಲ ಶಾರ್ಟ್ ಮೂವಿ ಶೂಟ್ ಅಂತಾನಂತೆ..!


ವಂಚಕರಿಬ್ಬರು ರಾಜಾಜಿನಗರದ ರಾಜ್ ಕುಮಾರ್ ರಸ್ತೆಯಲ್ಲಿರುವ ಖಾಸಗಿ ಹೊಟೇಲ್ ಗೆ ಗಿರಾಕಿಗಳನ್ನು ಕೆರದು ಮಾರಾಟಕ್ಕೆ‌‌ ಮುಂದಾಗಿದ್ದರು. ಗುಜರಾತಿನ ಗೋಮತಿ ನದಿಯಿಂದ ತಂದಿರುವ ಬೆಲೆಬಾಳುವ ಕಲ್ಲುಗಳು, ವಿಷ್ಣುರೂಪದ ಅದೃಷ್ಟಕಲ್ಲು ಇವು ಕೋಟ್ಯಾಂತರ ರೂಪಾಯಿಗೆ ಬೆಲೆಬಾಳಲಿದೆ ಎಂದು ನಂಬಿಸಿ ಎರಡು ಕೋಟಿ ರೂಪಾಯಿಗೆ ಮಾರಾಟ ಮಾಡಲು ಯತ್ನಿಸಿದ್ದರು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಮಹಿಳಾ ಸಂರಕ್ಷಣಾ ತಂಡದ ಎಸಿಪಿ‌ ಶಿವಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದೆ.


ಇದನ್ನೂ ಓದಿ- ಬೇರೆ ಮದುವೆಗೆ ಒಪ್ಪಿಗೆ : ಪ್ರೇಯಸಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದು ಆತ್ಮಹತ್ಯೆಗೆ ಪ್ರೇಮಿ ಯತ್ನ‌.!


ಸಾಲಿಗ್ರಾಮದ ಕಲ್ಲುಗಳನ್ನು ವಿಷ್ಣುರೂಪದ ಪವರ್ ಪುಲ್ ಕಲ್ಲು ಎಂದು ಸಾರ್ವಜನಿಕರನ್ನು ನಂಬಿಸಲು ಕಲ್ಲಿಗೆ ಬಟ್ಟೆ ಹಾಕಿ ಪ್ರತ್ಯೇಕವಾಗಿ ಕರ್ಪೂರ ಹಾಗೂ ಪೆಟ್ರೋಲ್ ಸುರಿದು ಬೆಂಕಿ ಹಚ್ವಿದರೂ ಬಟ್ಟೆ ಸುಡುವುದಿಲ್ಲ ಎಂದು ನಂಬಿಸುತ್ತಿದ್ದರು‌.  ಅಲ್ಲದೆ ಬಟ್ಟೆ ಸುಡದ ಹಾಗೆ ಕೆಮಿಕಲ್ ಬೆರೆಸಿ‌ ದೈವಶಕ್ತಿಯ ಕಲ್ಲೆಂದು ಬಿಂಬಿಸುತ್ತಿದ್ದರು. ಸದ್ಯ ಸಿಸಿಬಿ ತಂಡ ಗ್ರಾಹಕರ‌ ಸೋಗಿನಲ್ಲಿ ತೆರಳಿ ಎರಡು ಕೋಟಿ ನೀಡುವುದಾಗಿ ನಂಬಿಸಿ  ಆರೋಪಿಗಳನ್ನು ಖೆಡ್ಡಾಕ್ಕೆ ಕೆಡವಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.