ಬೆಂಗಳೂರು : ಪ್ರೀತಿಸಿದ ಹುಡುಗಿ ಮತ್ತೊಬ್ಬನ ಜೊತೆ ಓಡಾಟ ನಡೆಸಿದ್ಲು ಅಂತ ಕಾಲೇಜ್‌ ಕ್ಯಾಂಪಸ್‌ ಒಳಗೆ ನುಗ್ಗಿ ಪ್ರಿಯತಮೆಯನ್ನು ಚಾಕುವಿನಿಂದ ಚುಚ್ಚಿ ಕೊಲೆಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ ಆರೋಪಿ ಇದೀಗ ಗುಣಮುಖನಾಗಿದ್ದು, ಡಿಸ್ಚಾರ್ಜ್ ಬೆನ್ನಲ್ಲೇ ಆರೋಪಿಯನ್ನ ಬಂಧಿಸಿ ವಿಚಾರಣೆ ನಡೆಸುತ್ತಿರುವ ರಾಜಾನುಕುಂಟೆ ಪೊಲೀಸರಿಗೆ ಆರೋಪಿ ಕೊಟ್ಟ ಹೇಳಿಕೆ ಕೇಳಿ ಶಾಕ್ ಉಂಟುಮಾಡಿದೆ.


COMMERCIAL BREAK
SCROLL TO CONTINUE READING

ಹೌದು... ಕಳೆದ ಕೆಲವು ದಿನಗಳ ಹಿಂದೆ ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಲೇಜಿನ ಕ್ಯಾಂಪಸ್ ಒಳಗೆ ಲಯಸ್ಮಿತ ಎಂಬ ವಿದ್ಯಾರ್ಥಿನಿಯನ್ನು ಪವನ್‌ ಕಲ್ಯಾಣ್‌ ಎಂಬುವವನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಅಲ್ಲದೆ, ತಾನೂ ಆತ್ಮಹತ್ಯೆಗೆ ಯತ್ನಿಸಿದ್ದ. ಕೂಡಲೇ ಪವನ್‌ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹದಿನಾರು ದಿನದ ಬಳಿಕ ಆರೋಪಿ ಪವನ್‌ ಬದುಕುಳಿದಿದ್ದಾನೆ. ಪವನ್‌ಗೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.


ಇದನ್ನೂ ಓದಿ: Ramesh Jarkiholi : ಲಕ್ಷ್ಮೀ ಹೆಬ್ಬಾಳ್ಕರ್ ಮತಕ್ಷೇತ್ರಕ್ಕೆ ಗ್ರ್ಯಾಂಡ್ ಎಂಟ್ರಿ ನೀಡಿದ ರಮೇಶ್ ಜಾರಕಿಹೊಳಿ!


ಡಿಸ್ಚಾರ್ಜ್ ಬೆನ್ನಲ್ಲೇ ಆರೋಪಿಯನ್ನ ಬಂಧಿಸಿ ರಾಜಾನುಕುಂಟೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಆರೋಪಿ ಕೊಟ್ಟ ಹೇಳಿಕೆ ಕೇಳಿಯೇ ಪೊಲೀಸರು ಶಾಕ್ ನೀಡಿದೆ. ಮೂರು ವರ್ಷ ಪ್ರೀತಿ ಮಾಡಿ, ಆಮೇಲೆ ಮತ್ತೊಬ್ಬನ ಜೊತೆ ಓಡಾಡಿದ್ರೆ ಬಿಟ್ಬಿಡಬೇಕಾ ಸರ್ ಎಂದು ಆರೋಪಿ ಪೊಲೀಸರನ್ನೇ ಪ್ರಶ್ನೆ ಮಾಡಿದ್ದಾನೆ. ಅಲ್ಲದೆ, ನಾನು ಮೂರು ವರ್ಷಗಳಿಂದ ಲಯಸ್ಮಿತಳನ್ನ ಲವ್ ಮಾಡ್ತಿದ್ದೆ, ಅವಳೂ ನನ್ನ ಒಪ್ಪಿದ್ಲು. ಇತ್ತೀಚೆಗೆ ಬೇರೆ ಯುವಕನ ಜೊತೆ ಅವಳ ಓಡಾಟ, ಮಾತು ಹೆಚ್ಚಾಗಿತ್ತು.‌ ಇದರಿಂದ ನನ್ನ ಅವೈಡ್ ಮಾಡಿ ಧಿಡೀರ್ ಅಂತ ನಾನ್ ಇಷ್ಟ ಇಲ್ಲ ಅಂತ ಹೇಳ್ತಿದ್ಲು.


