ಬೆಂಗಳೂರು: ನೀವು ಯಾರಾದ್ರೂ ಲೇಡಿಯನ್ನು ಪರಿಚಯ ಮಾಡ್ಕೊಂಡು ಆಕೆಯ ಜೊತೆ ಸಲುಗೆಯಿಂದ ಇದ್ದೀರಾ.. ಹಾಗಾದ್ರೆ ಸ್ವಲ್ಪ ಎಚ್ಚರದಿಂದ ಇರಿ. ಹನಿಟ್ರಾಪ್ ಮಾಡಿ ಹಣ ಕಿತ್ತು ಎಸ್ಕೇಪ್ ಆಗುವ ಚಾನ್ಸ್ ಇರುತ್ತೆ. ಹೀಗೆ ಜನರನ್ನು ಯಾಮಾರಿಸುತ್ತಿದ್ದ ಶಾರ್ಟ್ ಮೂವಿ ಮಾಡುತ್ತಿದ್ದ ಗ್ಯಾಗೊಂದು ಅಂದರ್ ಆಗಿದೆ. ಹಾಗಾದ್ರೆ ಏನಿದು ಸ್ಟೋರಿ ಅಂತೀರಾ.. ನೀವೇ ನೋಡಿ.


COMMERCIAL BREAK
SCROLL TO CONTINUE READING

ಈ ವಿಶುವಲ್ಸ್ ನೋಡಿ.. ಶಾರ್ಟ್ ಮೂವಿ.. ಚೆನಾಗೇ ಇದೆ ಅಲ್ವಾ.. ಇದ್ರಲ್ಲಿರೋ ಹೀರೋ ಹೆಸ್ರು ತಿರುಮಲೇಶ್.. ಈ ಕಿರು ಚಿತ್ರದ ಮೂಲಕ ಒಳ್ಳೆ ಸಂದೇಶದ ಕೊಡೋಕ್ ಟ್ರೈ ಮಾಡಿದ್ದವ ರಿಯಲ್ ಲೈಫ್ ನಲ್ಲಿ ಹಲವರಿಗೆ ವಿಲನ್ ಆಗಿದ್ದಾನೆ.. ಯುವತಿಯೊಬ್ಬಳನ್ನ ಬಳಸಿ ಹನಿಟ್ರಾಪ್ ಮಾಡಿ ಯುವಕರ ಬಳಿ ಹಣ ಸುಲುಗೆ ಮಾಡ್ತಿದ್ದ ಶಾರ್ಟ್ ಮೂವಿ ಹೀರೋ ತಿರುಮಲೇಶ್ ಮತ್ತು ಗ್ಯಾಂಗ್ ಅನ್ನ ಬೇಗೂರು ಪೊಲೀಸರು ಬಂಧಿಸಿದ್ದಾರೆ..


ಇದನ್ನೂ ಓದಿ: Rohini Sindhuri vs D Roopa: ಐಪಿಎಸ್ ಡಿ.ರೂಪ ವಿರುದ್ಧ ಎಫ್ಐಆರ್ ಸಾಧ್ಯತೆ..!?


ಅಂದ್ಹಾಗೆ.. ಈ ಗ್ಯಾಂಗ್ ಮಾಡ್ತಿದ್ದು ಏನು ಅಂತಾ ಹೇಳ್ತೀವಿ ನೋಡಿ.. ಪ್ರಿಯಾ ಅನ್ನೋ ಯುವತಿಯನ್ನ ಚೂ ಬಿಡ್ತಿದ್ದ ತಿರುಮಲ ಯಾರತ್ರ ಹಣ ಇದೆ.. ಹುಡುಗಿಯರ ಶೋಕಿ ಇದೆ ಅಂತ ಯುವಕರನ್ನ ಟಾರ್ಗೆಟ್ ಮಾಡಿ ಪರಿಚಯ ಮಾಡಿಸ್ತಿದ್ದ.. ಯುವತಿ ಯುವಕರ ಬಳಿ ಗೆಳೆತನ ಬಳಸಿ ಬಲೆಗೆ ಬೀಸ್ತಿದ್ಳು.. ಇದೇ ರೀತಿ ಸ್ನೇಹಿತರಾದ ಮಂಜುನಾಥ್ ಮತ್ತು ರಂಜಿತ್ ಎಂಬ ಯುವಕರನ್ನ ಬಲೆಗೆ ಕೆಡವಿದ್ದಾಕೆ ಅವರ ಜೊತೆ ಮಡಿವಾಳ ಬಳಿ ಹೋಗಿದ್ಳು.. ಕಾರು ಕೆಳಗೆ ನಿಲ್ಲಿಸಿ ಬಿಲ್ಡಿಂಗ್ ವೊಂದಕ್ಕೆ ಮಂಜುನಾಥ್ ಜೊತೆ ಹೋಗಿ ಬಂದಿದ್ಳು.. ನಂತರ ರಂಜಿತ್ ಮತ್ತು ಮಂಜುನಾಥ್ ಆಕೆಯನ್ನ ಮನೆಗೆ ಬಿಡೋ ಪ್ಲಾನ್ ಮಾಡಿದ್ರು.. 


