ಬೆಂಗಳೂರು: ಖರ್ಚಿಗೆ ಹಣವಿಲ್ಲ ಅಂತಾ ಮೊಬೈಲ್ ಶಾಪ್ ದೋಚಿದ್ದ ಯುವಕರನ್ನು ಸಂಜಯನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಪ್ರಭು (21), ಮೌಲೇಶ್ (19) ಹಾಗೂ ಅಜಯ್ (21) ಬಂಧಿತ ಆರೋಪಿಗಳು. ಬಂಧಿತರಿಂದ ಬರೋಬ್ಬರಿ 50 ಲಕ್ಷ ರೂ. ಮೌಲ್ಯದ ವಿವಿಧ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ ವಶಕ್ಕೆ ಪಡೆದುಕೊಳ್ಳಲಾಗಿದೆ.


COMMERCIAL BREAK
SCROLL TO CONTINUE READING

ಎಚ್ಎಸ್ಆರ್ ಲೇಔಟ್'ನ ನಿವಾಸಿಗಳಾಗಿರುವ ಆರೋಪಿಗಳು ಖಾಸಗಿ ಕಾಲೇಜಿನಲ್ಲಿ ಬಿಸಿಎ ವ್ಯಾಸಾಂಗ ಮಾಡುತ್ತಿದ್ದರು. ಆರೋಪಿಗಳ ಪೈಕಿ ಪ್ರಭು, ಇತ್ತೀಚಿಗೆ ನ್ಯೂ ಬಿಇಎಲ್ ರಸ್ತೆಯಲ್ಲಿರುವ ಗ್ಯಾಜೆಟ್ಸ್ ಕ್ಲಬ್ ಮೊಬೈಲ್ ಅಂಗಡಿಯಲ್ಲಿ ಮೊಬೈಲ್ ಖರೀದಿಸಿದ್ದ. ಅದೇ ಸಂದರ್ಭದಲ್ಲಿ ಅಂಗಡಿಯಲ್ಲಿರುವ ವಸ್ತುಗಳನ್ನ ಗಮನಿಸಿದ್ದ.


ಇದನ್ನೂ ಓದಿ: ಚಕ್ರವರ್ತಿ ಚಂದ್ರಚೂಡ್‌ ಕಾಲೆಳೆದ ಕಿಚ್ಚ ಸುದೀಪ್‌


ಇತ್ತ ಮನೆಯಲ್ಲಿ ಖರ್ಚಿಗೆ ಹಣ ಕೊಡುವುದಿಲ್ಲವೆಂದು ಬೇಸತ್ತಿದ್ದ ಮೂರೂ ಜನ ಕಳ್ಳತನಕ್ಕೆಂದು ಸಂಚು ರೂಪಿಸಿದ್ದರು. ಅದಕ್ಕೆಂದೇ ಬೇಕಾದ ಸಲಕರಣೆಗಳನ್ನು ಆರೋಪಿ ಪ್ರಭು ಆನ್‌ಲೈನ್‌ನಲ್ಲಿ ಬುಕ್ ಮಾಡಿ ತರಿಸಿಕೊಂಡಿದ್ದ. ಸೆಪ್ಟೆಂಬರ್ 28ರಂದು ರಾತ್ರಿ ಅಂಗಡಿಯ ಬೀಗ ಮುರಿದು ಅಂಗಡಿಯಲ್ಲಿದ್ದ ಮೊಬೈಲ್ ಫೋನ್ಸ್, ಸ್ಮಾರ್ಟ್‍ವಾಚ್, ಕ್ಯಾಮೆರಾಗಳನ್ನು ಕದ್ದು ಪರಾರಿಯಾಗಿದ್ದರು.


ಅಂಗಡಿ ಮಾಲೀಕನ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಸಂಜಯನಗರ ಠಾಣಾ ಪೊಲೀಸರ ವಿಶೇಷ ತಂಡ ಕೃತ್ಯ ನಡೆದ 36 ಗಂಟೆಗಳೊಳಗೆ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 29 ಐಫೋನ್, 3 ಒನ್‍ಪ್ಲಸ್, 11 ಸ್ಯಾಮ್‌ಸಂಗ್‌, 3 ಗೂಗಲ್‌ ಫೋನ್, 4 ಒಪ್ಪೋ, 2 ಐಕ್ಯೂ ಫೋನ್‌ಗಳು, ವಿವಿಧ ಕಂಪನಿಯ ಲ್ಯಾಪ್‌ಟಾಪ್‌ಗಳು, ಕ್ಯಾಮೆರಾಗಳು, ಸ್ಮಾರ್ಟ್ ವಾಚ್ ಮತ್ತಿತರ 50 ಲಕ್ಷ ರೂ. ಮೌಲ್ಯದ ಗ್ಯಾಜೆಟ್ಸ್ ವಶಕ್ಕೆ ಪಡೆದುಕೊಂಡಿದ್ದಾರೆ.


ಇದನ್ನೂ ಓದಿ: ಚಂದ್ರಚೂಡ್‌ಗೆ ವಸಿಷ್ಠ ಸಿಂಹ ಹೀಗೆಲ್ಲಾ ಕರಿತಾರಂತೆ!!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.