ಮಹಾಲಕ್ಷ್ಮಿ ನನಗೆ ಮೋಸ ಮಾಡಿ, ಮೂವರ ಜೊತೆ ಇದ್ದಳು ಅದಕ್ಕೆ ಕೊಂದೆ..! ತಮ್ಮನ ಮುಂದೆ ಹೇಳಿಕೊಂಡಿದ್ದ ಆರೋಪಿ ಮುಕ್ತಿ
Bangalore Murder case : ಮಹಾಲಕ್ಷ್ಮಿನ ಕೊಲೆ ಮಾಡಿದ ಬಳಿಕ ತನ್ನ ತಮ್ಮನ ಬಳಿ ಎಲ್ಲಾ ವಿಚಾರ ಹೇಳಿಕೊಂಡಿದ್ದ ಮುಕ್ತಿ, ನಾನು ಮಹಾಲಕ್ಷ್ಮಿಯನ್ನ ತುಂಬಾನೇ ಪ್ರೀತಿ ಮಾಡುತ್ತಿದ್ದೆ. ಆದರೆ ಮಹಾಲಕ್ಷ್ಮಿ ನನ್ನ ಪ್ರೀತಿಗೆ ಮೋಸ ಮಾಡಿ ಇನ್ನು ಮೂವರೊಂದಿಗೆ ಸಂಪರ್ಕದಲ್ಲಿದ್ದಳು... ಹೆಚ್ಚಿನ ಮಾಹಿತಿ ಇಲ್ಲಿದೆ...
ಬೆಂಗಳೂರು: ವೈಯಾಲಿಕಾವಲ್ ಮಹಾಲಕ್ಷ್ಮಿ ಕೊಲೆ ಆರೋಪಿ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಖಚಿತವಾಗಿದೆ. ಬೆಂಗಳೂರು ಪೊಲೀಸರು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಖಚಿತ ಮಾಹಿತಿ ನೀಡಿದ್ದಾರೆ. ಮಹಾಲಕ್ಷ್ಮಿಕೊಲೆ ಮಾಡಿದ್ದ ಆರೋಪಿ ಬಳಿಕ ತನ್ನ ಸ್ವಂತ ಊರು ಒಡಿಶಾದ ಭದ್ರಕ್ ಜಿಲ್ಲೆಯ ಗ್ರಾವಿಯಾರ್ಡ್ ಗ್ರಾಮಕ್ಕೆ ಎಸ್ಕೇಪ್ ಆಗಿದ್ದ.
ಆದತೆ ಸ್ವಂತ ಊರಿನ ಸ್ಮಶಾನದ ಬಳಿಯ ಮರವೊಂದಕ್ಕೆ ಆತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಶವದ ಪಕ್ಕದಲ್ಲಿ ಸ್ಕೂಟರ್, ಡೈರಿ, ಲ್ಯಾಪ್‌ಟಾಪ್ ಪತ್ತೆಯಾಗಿದ್ದು, ಆತ್ಮಹತ್ಯೆ ಸಂಬಂಧ ಧುಸುರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಪೌರಕಾರ್ಮಿಕರನ್ನು ಅಗೌರವದಿಂದ ಕಾಣುವುದು ಶಿಕ್ಷಾರ್ಹ ಅಪರಾಧ
ಇನ್ನೂ ಆರೋಪಿ ಪೊಲೀಸರು ಬಂಧಿಸುತ್ತಾರೆ ಎಂಬ ಭಯದಲ್ಲೆ ಮುಕ್ತಿ ರಂಜನ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ಒಡಿಶಾದ ಪಂಡಿಬಳಿಯ ಬೂತಕಪುರದಲ್ಲಿ ಮುಕ್ತಿ ನೇಣಿಗೆ ಶರಣಾಗಿದ್ದಾನೆ. ಮಹಾಲಕ್ಷ್ಮಿನ ಕೊಲೆ ಮಾಡಿದ ಬಳಿಕ ತನ್ನ ತಮ್ಮನ ಬಳಿ ಎಲ್ಲಾ ವಿಚಾರ ಹೇಳಿಕೊಂಡಿದ್ದ ಮುಕ್ತಿ, ನಾನು ಮಹಾಲಕ್ಷ್ಮಿಯನ್ನ ತುಂಬಾನೇ ಪ್ರೀತಿ ಮಾಡುತ್ತಿದ್ದೆ. ಆದರೆ ಮಹಾಲಕ್ಷ್ಮಿ ನನ್ನ ಪ್ರೀತಿಗೆ ಮೋಸ ಮಾಡಿ ಇನ್ನು ಮೂವರೊಂದಿಗೆ ಸಂಪರ್ಕದಲ್ಲಿದ್ದಳು.
ಹೀಗಾಗಿ ಅವಳನ್ನ ಕೊಲೆ ಮಾಡಿ ಬಾಡಿನ ತುಂಡುಗಳನ್ನಾಗಿ ಮಾಡಿದ್ದೇನೆ. ನಾನು ಊರಿಗೆ ಹೋಗುತ್ತಿದ್ದೇನೆ ಎಂದಿದ್ದ. ಊರಿಗೆ ಹೋದ ಮಗನ ಬಚ್ಚಿಡುವ ಕೆಲಸ ಆತನ ತಾಯಿಯಿಂದಲೇ ನಡೆದಿದೆಯಂತೆ. ಪಶ್ಚಿಮ ಬಂಗಾಳದಲ್ಲಿ ತಲೆಮರೆಸಿಕೊಳ್ಳೊದಕ್ಕೆ ಮುಕ್ತಿ ತಾಯಿ ವ್ಯವಸ್ಥೆ ಮಾಡಿದ್ದಳಂತೆ. ಆದರೆ ಪೊಲೀಸರು ಮುಕ್ತಿ ರಂಜನ್ ರಾಯ್ ಸೋದರನ ಮೂಲಕ ಟ್ರ್ಯಾಪ್ ಮಾಡುವ ಕೆಲಸ ಮಾಡುತ್ತಿದ್ದರು. ಇನ್ನು ಪೊಲೀಸರಿಗೆ ಸಿಕ್ಕಿ ಬೀಳುವ ಭಯದಲ್ಲ ಒಡಿಸ್ಸಾಗೆ ಮುಕ್ತಿ ರಂಜನ್ ರಾಯ್ ನೇಣಿಗೆ ಶರಣಾಗಿದ್ದಾನೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.