ಆದ್ರೆ ಆಕೆಯನ್ನ ಮನೆಗೆ ಬಿಡೋಕೆ ಹೋಗೋವಾಗ ಮೂರು ಬೈಕ್ ನಲ್ಲಿ ಬಂದಿದ್ದಂತಹ ಗ್ಯಾಂಗ್ ಆ್ಯಕ್ಸಿಡೆಂಟ್ ನೆಪದಲ್ಲಿ ಜಗಳ ತೆಗೆದು ಮಂಜುನಾಥ್ ಕಾರಿನಲ್ಲೇ ಪ್ರಿಯಾ, ಮಂಜುನಾಥ್ ಮತ್ತು ರಂಜಿತ್ ನನ್ನ ಕಿಡ್ನಾಪ್ ಮಾಡಿ ನೈಸ್ ರಸ್ತೆ ಕಡೆ ಕರೆದೊಯ್ದು ಅವರ ಬಳಿ ಇದ್ದ ಮೊಬೈಲ್ ಹಣ ಎಲ್ಲವೂ ಕಸಿದುಕೊಂಡಿದ್ರು.. ಈ ವೇಳೆ ಕಾರು ಹ್ಯಾಂಡ್ ಬ್ರೇಕ್ ಹಾಕಿ ಡೋರ್ ತಳ್ಳಿ ಎಸ್ಕೇಪ್ ಆಗಿದ್ದ ಮಂಜುನಾಥ್ ಬೇಗೂರು ಪೊಲೀಸರಿಗೆ ದೂರು ನೀಡಿದ್ದ.. ಅತ್ತ ಪ್ರಿಯಾ ಮತ್ತು ರಂಜಿತ್ ನನ್ನ ಮೈಸೂರಿನ ನಂಜನಗೂಡು ಕಡೆ ಕಿಡ್ನಾಪ್ ಮಾಡಿದ್ದ ಆರೋಪಿಗಳು ಲಕ್ಷಾಂತರ ರೂಪಾಯಿಗೆ ಬೇಡಿಕೆ ಇಟ್ಟಿದ್ರು‌‌.. ಅತ್ತ ಮಂಜುನಾಥ್ ದೂರು ನೀಡಿದ್ದೇ ತಡ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದ ಬೇಗೂರು ಪೊಲೀಸರು ತಿರುಮಲೇಶ್, ಯುವತಿ ಪ್ರಿಯ ಮತ್ತು ಗ್ಯಾಂಗ್ ಸೇರಿ ಎಂಟು ಜನರನ್ನ ಬಂಧಿಸಿದ್ದಾರೆ.. 


ಇದನ್ನೂ ಓದಿ:  ಮಂಡ್ಯ ಉಸ್ತುವಾರಿ ಸಚಿವರು ಚಿರತೆ ಹಿಡಿಯೋಕೆ ಹೋಗ್ತಾರಾ..?


ಇನ್ನು ನಂಜನಗೂಡು ಬಳಿ ಆರೋಪಗಳನ್ನ ಟ್ರ್ಯಾಕ್ ಮಾಡಿ ಅರೆಸ್ಟ್ ಮಾಡಿದಾಗ ಈ ಗ್ಯಾಂಗ್ ನ ಕೆಲಸ ಗೊತ್ತಾಗಿದೆ.. ಈ ಹಿಂದೆ ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಎರಡು ಮೂರು ಠಾಣಾ ವ್ಯಾಪ್ತಿಯಲ್ಲಿ ಆರೋಪಗಳು ಇದೇ ರೀತಿ ಹಲವರ ಬಳಿ ಸುಲುಗೆ ಮಾಡಿದ್ರು ಅನ್ನೋದು ಗೊತ್ತಾಗಿದೆ.. ಸದ್ಯ ಹನಿಟ್ರಾಪ್ ಮಾಡಿ ಸುಲುಗೆ ಮಾಡ್ತಿದ್ದ ಈ ಗ್ಯಾಂಗ್ ಅನ್ನ ಬಂಧಿಸಿರೋ ಬೇಗೂರು ಪೊಲೀಸರು ಹೆಚ್ಚಿನ ತನಿಖೆ ನಡೆಸ್ತಿದ್ದಾರೆ..https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.