ಸಂಘಟನೆ ಹೆಸರಲ್ಲಿ ಸಹಾಯಕ್ಕೆ ಬರ್ತಾರೆ; ಲಕ್ಷ ಲಕ್ಷ ವಸೂಲಿ ಮಾಡ್ತಾರೆ ಹುಷಾರ್..!
ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದ ಪ್ರಕಾಶನ ಹಿಂಸೆ ತಾಳಲಾರದೇ ಪ್ರತಿಭಾ ತಾಯಿ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಬೆಂಗಳೂರು: ನೊಂದ ಮಹಿಳೆಗೆ ಸಹಾಯ ಮಾಡಿದ್ದ ಸಂಘಟನೆ ಅಧ್ಯಕ್ಷ ಇಂದು ಅದೇ ಮಹಿಳೆಗೆ ಹಣಕ್ಕಾಗಿ ಕಿರುಕುಳ ನೀಡಿ ಜೈಲು ಸೇರಿದ್ದಾನೆ. ಹಣಕ್ಕಾಗಿ ದಿಕ್ಕಿಲ್ಲದ ಮಹಿಳೆಗೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ಪ್ರಕಾಶ್ ಮೂರ್ತಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಭಾರತೀಯ ಮಾನವ ಹಕ್ಕುಗಳ ರಕ್ಷಣಾ ಸಮಿತಿಯ ಅಧ್ಯಕ್ಷ ಎಂದು ಬಿಂಬಿಸಿಕೊಂಡಿದ್ದ.
ಮಾನವ ಹಕ್ಕುಗಳ ರಕ್ಷಣೆ ಮಾಡುತ್ತೇನೆ ಎಂದು ಅಮಾಯಕರಿಗೆ ಸಹಾಯ ಮಾಡುವ ನೆಪದಲ್ಲಿ ಸುಲಿಗೆ ಮಾಡುತ್ತಿದ್ದ. ಗಂಡ ತುಂಬಾ ಕಿರುಕುಳ ನೀಡುತ್ತಿದ್ದಾನೆ ಎಂದು ಪ್ರತಿಭಾ ಎಂಬಾಕೆ ಬೆಳ್ಳಂದೂರು ಪೊಲೀಸ್ ಠಾಣೆ ಮೆಟ್ಟಿಲೇರಿದ್ರು. ಪೊಲೀಸರು ಗಂಡ-ಹೆಂಡತಿ ಜಗಳ ಎಂದು ಬುದ್ದಿವಾದ ಹೇಳಿ ಕಳುಹಿಸಿದ್ದರು. ಇಷ್ಟಾದ್ರೂ ಸುಮ್ಮನಿರದ ಪ್ರತಿಭಾ ಪತಿ ಜನರ್ಧಾನ ಆಸ್ತಿಗಾಗಿ ಆಕೆಗೆ ಇನ್ನಿಲ್ಲದ ಹಿಂಸೆ ನೀಡಿತ್ತಿದ್ದ. ಆದರೆ ಪೊಲೀಸರು ಮಾತ್ರ ಎಫ್‍ಐಆರ್ ದಾಖಲಿಸಿರಲಿಲ್ಲ. ಇದರಿಂದ ನೊಂದಿದ್ದ ಪ್ರತಿಭಾಗೆ ಸಂಘಟನೆ ಹೆಸರಲ್ಲಿ ಪಕ್ಕದ ಮನೆ ರಾಣಿ ಮೂಲಕ ಪ್ರಕಾಶ್ ಮೂರ್ತಿ ಪರಿಚಯವಾಗಿದ್ದ.
