Ananth Raju Suicide : ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಅಸಲಿಯತ್ತು ಬಯಲು!
ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಪತ್ನಿ ಸುಮಾ ಹೆಸರಿಗೆ ಎರಡು ಪುಟದ ಪತ್ರ ಬರೆದು ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.
ಬೆಂಗಳೂರು : ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಅಸಲಿಯತ್ತು ಬಯಲಾಗಿದ್ದು. ಅನಂತರಾಜು ಸಾವಿಗೂಮುನ್ನ ಬರೆದಿಟ್ಟ ನೋವಿನ ಪತ್ರದ ಸೀಕ್ರೆಟ್ ಸದ್ಯ ಬಯಲಾಗಿದೆ.
ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಪತ್ನಿ ಸುಮಾ ಹೆಸರಿಗೆ ಎರಡು ಪುಟದ ಪತ್ರ ಬರೆದು ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ.
ಅನಂತರಾಜು ಕೆಆರ್ ಪುರಂನ ರೇಖಾ ಎಂಬ ಹೆಣ್ಣಿನ ಜಾಲಕ್ಕೆ ಸಿಲುಕಿ ಎಲ್ಲವನ್ನೂ ಕಳೆದುಕೊಂಡಿದ್ದೇನೆ. ಸಾಕಷ್ಟು ಹಣ ಕಳೆದುಕೊಂಡಿದ್ದೇನೆ. ಅವಳಿಂದ ಮಾನಸಿಕ ಹಿಂಸೆ ಅನುಭವಿಸಿದ್ದು ಅವಳ ಮೇಲೆ ಕಾನೂನು ಕ್ರಮ ಕೈಗೊಳ್ಳಿ ಎಂದು ಇನ್ಸ್ ಪೆಕ್ಟರ್ ಹೆಸರಿಗೆ ಪತ್ರ ಬರೆದಿದ್ದಾರೆ .
ಇದನ್ನೂ ಓದಿ : ಯುವತಿ ಮೇಲೆ ಆ್ಯಸಿಡ್ ದಾಳಿ ಪ್ರಕರಣ: ತಿರುವಣ್ಣಾಮಲೈನಲ್ಲಿ ಪೊಲೀಸರಿಂದ ಸ್ಥಳ ಮಹಜರು
ಪತ್ನಿ ಸುಮಾಗೆ ಪತ್ರ ಬರೆದಿರುವ ಅನಂತರಾಜು, ನನ್ನ ಕ್ಷಮಿಸಿಬಿಡು ನಿನಗೆ ಮೋಸ ಮಾಡಿದ್ದೇನೆ. ನಾನು ಕ್ಷಮೆ ಕೇಳಲು ಅರ್ಹನಲ್ಲ. ರೇಖಾ ಸಹವಾಸ ಮಾಡಿ ಅವಳಿಂದ ಪೋಟೋ,ವಿಡಿಯೋ ಟ್ರ್ಯಾಪ್ ಗೆ ಸಿಲುಕಿ ಬ್ಲಾಕ್ ಮೇಲ್ ಮಾಡಿಸಿಕೊಂಡು ನಿನಗೆ ಮುಖ ತೋರಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳಾದ ತೃಪ್ತಿ,ತನ್ಮಯಿ ಅಭಯ್ ನ ಚೆನ್ನಾಗಿ ನೋಡಿಕೋ ಎಂದು ತಮ್ಮ ಕೊನೆ ಪತ್ರದಲ್ಲಿ ಪತ್ನಿಗೆ ಕ್ಷಮೆ ಕೇಳಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