ಬೆಂಗಳೂರು: ಬ್ಯಾಂಕ್ ಸಾಲದಲ್ಲಿ ವಂಚನೆ ಮಾಡಿರುವ ಪ್ರಕರಣ ಸಂಬಂಧ SLN CNC ಟೆಕ್ ಮತ್ತು ಕೆನರಾ ಬ್ಯಾಂಕ್ ವಿರುದ್ಧ ತನಿಖೆ ಚುರುಕುಗೊಂಡಿದೆ. ಪ್ರಕರಣ ಸಂಬಂಧ ಕೆನರಾ ಬ್ಯಾಂಕ್ ಎಜಿಎಂ ಆಗಿರುವ ರಮೇಶ್ ಟಿ, SLN CNC ಟೆಕ್ ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಅಶೋಕ್ ಎಂವಿ ಮತ್ತು ಇತರ ನಿರ್ದೇಶಕರು, ಕೆನರಾ ಬ್ಯಾಂಕ್ ಪ್ರಬಂಧಕರ ವಿರುದ್ಧ ವಿರುದ್ಧ ಕೆಎಎಲ್ ಇಂಜಿನಿಯರಿಂಗ್ ಮಾಲೀಕರಾದ ಮೇಘನಾ ಎಂಬವರು ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.   


COMMERCIAL BREAK
SCROLL TO CONTINUE READING

ಈ ದೂರಿನ ಪ್ರಕಾರ ಕೆಸಿಎನ್ ಗೌಡ ಅವರು ಕೆಎಎಲ್ ಇಂಜಿನಿಯರಿಂಗ್‌ನ ಲೆಕ್ಕ ಪರಿಶೋಧಕರಾಗಿದ್ದರು ಮತ್ತು ಅಶೋಕ್ ಎಂವಿ ಎಂಬವರು ಲೆಕ್ಕ ಪರಿಶೋಧನಾ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. 2019ರಲ್ಲಿ ಮೇಘನಾ ತನ್ನ ಪತಿಯೊಂದಿಗೆ ಕೆಎಎಲ್ ಎಂಜಿನಿಯರಿಂಗ್‌ನ ವ್ಯವಹಾರಗಳನ್ನು ವಿಸ್ತರಿಸುವ ಬಯಕೆಯನ್ನು ವ್ಯಕ್ತಪಡಿಸಿದರು. ಅದರಂತೆ ಕೆಸಿಎನ್ ಗೌಡ ಮತ್ತು ಅಶೋಕ್ ಎಂವಿ ಅವರು ಕೆನರಾ ಬ್ಯಾಂಕ್‌ನ MSME ಪೀಣ್ಯ ಶಾಖೆಯಲ್ಲಿ ಅತ್ಯಂತ ಕಡಿಮೆ ಬಡ್ಡಿದರದಲ್ಲಿ ಸಾಲ ಲಭ್ಯವಿದೆ ಎಂದು ತಿಳಿಸಿ, ಬ್ಯಾಂಕ್ ಅಧಿಕಾರಿಗಳನ್ನು ಪರಿಚಯಿಸಿದ್ದರು.


ಇದನ್ನೂ ಓದಿ: ಪಂಚಾಯ್ತಿ ಹಾಗೂ ಜೆಡಿಎಸ್‌ ಕಾರ್ಯಕರ್ತರ ನಡುವೆ ಫ್ಲೆಕ್ಸ್‌ ಗಲಾಟೆ!


ಅದರಂತೆ ಕೆನರಾ ಬ್ಯಾಂಕಿನ ಅಧಿಕಾರಿಗಳು ವಿವಿಧ ಅರ್ಜಿಗಳ ಮೇಲೆ ಮೇಘನಾ ಮತ್ತು ಅವರ ಪತಿಯ ಸಹಿ ಪಡೆಲಾಗಿತ್ತು. 2019ರ ನವೆಂಬರ್‌ 12ರಂದು ಮೇಘನಾ ಮತ್ತು ಅವರ ಪತಿ ಸಾಲಕ್ಕೆ ತಮ್ಮ ಆಸ್ತಿಯ ಶೀರ್ಷಿಕೆ ಪತ್ರಗಳನ್ನು ಅಡಮಾನವಿಟ್ಟಿದ್ದರು. ಬಳಿಕ 2019ರ ಡಿಸೆಂಬರ್‌ 12ರಂದು 95 ಲಕ್ಷ ರೂ. ಸಾಲವನ್ನು ಬಿಡುಗಡೆ ಮಾಡಲಾಗಿತ್ತು. 1.5 ಕೋಟಿ ರೂ.ಗೆ ಓವರ್ ಡ್ರಾಫ್ಟ್ ಖಾತೆಯನ್ನು ಅನುಮೋದಿಸಲಾಯಿತು. ನಂತರ 2020ರ ಜೂನ್‌ 11ರಂದು ಜಿಇಸಿಎಲ್ ಸಾಲಕ್ಕಾಗಿ 49 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಯಿತು.