ಇದನ್ನೂ ಓದಿ: ಶಂಕಿತ ಉಗ್ರರ ಬಂಧನದಿಂದ ದೊಡ್ಡ ಅನಾಹುತ ತಪ್ಪಿದೆ : ಎಡಿಜಿಪಿ ಅಲೋಕ್ ಕುಮಾರ್
ತಾನೊಬ್ಬ ಮಹಾನ್ ಹೋರಾಟಗಾರನೆಂದು ಪರಿಚಯಿಸಿಕೊಂಡಿದ್ದ ಪ್ರಕಾಶ್, ನಿನೊಬ್ಬಳೇ ಸ್ಟೇಷನ್‍ಗೆ ಹೋದ್ರೆ ಏನು ಆಗಲ್ಲ.. ನಾಳೆ ನನ್ನೊಂದಿಗೆ ಬಾ ಅಂತಾ ಕರೆದುಕೊಂಡು ಸೀದಾ ಕಮಿಷನರ್ ಕಚೇರಿ ಬಾಗಿಲು ತಟ್ಟಿದ್ದ. ಕಮಿಷನರ್ ಹೇಳಿದ್ದಕ್ಕೋ ಏನೋ ಬೆಳ್ಳಂದೂರು ಪೊಲೀಸರು ಪ್ರತಿಭಾ ಗಂಡನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ಜನಾರ್ಧನ್ ಬಂಧಿಸಿ ಜೈಲಿಗೆ ಕಳಿಸಿದ್ದರು. ಅಷ್ಟೇ ಅಲ್ಲದೇ ಜನರ್ದಾನ್‍ಗೆ ಅತ್ತೆ ಕೊಡಿಸಿದ್ದ ಕಾರು, ಆಭರಣಗಳನ್ನು ಪ್ರತಿಭಾಗೆ ಪ್ರಕಾಶ್ ವಾಪಸ್ ಕೊಡಿಸಿದ್ದ.
ಪ್ರತಿಭಾ ಗಂಡ ಜೈಲಿಗೆ ಹೋಗುತ್ತಿದ್ದಂತೆ ಪ್ರಕಾಶನ ಅಸಲಿ ಮುಖ ಪ್ರದರ್ಶನವಾಗಿತ್ತು. ನಿನ್ನ ಕೇಸ್ ದಾಖಲಿಸಲು ಹಾಗೂ ನಿನ್ನ ಗಂಡನ ವಿರುದ್ಧ ಕ್ರಮ ಕೈಗೊಳ್ಳಲು ಸಹಾಯ ಮಾಡಿದ್ದು ನಾನು. ಹೀಗಾಗಿ ನನಗೆ 5 ಲಕ್ಷ ರೂ. ಹಣ ನೀಡುವಂತೆ ಪ್ರಕಾಶ್ ಒತ್ತಾಯಿಸಿದ್ದ. ಇದಕ್ಕೆ ಪ್ರತಿಯಾಗಿ ಹಾಗೋಹೀಗೋ ಮಾಡಿ ಪ್ರತಿಭಾ ತಾಯಿ ಸುಮಾರು 1.75 ಲಕ್ಷ ರೂ. ಹಣ ಹೊಂದಿಸಿ ಕೊಟ್ಟಿದ್ರು. ಇಷ್ಟಕ್ಕೆ ಸುಮ್ಮನಾಗದ ಪ್ರಕಾಶ್ ಹಣ ನೀಡದಿದ್ರೆ ನಿನ್ನ ಗಂಡನ ಪರ ನಿಂತು ನಿಮ್ಮ ಮೇಲೆ ಕೇಸ್ ಹಾಕಿಸೋದಾಗಿ ಬೆದರಿಕೆ ಹಾಕಿದ್ದ.
ಇದನ್ನೂ ಓದಿ: Be Careful: ಪರಿಚಯಸ್ಥರು & ಬ್ರೋಕರ್‌ಗಳಿಗೆ ಪ್ರಾಪರ್ಟಿ ಪತ್ರ ಕೊಡುವವರೇ ಎಚ್ಚರ ಎಚ್ಚರ!
ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದ ಪ್ರಕಾಶನ ಹಿಂಸೆ ತಾಳಲಾರದೇ ಪ್ರತಿಭಾ ತಾಯಿ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಪ್ರಕಾಶ್‍ನನ್ನು ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.