ಬೆಂಗಳೂರು: ಸಾರ್ವಜನಿಕರು ಪಾವತಿಸಿದ್ದ ನೀರಿನ ಬಿಲ್ ಹಣವನ್ನೇ ನುಂಗಿ ನೀರು ಕುಡಿದಿದ್ದ ಜಲಮಂಡಳಿಯ ಭ್ರಷ್ಟ ಅಧಿಕಾರಿಗಳ ಮೇಲೆ  ಸಸ್ಪೆಂಡ್ ಅಸ್ತ್ರ‌ ಬಳಸಿರುವ ಜಲಮಂಡಳಿ ಅಧ್ಯಕ್ಷ ಜಯರಾಮ್ ಹದಿಮೂರು ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಗ್ರಾಹಕರು ಪಾವತಿಸಿದ್ದ ಕಾವೇರಿ ನೀರಿನ ಬಿಲ್ ನ್ನ ನುಂಗಿದ್ದ ಜಲಮಂಡಳಿ ಲಂಚಬಾಕ ಅಧಿಕಾರಿಗಳು ಗ್ರಾಹಕರು ಪಾವತಿಸಿದ್ದ 5 ಕೋಟಿಗೂ ಹೆಚ್ಚು ಹಣವನ್ನು ಜಲಮಂಡಳಿಗೆ ಪಾವತಿಸದೇ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. 


ನೀರಿನ ಬಿಲ್ ಪ್ರಕರಣದಲ್ಲಿ ಬಿಲ್ ಕಲೆಕ್ಟರ್ ಗಳಿಂದ ಹಿಡಿದು ಅಧಿಕಾರಿಗಳವರೆಗೆ ಭಾರೀ ಅಕ್ರಮ ನಡೆದಿದೆ ಎಂದು ಹೇಳಲಾಗುತ್ತಿದೆ. ನೋಟ್ ಬ್ಯಾನ್ ಮತ್ತು  ಕೋವಿಡ್ ಸಂದರ್ಭದಲ್ಲಿ ಜಲಮಂಡಳಿಯು ನಗದು ಪಾವತಿಗೆ ಅವಕಾಶ ಕಲ್ಪಿಸಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಬಿಲ್ ಕಲೆಕ್ಟರ್ ಗಳು ಹಾಗೂ ಅಧಿಕಾರಿಗಳು ಮಂಡಳಿಗೆ ಕೋಟಿ ಕೋಟಿ ಹಣ ವಂಚಿಸಿದ್ದಾರೆ ಎಂದು ತಿಳಿದುಬಂದಿದೆ.


ಇದನ್ನೂ ಓದಿ- Video: ಅಪಘಾತಕ್ಕೀಡಾಗಿದ್ದ ಕಾರಿನಿಂದ ಪ್ರಯಾಣಿಕರನ್ನು ರಕ್ಷಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ


ಏನಿದು ಪ್ರಕರಣ?
2016ರಿಂದ ಗ್ರಾಹಕರು ನೀಡುವ ವಾಟರ್ ಬಿಲ್ ಬೆಂಗಳೂರು ಜಲಮಂಡಳಿಗೆ ನೀಡದೆ ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬಂದಿತ್ತು. 2016ರಿಂದ ನಿರಂತವಾಗಿ ನಡೆಯುತ್ತಿದ್ದ ನೀರಿನ ಬಿಲ್ ಕಳ್ಳಾಟ ಅಧಿಕಾರಿಗಳ ಸಹಕಾರದೊಂದಿಗೆ ಬಿಲ್‌ ಕಲೆಕ್ಟರ್ ಸೇರಿ ಇತರಿಂದ ಹಣ ದುರ್ಬಳಕೆ ಆರೋಪ ಕೇಳಿಬಂದಿತ್ತು. ಆಡಿಟ್ ನಲ್ಲಿ ಪತ್ತೆಯಾಗದಂತೆ ಹಣ ಗುಳುಂ ಮಾಡ್ತಿದ್ದ ಭ್ರಷ್ಟ ಅಧಿಕಾರಿಗಳು ಗ್ರಾಹಕರಿಂದ ನೇರವಾಗಿ ಹಣ ಪಡೆದು ಮಂಡಳಿಗೆ ಪಾವತಿಸದೇ ವಂಚಸಿದ್ದರು. ಜಲಮಂಡಳಿಯ 45  ಉಪವಿಭಾಗಗಳಲ್ಲಿ ಹಣ ದುರ್ಬಳಕೆ ಆಗಿದ್ದು, ಬೊಮ್ಮನಹಳ್ಳಿ ವಲಯದಲ್ಲಿ ಅತಿ ಹೆಚ್ಚು ಹಣ ದುರ್ಬಳಕೆ ಪತ್ತೆ ಆಗಿತ್ತು. ಈ ಸಂಬಂಧ ಹಣ ದುರುಪಯೋಗಪಡಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಜಲಮಂಡಳಿಯಿಂದ ಠಾಣೆಗೆ ದೂರು ನೀಡಲಾಗಿತ್ತು. 


ಇದಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಅಕ್ರಮ ಭೇದಿಸಲು 3 ತಂಡ ರಚನೆ ಮಾಡಿದ್ದ ಮಂಡಳಿ ಅಧ್ಯಕ್ಷ ಜಯರಾಮ್, ಆಂತರಿಕ ತನಿಖೆಯಲ್ಲಿ ಅಕ್ರಮ ಪತ್ತೆಯಾದ ಬೆನ್ನಲ್ಲೇ, ಇಂಜಿನಿಯರ್, ಕಂದಾಯ ವ್ಯವಸ್ಥಾಪಕರು, ಸಹಾಯಕರ ಕಲ್ಯಾಣ ಅಧಿಕಾರಿಗಳು ಸೇರಿದಂತೆ 13 ಭ್ರಷ್ಟ ಅಧಿಕಾರಿಗಳಿಗೆ ಗೇಟ್ ಪಾಸ್ ನೀಡಿದ್ದಾರೆ. 


ಇದನ್ನೂ ಓದಿ- ಅಳಿಯನನ್ನೇ ಸರಪಳಿಯಲ್ಲಿ ಕಟ್ಟಿ ಹಾಕಿ ಅಮಾನುಷ ಕೃತ್ಯ


ಯಾವೆಲ್ಲಾ ಅಧಿಕಾರಿಗಳು ಮಂಡಳಿಯಲ್ಲಿ ಸಸ್ಪೆಂಡ್ ಆಗಿದ್ದಾರೆ ಗೊತ್ತಾ? 
- ಭರತ್ ಕುಮಾರ್, ಸಹಾಯಕ
- ಶ್ರೀನಿವಾಸ್, ಕಾರ್ಯ ನಿರ್ವಾಹಕ ಅಭಿಯಂತರ
- ವಿಶ್ವನಾಥ್ ಕೆ. ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ
- ಸಿ. ಸೋಮಶೇಖರ್, ಹಿರಿಯ ಸಹಾಯಕ
- ನಾಗೇಂದ್ರ, ಕಾರ್ಯ ನಿರ್ವಾಹಕ ಅಭಿಯಂತರ
- ನಾಗರಾಜ್, ಕಂದಾಯ ವ್ಯವಸ್ಥಾಪಕ
- ಸಚಿನ್ ಪಾಟೀಲ್, ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ
- ರಾಮಪ್ಪ ಮಡಿವಾಳದ, ಸಹಾಯಕ
- ಸ್ನೇಹಾ. ವಿ, ಕಾರ್ಯ ನಿರ್ವಾಹಕ ಅಭಿಯಂತರ
- ಭೀಮಶಂಕರ್, ಕಂದಾಯ ವ್ಯವಸ್ಥಾಪಕ
- ಗೀತಾ.ಎಂ, ಹಿರಿಯ ಸಹಾಯಕಿ
- ಎನ್. ರುದ್ರೇಶ್, ಕಂದಾಯ ವ್ಯವಸ್ಥಾಪಕ
- ಯೋಗೇಶ್.ಎಸ್, ಸಹಾಯಕ ಕಲ್ಯಾಣ ಅಧಿಕಾರಿ


https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
Android Link - https://bit.ly/3hDyh4G