Kamal Dey Found Dead In Guwahati: ಅಸ್ಸಾಂನ ಗುವಾಹಟಿಯ ಮಾಲಿಗಾಂವ್‌ನಲ್ಲಿ ಸೋಮವಾರ ಬಿಜೆಪಿ ಮುಖಂಡರೊಬ್ಬರು ಶವವಾಗಿ ಪತ್ತೆಯಾಗಿದ್ದಾರೆ. ಅವರ ಮೃತದೇಹದ ಬಳಿ ಅವರ ಸ್ಕೂಟರ್ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮೃತರನ್ನು ಬಿಜೆಪಿಯ ಜಲುಕ್ಬರಿ ಮಂಡಲ ಘಟಕದ ಅಧ್ಯಕ್ಷ ಕಮಲ್ ಡೇ(Kamal Dey) ಎಂದು ಗುರುತಿಸಲಾಗಿದೆ ಅಂತಾ ಪೊಲೀಸರು ತಿಳಿಸಿದ್ದಾರೆ. ಅವರ ಕುಟುಂಬ ಸದಸ್ಯರು ಕೊಲೆಯಾಗಿರುವ ಬಗ್ಗೆ ಶಂಕಿಸಿದ್ದಾರೆ. ಆದರೆ ಪ್ರಾಥಮಿಕ ವರದಿಯ ಪ್ರಕಾರ, ಅವರ ಸಾವು ಅಪಘಾತದಿಂದ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ!


ಕಮಲ್ ಡೇ ಅವರು ಜಲುಕ್ಬರಿಯ ಪ್ರಮುಖ ಸಾಮಾಜಿಕ ಮತ್ತು ರಾಜಕೀಯ ಕಾರ್ಯಕರ್ತರಾಗಿದ್ದರು. ಮುಖ್ಯಮಂತ್ರಿ ಹಿಮಂತ ವಿಶ್ವ ಶರ್ಮಾ ಅವರು ಜಲುಕ್ಬರಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. ಬೆಳಗಿನ ನಡಿಗೆಗೆಂದು ಹೊರಟಿದ್ದ ಜನರು ಶಂಕರ್ ನಗರ ಪ್ರದೇಶದ ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಕಮಲ್ ಡೇ ಅವರನ್ನು ಕಂಡು, ನಂತರ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಿದ್ದಾರೆ. ಆದರೆ ಅವರು ಸಾವನ್ನಪ್ಪಿದ್ದಾರೆ ಅಂತಾ ವೈದ್ಯರು ಘೋಷಿಸಿದ್ದಾರೆ. 


ಇದನ್ನೂ ಓದಿ: ಪಿಜ್ಜಾ ತಿನ್ನುವಾಗ ಮಧ್ಯದಲ್ಲಿ ಸಿಕ್ಕಿದ್ದೇನು? ಚಾಕು!  ಶಾಕಿಂಗ್ ವಿಡಿಯೋ ವೈರಲ್!


ಸಿಸಿಟಿವಿಯಲ್ಲಿ ಘಟನೆ ಸೆರೆ 


ಗುವಾಹಟಿ ಪೊಲೀಸ್ ಕಮಿಷನರ್ ಪಾರ್ಥ ಸಾರಥಿ ಮಹಾಂತ ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ. ಸಿಸಿಟಿವಿ ದೃಶ್ಯಗಳ ಪ್ರಕಾರ, ʼಸ್ಪೀಡ್ ಬ್ರೇಕರ್‌ಗೆ ಡಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಬಿಜೆಪಿ ನಾಯಕ ಸಾವನ್ನಪ್ಪಿದ್ದಾರೆ ಎಂದು ತೋರುತ್ತದೆʼ ಎಂದು ತಿಳಿಸಿದ್ದಾರೆ. ಸ್ಕೂಟರ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಕಮಲ್‌ ಡೇ ಅವರ ಸ್ಕೂಟರ್ ಸ್ಪೀಡ್ ಬ್ರೇಕರ್‌ಗೆ ಡಿಕ್ಕಿ ಹೊಡೆದಿದೆ ಎಂದು ಮಹಾಂತ ಹೇಳಿದ್ದಾರೆ.


ಭಾನುವಾರ ರಾತ್ರಿ(ಜನವರಿ ೫) 2:47ಕ್ಕೆ ನಡೆದ ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದೆ ಎಂದು ತಿಳಿಸಿದ್ದಾರೆ. ʼಪ್ರಾಥಮಿಕ ಸಾಕ್ಷ್ಯದ ಪ್ರಕಾರ, ಇದು ಅಪಘಾತದ ಪ್ರಕರಣವಾಗಿದೆ. ಆದರೆ ಅವರ ಸಾವಿನ ಬಗ್ಗೆ ಶಂಕೆ ವ್ಯಕ್ತವಾಗಿದೆ. ಹೀಗಾಗಿ ನಾವು ಎಲ್ಲಾ ಕೋನಗಳಿಂದಲೂ ತನಿಖೆಯನ್ನ ಮುಂದುವರೆಸುತ್ತೇವೆʼ ಎಂದು ಹೇಳಿದ್ದಾರೆ. 


ಇದನ್ನೂ ಓದಿ: ಸೈಬರ್ ವಂಚನೆಯಲ್ಲಿ ಆ  ವೃದ್ಧೆ ಕಳೆದುಕೊಂಡ ಹಣ ಎಷ್ಟು ಗೊತ್ತಾ? ಬರೋಬ್ಬರಿ 1.51 ಕೋಟಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.