Bank Manager : ಡೇಟಿಂಗ್ ಆ್ಯಪ್ನಲ್ಲಿ ಬ್ಯಾಂಕ್ ಮ್ಯಾನೇಜರ್ ಗೆ 6 ಕೋಟಿ ಪಂಗನಾಮ ಹಾಕಿದ ಯುವತಿ!
ಡೇಟಿಂಗ್ ಆ್ಯಪ್ನಲ್ಲಿ ಬ್ಯಾಂಕ್ ಮ್ಯಾನೇಜರ್ನನ್ನು ಪರಿಚಯಿಸಿಕೊಂಡ ಯುವತಿಯೊಬ್ಬಳು ಸಲುಗೆ ಬೆಳೆಸಿಕೊಂಡು 6 ಕೋಟಿ ರೂಪಾಯಿ ಖಾತೆಗೆ ಹಾಕಿಸಿಕೊಂಡು ಮಕ್ಮಲ್ ಟೋಪಿ ಹಾಕಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಬೆಂಗಳೂರು : ಡೇಟಿಂಗ್ ಆ್ಯಪ್ನಲ್ಲಿ ಬ್ಯಾಂಕ್ ಮ್ಯಾನೇಜರ್ನನ್ನು ಪರಿಚಯಿಸಿಕೊಂಡ ಯುವತಿಯೊಬ್ಬಳು ಸಲುಗೆ ಬೆಳೆಸಿಕೊಂಡು 6 ಕೋಟಿ ರೂಪಾಯಿ ಖಾತೆಗೆ ಹಾಕಿಸಿಕೊಂಡು ಮಕ್ಮಲ್ ಟೋಪಿ ಹಾಕಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಹನುಮಂತ ನಗರದ ಇಂಡಿಯನ್ ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತಿದ್ದ ಮ್ಯಾನೇಜರ್ ಹರಿಶಂಕರ್ ಹಣ ಕಳೆದುಕೊಂಡಿರುವ ವ್ಯಕ್ತಿ. ಮದುವೆಯಾಗಿ ಮಕ್ಕಳಿದ್ರೂ ಡೇಟಿಂಗ್ ಆ್ಯಪ್ ಬಳಸುತ್ತಿದ್ದ. ಅನಿತಾ ಎಂಬ ಠೇವಣಿದಾರರ ಎಫ್ಡಿ ಖಾತೆಯ ಮೇಲೆ ಸರಿಸುಮಾರು 6 ಕೋಟಿಯಷ್ಟು ಲೋನ್ ಮಾಡಿ ಇದೀಗ ಹನುಮಂತನಗರ ಪೊಲೀಸರ ಅತಿಥಿಯಾಗಿದ್ದಾನೆ. ಹರಿಶಂಕರ್ ಕೆಲ ತಿಂಗಳ ಹಿಂದೆ ಡೇಟಿಂಗ್ ಆ್ಯಪ್ ಇನ್ಸ್ಟಾಲ್ ಮಾಡಿಕೊಂಡಿದ್ದ. ಈ ವೇಳೆ ಯುವತಿಯ ಪರಿಚಯವಾಗಿತ್ತು. ಯುವತಿ ಸಹ ಮಸಾಲ ವಿಡಿಯೋಗಳನ್ನು ಹರಿಶಂಕರನ ಮೊಬೈಲ್ಗೆ ಕಳುಹಿಸುತ್ತಿದ್ದಳು. ಚೆಂದದ ಯುವತಿಯ ವಿಡಿಯೋ ನೋಡಿ ತನ್ನ ಬಳಿಯಿದ್ದ 12 ಲಕ್ಷ ಹಣವನ್ನ ಯುವತಿಯ ಅಕೌಂಟ್ಗೆ ಕಳುಹಿಸಿದ್ದ.
ಇದನ್ನೂ ಓದಿ : ಸಿಸಿಬಿ ಪೊಲೀಸರ ಕಾರ್ಯಾಚರಣೆ : ಇಬ್ಬರು ನೈಜೀರಿಯಾ ಡ್ರಗ್ ಪೆಡ್ಲರ್ಸ್ ಅಂದರ್
ಯುವತಿ ನನಗೆ ಇನ್ನೂ ಹಣಬೇಕು. ನಿನಗೆ ಅದೆಷ್ಟು ಪ್ರೀತಿಬೇಕು ಕೇಳು ಎಂದಿದ್ದಳು. ಈ ಕಡೇ ಯುವತಿಯ ನಶೆಯಲ್ಲಿದ್ದ ಹರಿಶಂಕರ್ ತಾನು ಕೆಲಸ ಮಾಡುತ್ತುದ್ದ ಇಂಡಿಯನ್ ಬ್ಯಾಂಕ್ನ ಠೇವಣಿದಾರರಾದ ಅನಿತಾ ಎಂಬುವವರ ಎಫ್ಡಿ ಅಕೌಂಟ್ ಮೇಲೆ ಆರು ಕೋಟಿಯಷ್ಟು ಸಾಲ ಮಾಡಿದ್ದಾನೆ. ಆ 6 ಕೋಟಿಯನ್ನ ಡೇಟಿಂಗ್ ಆ್ಯಪ್ ಸುಂದರಿಗೆ ನೀಡಿದ್ದಾನೆ. ಯುವತಿಯ ಬಣ್ಣದ ಮಾತಿಗೆ ಮರುಳಾಗಿ ಕೋಟಿ ಕೋಟಿ ಹಣ ಸುರಿದು ಈಗ ಹನುಮಂತನಗರ ಪೊಲೀಸರ ಅತಿಥಿಯಾಗಿದ್ದಾನೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.