ಬೆಂಗಳೂರು: ನಕಲಿ ಕೀ ಬಳಸಿ ಸಂಬಂಧಿಕರ ಮನೆಯಲ್ಲೇ ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ ಮಾಡಿದ್ದ ಆರೋಪಿಯನ್ನು ತಿಲಕ್ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ರಫೀಕ್ (35) ಬಂಧಿತ ಆರೋಪಿಯಾಗಿದ್ದಾನೆ.‌ ಬಂಧಿತನಿಂದ 1.10 ಕೋಟಿ ರೂ. ಮೌಲ್ಯದ 1.8 ಕೆಜಿ ಚಿನ್ನಾಭರಣ ಹಾಗೂ 74 ಸಾವಿರ ರೂ. ಹಣ ವಶಕ್ಕೆ ಪಡೆಯಲಾಗಿದೆ.


COMMERCIAL BREAK
SCROLL TO CONTINUE READING

ಷಹನವಾಜ್ ಎಂಬುವವರು ಗುಜರಿ ವ್ಯಾಪಾರಿಯಾಗಿದ್ದು, ತಿಲಕ್ ನಗರದ ಎಸ್.ಆರ್.ಕೆ ಗಾರ್ಡನ್‌ನಲ್ಲಿ ಕುಟುಂಬದೊಂದಿಗೆ ವಾಸವಿದ್ದರು. ಷಹನವಾಜ್ ಕುಟುಂಬಕ್ಕೆ ಸಂಬಂಧಿಯಾಗಿದ್ದ ಮೊಹಮ್ಮದ್ ರಫೀಕ್‍ಗೆ ಆರಂಭದಿಂದಲೂ ಅವರ ಐಷಾರಾಮಿ ಜೀವನಶೈಲಿ ಕಂಡು ಅಸೂಯೆ ಇತ್ತು. ಆಗಾಗ ಷಹನವಾಜ್ ಮನೆಗೆ ಹೋಗುತ್ತಿದ್ದ ರಫೀಕ್ ಮನೆಯ ಕೀ ಅಚ್ಚು ಪಡೆದುಕೊಂಡು‌ ಅದರ ನಕಲಿ ಕೀ ಸಿದ್ಧಪಡಿಸಿಕೊಂಡಿದ್ದ. ಇತ್ತೀಚೆಗೆ ಷಹನವಾಜ್ ಮನೆಯಲ್ಲಿ ಮದುವೆ ತಯಾರಿ ನಡೆಯುತ್ತಿದ್ದರಿಂದ ಚಿನ್ನಾಭರಣ ಹಾಗೂ ಹಣ ತಂದಿಡಲಾಗಿತ್ತು.


ಇದನ್ನೂ ಓದಿ: ಗ್ಯಾರಂಟಿ ಯೋಜನೆ ಬಗ್ಗೆ ಕಾಂಗ್ರೆಸ್ ಶಾಸಕರಿಂದಲೇ ಅಪಸ್ವರ


ಸೆಪ್ಟೆಂಬರ್ 23ರಂದು ಸಂಬಂಧಿಕರ ಮನೆ ಮದುವೆಗಾಗಿ ಷಹನವಾಜ್ ಕುಟುಂಬ ರಾಮನಗರಕ್ಕೆ ತೆರಳಿತ್ತು. ಇದೇ ಸಮಯಕ್ಕೆ ಕಾದು ಕುಳಿತ್ತಿದ್ದ ಈ ಕಿಲಾಡಿ ಮನೆಗೆ ನುಗ್ಗಿ 2.5 ಕೆ‌.ಜಿ ತೂಕದ ಚಿನ್ನಾಭರಣ, 8 ರಿಂದ 10 ಲಕ್ಷ ರೂ. ನಗದು ದೋಚಿ ಪರಾರಿಯಾಗಿದ್ದ. ಸೆಪ್ಟೆಂಬರ್ 25ರಂದು ರಾತ್ರಿ ಷಹನವಾಜ್ ಕುಟುಂಬ ಮನೆಗೆ ಬಂದಾಗ ಕಳ್ಳತನದ ಕೃತ್ಯ ಬಯಲಾಗಿತ್ತು. ತಕ್ಷಣ ಷಹನವಾಜ್ ತಿಲಕ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ನಂಬರ್ ಪ್ಲೇಟ್ ಬದಲಿಸಿಕೊಂಡು ದ್ವಿಚಕ್ರ ವಾಹನದಲ್ಲಿ ಬಂದು ಕೃತ್ಯ ಎಸಗಿರುವುದು ಗೊತ್ತಾಗಿತ್ತು.


ಅದರ ಜಾಡು ಹಿಡಿದು ಹೊರಟಾಗ ಆರೋಪಿ ಷಹನವಾಜ್ ಸಂಬಂಧಿಕನೇ ಕಳ್ಳ ಎಂದು ಗೊತ್ತಾಗಿತ್ತು. ಕದ್ದ ಹಣದಲ್ಲಿ ಬಹುಪಾಲು ಹಣವನ್ನು ಆರೋಪಿ ತನ್ನ ಸಾಲಗಳನ್ನು ತೀರಿಸಲು ಬಳಸಿಕೊಂಡಿದ್ದು, ಸದ್ಯ ಆತನಿಂದ 1.8 ಕೆಜಿ ಚಿನ್ನಾಭರಣ ಹಾಗೂ 74 ಸಾವಿರ ರೂ. ನಗದನ್ನು ಸೀಜ್ ಮಾಡಲಾಗಿದೆ.


ಇದನ್ನೂ ಓದಿ: ಕಾವೇರಿ ಹೋರಾಟದ ನಡುವೆ ಜನರ ಆತಂಕ ದೂರ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.