ಮೇಘನಾ ಮತ್ತು ಅವರ ಪತಿ ಕೆನರಾ ಬ್ಯಾಂಕ್ ಅಧಿಕಾರಿಗಳಿಗೆ 95 ಲಕ್ಷ ರೂ.ವನ್ನು ಬಿಡುಗಡೆ ಮಾಡುವಂತೆ ಹಲವಾರು ಬಾರಿ ಮನವಿ ಮಾಡಿದರೂ ಬ್ಯಾಂಕ್ ಅಧಿಕಾರಿಗಳು ಮೊತ್ತವನ್ನು ಬಿಡುಗಡೆ ಮಾಡಿಲ್ಲ. ನಂತರ ಕೋವಿಡ್-19 ಕಾರಣದಿಂದ ರಾಷ್ಟ್ರವ್ಯಾಪಿ ಲಾಕ್‌ಡೌನ್ ಎದುರಾದ ಪರಿಣಾಮ, ಅವರು ಕೆನರಾ ಬ್ಯಾಂಕ್ ಅನುಮತಿಸಿದ ಮತ್ತು ಬಿಡುಗಡೆ ಮಾಡಿದ ಯಾವುದೇ ಸಾಲವನ್ನು ಬಳಸಲಿಲ್ಲ. ಒಟ್ಟು 2.49 ಕೋಟಿ ರೂ.ಗಳನ್ನು ಮೇಘನಾ ಮತ್ತು ಅವರ ಪತಿಗೆ ಒದಗಿಸಲು ಕೆನರಾ ಬ್ಯಾಂಕ್ ಅನುಮತಿಸಿತ್ತು.


ಇದನ್ನೂ ಓದಿ: ಕೇಂದ್ರದ ತೆರಿಗೆ ಹಣದ ವಿಚಾರವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ಜಟಾಪಟಿ!


ಹೀಗಿದ್ದಾಗ 2023ರ ಜುಲೈ 19ರಂದು ಮೇಘನಾ ಮತ್ತು ಅವರ ಪತಿಗೆ ಅನಿರೀಕ್ಷಿತ ಆಘಾತ ಎದುರಾಗುವಂತೆ, ಕೆನರಾ ಬ್ಯಾಂಕಿನಿಂದ ಸಾಲದ ಮೊತ್ತವನ್ನು ಮರುಪಾವತಿಸಲು ನೋಟಿಸ್ ನೀಡಲಾಯಿತು. ಮೇಘನಾ ಮತ್ತು ಅವರ ಪತಿ ಈ ಕುರಿತು ವಿಚಾರಿಸಿದಾಗ, ಒಂದು ವೇಳೆ ಅವರು ಸಾಲದ ಮೊತ್ತವನ್ನು ಮರುಪಾವತಿ ಮಾಡದಿದ್ದರೆ, ಸಾಲವನ್ನು NPA ಎಂದು ವರ್ಗೀಕರಿಸಲಾಗುತ್ತದೆ ಎಂದು ಬ್ಯಾಂಕ್ ತಿಳಿಸಿತು.
ಈ ಬೆಳವಣಿಗೆಯಿಂದ ಆಘಾತಗೊಂಡಿದ್ದ ಮೇಘನಾ ಮತ್ತು ಅವರ ಪತಿ ಸಾಲದ ಬಗ್ಗೆ ವಿಚಾರಿಸಿದಾಗ, ಸಂಪೂರ್ಣ ಮೊತ್ತವನ್ನು SLN CNC ಟೆಕ್ ಪ್ರೈವೇಟ್ ಲಿಮಿಟೆಡ್, ಅಶೋಕ್ ಎಂವಿ ಮತ್ತು ಲಕ್ಷ್ಮಿ ಇಂಡಸ್ಟ್ರೀಸ್ ಖಾತೆಗಳಿಗೆ ವರ್ಗಾಯಿಸಲಾಗಿದೆ ಎಂಬುದು ತಿಳಿದುಬಂದಿತ್ತು.


SLN CNC ಟೆಕ್ ಪ್ರೈವೇಟ್ ಲಿಮಿಟೆಡ್‌ನ ಅಕೌಂಟೆಂಟ್ ಮತ್ತು ನಿರ್ದೇಶಕರು ಸೇರಿ ಮೇಘನಾ ಅವರ ಸಂಪೂರ್ಣ ಸಾಲದ ಮೊತ್ತವನ್ನು ಕಬಳಿಸಿದ್ದಾರೆ ಮತ್ತು ಕೆನರಾ ಬ್ಯಾಂಕ್ ಅಧಿಕಾರಿಗಳೊಂದಿಗೆ ಶಾಮೀಲಾಗಿದ್ದಾರೆ. ಈ ವಂಚನೆಗೆ ಮೇಘನಾ ಮತ್ತು ಅವರ ಪತಿಯ ಸಹಿಯನ್ನು ನಕಲಿ ಮಾಡಿದ್ದಾರೆ. ವಿವಿಧ ದಾಖಲೆಗಳನ್ನು ಸೃಷ್ಟಿಸಿ, ಮೇಘನಾ ಮತ್ತು ಅವರ ಪತಿ ಪ್ರಸನ್ನರನ್ನು ವಂಚಿಸಿದ್ದಾರೆ. ಅಕ್ರಮ ಎಸಗಿ ಅವರಿಗೆ ಬೃಹತ್ ಪ್ರಮಾಣದ ನಷ್ಟ ತಲೆದೋರುವಂತೆ ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು.


ಅಶೋಕ್ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಫೆಬ್ರವರಿ 12ರವರೆಗೆ ಅವರನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ. ಅಶೋಕ್ ಮತ್ತು ಅವರ ಕುಟುಂಬವು ನಿರ್ದಿಷ್ಟ ಪ್ರಮಾಣದ ಬಂಡವಾಳವನ್ನು ಹೂಡಿಕೆ ಮಾಡಿ, ಹಲವಾರು ಕಂಪನಿಗಳಲ್ಲಿ ನಿರ್ದೇಶಕರ ಸ್ಥಾನಗಳನ್ನು ಪಡೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಪೊಲೀಸ್ ತನಿಖೆ ಮುಂದುವರಿದಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.