ಅದಕ್ಕೆ ನನಗೆ ಸಿಗದ ಪ್ರೀತಿ, ಅವಳು ಯಾರಿಗೂ ಸಿಗ್ಬಾರ್ದು ಅಂತ ನಿರ್ಧಾರ ಮಾಡಿದ್ದೆ. ಅವಳು ಇಲ್ಲದ ಮೇಲೆ ನಾನು ಸಾಯ್ಬೇಕಂತ ಡಿಸೈಡ್ ಮಾಡಿದ್ದೆ. ಅದಕ್ಕಾಗಿ ಮೆಜೆಸ್ಟಿಕ್‌ ಡಿ ಮಾರ್ಟ್ ನಲ್ಲಿ ಹರಿತವಾದ ಚಾಕು ಖರೀದಿಸಿದ್ದೆ. ಅವತ್ತು ಅವಳನ್ನ ಕೊಲ್ಲಬೇಕು ನಾನು ಸಾಯ್ಬೇಕು ಅಂತ ಡಿಸೈಡ್ ಮಾಡಿ ಕಾಲೇಜಿನ ಕ್ಯಾಂಪಸ್ ಬಳಿ ಹೋದೆ. ಎಷ್ಟು ಕರೆದು ಮಾತನಾಡಿಸಿದ್ರೂ ನನ್ನನ್ನು ಕೆಟ್ಟದಾಗಿ ಬೈದಿದ್ಲು..


ಇದನ್ನೂ ಓದಿ:  Prof Bhagavan : ಶ್ರೀರಾಮನ ವಿರುದ್ದ ಮತ್ತೆ ಕಿಡಿಕಾರಿದ ಪ್ರೊ.ಭಗವಾನ್..!


ಅದಕ್ಕಾಗಿಯೇ ನಾನು ಮೊದಲೇ ತಂದಿದ್ದ ಚಾಕುವಿನಿಂದ ಮನಬಂದಂತೆ ಆಕೆಗೆ ಚುಚ್ಚಿದೆ. ಅವಳಿಗಾಗಿ ಎದೆ ಮೇಲೆ ಹಾರ್ಟ್ ಸಿಂಬಲ್ ಹಾಕಿಸಿಕೊಂಡು ಹೆಸರು ಸಹ ಹಚ್ಚೆ ಹಾಕಿಸಿಕೊಂಡಿದ್ದೆ. ಅದೇ ಜಾಗದಲ್ಲಿ ಚುಚ್ಚಿಕೊಂಡು ಸಾಯಲು ಮುಂದಾದೆ ಆದ್ರೆ, ನನ್ನ ಕೈಯಲ್ಲಿ ಸರಿಯಾಗಿ ಚುಚ್ಚಿಕೊಳ್ಳೋಕೆ ಸಾಧ್ಯವಾಗಲಿಲ್ಲ. ಇದೇ ಕಾರಣಕ್ಕೆ ಕೈ ಕೊಯ್ದುಕೊಂಡಿದ್ದೆ ಎಂದು ಆರೋಪಿ ಪವನ್‌ ತನ್ನ ಲವ್‌ ಕಹಾನಿಯನ್ನು ಪೊಲೀಸರ ಮುಂದೆ ಬಿಚ್ಚಿಟ್ಟಿದ್ದಾನೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.