ಮಗನಿಗೆ ಹುಷಾರಿಲ್ಲ ಅಂತಾ ಹತ್ತಿರವಾಗಿದ್ಲು ಆಂಟಿ: ಬೆತ್ತಲೆ ಫೋಟೋ ಇಟ್ಕೊಂಡು ವೃದ್ಧನ ಹನಿಟ್ರಾಪ್
Honey Trap Case : ಅವರು ಖತರ್ನಾಕ್ ದಂಪತಿ..ವಯೋವೃದ್ಧರನ್ನೆ ಟಾರ್ಗೆಟ್ ಮಾಡ್ತಿದ್ರು. ಮಹಿಳೆ ಇಟ್ಕೊಂಡು ಬಲೆ ಹಣೆದು, ಸನಿಹಕೆ ಬಾ ಅಂತಾ ಮಂಚಕ್ಕೆ ಕರಿತಿದ್ಳು..ಮಾಯಾಂಗನೆ ಮಾತು ನಂಬಿ ಖುಲ್ಲಂ ಖುಲ್ಲಂ ಆಡೋಕೆ ಹೋದ್ರೆ ಕಥೆ ಮುಗೀತು..ಇಂತಹ ಕೃತ್ಯ ಮಾಡ್ತಿದ್ದ ಟೀಂ ಈಗ ಬಲೆಗೆ ಪೊಲೀಸರ ಬಲೆಗೆ ಬಿದ್ದಿದೆ.
ಬೆಂಗಳೂರು: ಅಷ್ಟಕ್ಕೂ ಇಂತಹ ಕೆಲಸ ಮಾಡಿ ಪೊಲೀಸರ ಅತಿಥಿಯಾದವರ ಹೆಸರು ಸ್ನೇಹ ಮತ್ತು ಲೋಕೇಶ್. ಈ ಚಾಲಾಕಿ ದಂಪತಿಗೆ ಗಂಡನನ್ನ ಕಳೆದುಕೊಂಡಿರುವ ರೀನಾ ಅಣ್ಣಮ್ಮ ಎಂಬಾಕೆಯೇ ಅಸ್ತ್ರ. ಆಕೆಯನ್ನೆ ಮುಂದಿಟ್ಟುಕೊಂಡು ಖತರ್ನಾಕ್ ಬಲೆ ಹೆಣಿತಿದ್ರು.ಈ ಮೂವರ ಕಥೆ ಮಾತ್ರ ನಿಜಕ್ಕೂ ವಯೋವೃದ್ಧರು ಬೆಚ್ಚಿ ಬೀಳುವಂತಿದೆ..
ಈ ಮೂವರು ಕೊಡಗು ಮೂಲದವ್ರು..ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಬಂದು ವಾಸವಿದ್ರು. ಲೋಕೇಶ್ ಮತ್ತು ಸ್ನೇಹ ದಂಪತಿ ಮನೆಯಲ್ಲೇ ಈ ರೀನಾ ಅಣ್ಣಮ್ಮ ಉಳಿದುಕೊಂಡಿದ್ಳು.ಆದ್ರೆ ಹನಿಟ್ರಾಪ್ ಮಾಡೋದನ್ನೇ ಫುಲ್ ಟೈಂ ಕೆಲಸ ಮಾಡಿಕೊಂಡಿದ್ರು. ವಯೋವೃದ್ಧರ ಬಳಿ ಬರ್ತಿದ್ದ ರೀನಾ ಅಣ್ಣಮ್ಮ ನನ್ನ ಮಗನಿಗೆ ಹುಷಾರಿಲ್ಲ ಸ್ವಲ್ಪ ಹಣದ ನೆರವು ಕೊಡಿ ಅಂತಾ ನಂಬರ್ ಕೊಟ್ಟು ಬರ್ತಿದ್ಳು. ಸಹಾಯಕ್ಕೆ ಬಂದ ವೃದ್ಧರನ್ನೇ ಬಲೆಗೆ ಕೆಡವ್ತಿದ್ಳು..
ಇದನ್ನೂ ಓದಿ-ಬಿಚ್ಚಿಡುವವರನ್ನು, ಬಿಚ್ಚಾಕುವವರನ್ನು ತಡೆಯಲು ಆಗುವುದಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್
ವಯೋವೃದ್ಧನ ಜೊತೆಗೆ ಆತ್ಮೀಯತೆ ಬೆಳೆಸಿಕೊಂಡು ಲಾಡ್ಜ್ ನಲ್ಲಿ ರೂಂ ಮಾಡಿ ಕರಿತಿದ್ಳು.ಅಲ್ಲಿಗೆ ಬರೋ ವಯೋವೃದ್ಧರನ್ನ ಲೈಂಗಿಕ ಕ್ರಿಯೆಗೆ ಪ್ರಚೋದನೆ ಮಾಡ್ತಿದ್ಳು. ಮಿಕ ಹಳ್ಳಕ್ಕೆ ಬಿದ್ದ ಅಂತಾ ಗೊತ್ತಾಗ್ತಿದ್ದಂತೆ ಎಲ್ಲವನ್ನೂ ಮೊಬೈಲ್ ನಲ್ಲಿ ವಿಡಿಯೋ ಚಿತ್ರೀಕರಣ ಮಾಡಿಕೊಳ್ತಿದ್ಳು.ಆ ವಿಡಿಯೋವನ್ನು ಲೋಕೇಶ್ ಮತ್ತು ಸ್ನೇಹ ದಂಪತಿಗೆ ಕೊಡ್ತಿದ್ಳು..
ಅದೇ ವಿಡಿಯೋ ಇಟ್ಟುಕೊಂಡು ಆರೋಪಿಗಳು ವೃದ್ಧರನ್ನ ವಿಡಿಯೋ ವೈರಲ್ ಮಾಡೋದಾಗಿ ಬೆದರಿಸ್ತಿದ್ರು.ಇಲ್ಲದಿದ್ರೆ ಹಣ ಕೊಡುವಂತೆ ಕೇಳ್ತಿದ್ರು.ಹೀಗೆ ನಿವೃತ್ತ ಸರ್ಕಾರಿ ನೌಕರನಿಂದ 82 ಲಕ್ಷ ಪೆನ್ಷನ್ ಹಣ ಪಡೆದು ಮತ್ತೆ ಮತ್ತೆ ಹಣ ಕೊಡು ಅಂತಾ ಪೀಡಿಸೋಕೆ ಪ್ರಾರಂಭಿಸಿದ್ರು. ಹೀಗಾಗಿ ನೊಂದ ವೃದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸ್ತಿದ್ದಂತೆ ಮೂವರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಅದೇನೆ ಹೇಳಿ ಹೊಟ್ಟೆಪಾಡಿಗಾಗಿ ಮೈ ಬಗ್ಗಿಸಿ ದುಡಿದು ತಿನ್ನೊ ಬದಲು ಅಡ್ಡದಾರಿ ಹಿಡಿದು ದುಡ್ಡು ಮಾಡಲು ಹೋದವರು ಜೈಲು ಸೇರಿದ್ದಾರೆ.ಮತ್ತೊಂದೆಡೆ ಮಾಯಾಂಗನೆ ಮಾತು ನಂಬೊ ಮುನ್ನ ಎಚ್ಚರವಾಗಿದ್ರೆ ಒಳ್ಳೆದು.
ಇದನ್ನೂ ಓದಿ-ನಾನೇನು ಬಿಜೆಪಿ ಅಡಿಯಾಳ: ಕಾಂಗ್ರೆಸ್ ವಿರುದ್ಧ ಎಚ್ಡಿಕೆ ವಾಗ್ದಾಳಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.